ETV Bharat / bharat

ಮೋದಿ ವಿರುದ್ಧ ಸ್ಪರ್ಧಿಸಿ 855 ವೋಟ್‌ ಪಡೆದಿದ್ದ ಅತೀಕ್ ಅಹ್ಮದ್; ಈತನ ಮೇಲಿತ್ತು 101 ಪ್ರಕರಣ!

author img

By

Published : Apr 16, 2023, 4:41 PM IST

Updated : Apr 16, 2023, 7:11 PM IST

ಮಾಫಿಯಾ ಲೋಕದಲ್ಲಿ ಸಕ್ರಿಯನಾಗಿದ್ದು, ರಾಜಕಾರಣಿಯಾಗಿಯೂ ಬೆಳೆದು ಪ್ರಭಾವ ಬೀರಿದ್ದ ಅತೀಕ್ ಅಹ್ಮದ್​ ಹಿನ್ನೆಲೆ ಹೀಗಿದೆ..

A story of Atiq Ahmeds political and criminal background
ಅತೀಕ್ ಅಹ್ಮದ್​ ಏರಿಳಿತದ ಸ್ಟೋರಿ

ಪ್ರಯಾಗ್‌ರಾಜ್‌/ವಾರಣಾಸಿ(ಯು.ಪಿ): ಉತ್ತರ ಪ್ರದೇಶದ ಗ್ಯಾಂಗ್​ಸ್ಟರ್​ ಕಂ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ. ಮೂಲತಃ ಒಬ್ಬ ಮಾಫಿಯಾ ಡಾನ್​ ಆಗಿದ್ದ ಅತೀಕ್ ಅಹ್ಮದ್ ರಾಜಕೀಯದಲ್ಲೂ ತನ್ನ ಪ್ರಭಾವ ಬೀರಿದ್ದನು. ಸತತವಾಗಿ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿ ಮತ್ತು ಒಮ್ಮೆ ಲೋಕಸಭೆ ಚುನಾವಣೆಯಲ್ಲೂ ಗೆದ್ದು ರಾಜಕೀಯದಲ್ಲಿಯೂ ತೊಡಗಿಸಿಕೊಂಡಿದ್ದ. ಆದರೆ, ಮಾಫಿಯಾ ಡಾನ್, ಗ್ಯಾಂಗ್​ಸ್ಟರ್​ ಆಗಿ ಅತೀಕ್​ ಅಹ್ಮದ್​​ ಒಂದರ ನಂತರ ಮತ್ತೊಂದು ಎಂಬಂತೆ ಅಪರಾಧವನ್ನೂ ಮಾಡುತ್ತಲೇ ಕುಖ್ಯಾತಿ ಗಳಿಸಿದ್ದಾನೆ.

1989ರಲ್ಲಿ ರಾಜಕೀಯ ಪ್ರವೇಶಿಸಿದ್ದ ಅತೀಕ್, ಅಲಹಾಬಾದ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಗೆಲುವು ಸಾಧಿಸಿದ್ದನು. ಫುಲ್ಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕಸಭೆಗೂ ಎಂಟ್ರಿ ಕೊಟ್ಟಿದ್ದ. ಹೀಗೆ ಒಂದು ಕಾಲದಲ್ಲಿ ರಾಜಕೀಯದಲ್ಲೂ ತನ್ನ ಪ್ರಭಾವ ಉಳಿಸಿಕೊಂಡಿದ್ದ ಅತೀಕ್​ನ ರಾಜಕೀಯ ಸಂಪರ್ಕ ಎಲ್ಲರಿಗೂ ತಿಳಿದಿತ್ತು. ಅದು ಸಮಾಜವಾದಿ ಪಕ್ಷವಾಗಲೀ ಅಥವಾ ಬಹುಜನ ಸಮಾಜ ಪಕ್ಷವಾಗಲೀ... ಆ ಕಾಲಕ್ಕೆ ಪ್ರತಿಯೊಂದು ರಾಜಕೀಯ ಪಕ್ಷಗಳು ಸಹ ಯುಪಿಯ ಈ ವ್ಯಕ್ತಿಯ ಸಂಪೂರ್ಣ ಲಾಭ ಪಡೆದುಕೊಂಡಿದ್ದವು.

ಇದನ್ನೂ ಓದಿ: ಡಾನ್​ ಅತೀಕ್​ ಅಹ್ಮದ್ ಹತ್ಯೆ: ಮಾದಕ ವ್ಯಸನಿ, ನಿರುದ್ಯೋಗಿಗಳಾಗಿದ್ದ ಶೂಟರ್​ಗಳಿಂದ ಹತ್ಯೆ

ಸಮಾಜವಾದಿ ಪಕ್ಷವು ಮುಸ್ಲಿಂ ಮತಬ್ಯಾಂಕ್‌ ಸೆಳೆಯಲು ಅತೀಕ್ ಅಹ್ಮದ್‌ನನ್ನು ಸಾಕಷ್ಟು ಬಳಸಿಕೊಂಡಿತ್ತು. ಅತೀಕ್ ಮತ್ತು ಮುಲಾಯಂ ನಡುವಿನ ಸಂಬಂಧ ಕೂಡ ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಇದೆಲ್ಲದರ ನಡುವೆ ಅತೀಕ್ ರಾಜಕೀಯ ಸಂಪರ್ಕವು ಅನೇಕ ರೀತಿಯಲ್ಲೂ ಲಾಭದಾಯಕವಾಗಿ ಪರಿವರ್ತನೆಯಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ನಡೆದ ಹಲವು ಕೊಲೆಗಳು ಸೇರಿದಂತೆ ಹಲವು ದೊಡ್ಡ ವ್ಯಕ್ತಿಗಳ ಮೇಲಿನ ದಾಳಿಗಳಲ್ಲಿ ಅತೀಕ್​ ನೇರ ಸಂಪರ್ಕ ಹೊಂದಿದ್ದನು.

ಮೋದಿ ವಿರುದ್ಧ ನಾಮಪತ್ರ: 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ಆಗ ಅತೀಕ್ ಅಹ್ಮದ್​​ ತಾನು ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದನು. ಜೈಲಿನಿಂದಲೇ ನಾಮಪತ್ರವನ್ನೂ ಸಲ್ಲಿಸಿದ್ದ. ಆ ಸಮಯಕ್ಕೆ ಅತೀಕ್ ನನ್ನು ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲಿಸುತ್ತವೆ ಎಂದೇ ಭಾವಿಸಲಾಗಿತ್ತು. ಆದರೆ, ಯಾವುದೇ ಪಕ್ಷ ಕೂಡ ಬೆಂಬಲಿಸಲಿಲ್ಲ ಅಥವಾ ಚುನಾವಣೆಯಲ್ಲಿ ಕೈ ಜೋಡಿಸಲು ಹೋಗಲಿಲ್ಲ.

ಇದಾದ ಬಳಿಕ ಅತೀಕ್ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕೈ ಎತ್ತಿದ್ದರೂ, ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯಲು ಸಾಧ್ಯವಾಗಿರಲಿಲ್ಲ. ಅತೀಕ್ ನಾಮಪತ್ರ ಪುರಸ್ಕೃತಗೊಂಡು ಚುನಾವಣಾ ಆಯೋಗ ಟ್ರಕ್ ಚಿಹ್ನೆಯನ್ನು ಸಹ ಅವರಿಗೆ ನೀಡಿತ್ತು. ಇವಿಎಂನಲ್ಲೂ ಈ ಚಿಹ್ನೆ ಫೀಡ್ ಆಗಿತ್ತು. ಜೊತೆಗೆ, ಚುನಾವಣೆ ದಿನಾಂಕ ಕೂಡ ಹತ್ತಿರವಾಗಿ ಅತೀಕ್ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ನಂತರವೂ ವಾರಣಾಸಿಯಲ್ಲಿ ಮೋದಿ ವಿರುದ್ಧ 855 ಮತಗಳನ್ನು ಪಡೆದಿದ್ದನು.

ಕಂಟಕವಾದ ಪ್ರಮುಖ ಪ್ರಕರಣ​: ರಾಜಕೀಯ ಪ್ರವೇಶಕ್ಕೂ ಮುನ್ನ ಅನೇಕ ಅಪರಾಧ ಪ್ರಕರಣಗಳಲ್ಲಿ ಅತೀಕ್ ಅಹ್ಮದ್ ತೊಡಗಿಸಿಕೊಂಡಿದ್ದನು. ಅಚ್ಚರಿ ಎಂದರೆ ರಾಜಕೀಯ ಸೇರಿದ ವರ್ಷವೇ ಎಂದರೆ, 1989ರಲ್ಲಿ ಮೊದಲ ಬಾರಿಗೆ ಈತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಇದುವರೆಗೆ ಒಟ್ಟಾರೆ ಅತೀಕ್ ವಿರುದ್ಧ 101 ಪ್ರಕರಣಗಳನ್ನು ಎದುರಿಸಿದ್ದ. ಅತೀಕ್​ ಜೊತೆಗೆ ಆತನ ಸಹೋದರ ಅಶ್ರಫ್ ಕೂಡ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅತೀಕ್​ನ ಪತ್ನಿ ಶೈಸ್ತಾ ಪರ್ವೀನ್​ ಮತ್ತು ಮಕ್ಕಳ ಮೇಲೂ ಪೊಲೀಸ್​ ಪ್ರಕರಣಗಳಿವೆ.

ಇದನ್ನೂ ಓದಿ: 101 ಕೇಸ್​ ಎದುರಿಸುತ್ತಿರುವ ಮಾಫಿಯಾ ಡಾನ್​ ಅತೀಕ್​ ಅಹ್ಮದ್​: ಕಿಡ್ನಾಪ್​ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ

ಆದರೆ, ಗ್ಯಾಂಗ್​ಸ್ಟರ್​ಗೆ ಕಂಟಕವಾಗಿ ಪರಿಣಮಿಸಿದ ಪ್ರಮುಖ ಪ್ರಕರಣವೆಂದರೆ 2005ರ ಜನವರಿ 25ರಂದು ನಡೆದಿದ್ದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ. ಈ ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಪ್ರಮುಖ ಸಾಕ್ಷಿ ವಕೀಲ ಉಮೇಶ್​ ಪಾಲ್ ಆಗಿದ್ದರು. ಇದರಿಂದ ತನ್ನ ಮುಂದಿನ ವೃತ್ತಿ ಮತ್ತು ಆಕಾಂಕ್ಷೆಗಳಿಗೆ ತೊಂದರೆಯಾಗುತ್ತದೆ ಎಂದು ಅರಿತಿದ್ದ ಅತೀಕ್, ಉಮೇಶ್ ಪಾಲ್ ಅವರೊಂದಿಗೆ ಅನೇಕ ಬಾರಿ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಪ್ರಕರಣದಿಂದ ಹಿಂದೆ ಸರಿಯುವಂತೆಯೂ ಬೆದರಿಕೆವೊಡ್ಡಲಾಗಿತ್ತು. ಅಲ್ಲದೇ, 2006ರ ಫೆಬ್ರವರಿ 28ರಂದು ಉಮೇಶ್​ ಪಾಲ್​ನನ್ನು ಅಪಹರಣ ಕೂಡ ಮಾಡಲಾಗಿತ್ತು. ಪ್ರಕರಣದಲ್ಲಿ ಅತೀಕ್​ ಅಹ್ಮದ್​ ಸೇರಿದಂತೆ 11 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.

ನಿಜವಾದ ಅತೀಕ್​ ಆತಂಕ: ಭದ್ರತೆ ಕಾರಣ ಗುಜರಾತ್​ನ ಸಬರಮತಿ ಜೈಲಿನಲ್ಲಿ ಅತೀಕ್​ನನ್ನು ಇರಿಸಲಾಗಿತ್ತು. ಇದರ ನಡುವೆ ಜೈಲಿನಿಂದಲೇ ಉಮೇಶ್​ ಪಾಲ್ ಕೊಲೆಗೆ ಅತೀಕ್​ ಸಂಚು ರೂಪಿಸಿದ್ದನು. ತನ್ನ ಮಗ ಅಸದ್​ಗೆ ಹೇಳಿ 2023ರ ಫೆಬ್ರುವರಿ​ 24ರಂದು ಉಮೇಶ್​ ಪಾಲ್ ಅವರನ್ನೂ ಕೊಲೆ ಮಾಡಿಸಿದ್ದನು. ಹೀಗಾಗಿ 2006ರ ಅಪಹರಣದಲ್ಲಿ ಕೋರ್ಟ್​ನಿಂದ ತೀರ್ಪು ಪ್ರಕಟ ಮತ್ತು ಕೊಲೆ ಪ್ರಕರಣದ ವಿಚಾರಣೆಗಾಗಿ ಮಾರ್ಚ್​ 26ರಂದು ಸಬರಮತಿ ಜೈಲಿನಿಂದ ಉತ್ತರ ಪ್ರದೇಶಕ್ಕೆ ಅತೀಕ್​ನನ್ನು ಪೊಲೀಸರು ಕರೆದುಕೊಂಡು ಬಂದಿದ್ದರು. ಮಾರ್ಚ್​ 26ರಂದು ಪ್ರಯಾಗ್‌ರಾಜ್‌ ಕೋರ್ಟ್​ ಅತೀಕ್​ ಸೇರಿ ಮೂವರನ್ನು ದೋಷಿ ಎಂದು ಪ್ರಕಟಿಸಿ, ಜೀವಾವಧಿ ಶಿಕ್ಷೆಯನ್ನೂ ವಿಧಿಸಿತ್ತು. ಈ ಮೂಲಕ ತನ್ನ ವಿರುದ್ಧ ದಾಖಲಾದ 101 ಪ್ರಕರಣಗಳ ಪೈಕಿ ಮೊದಲ ಬಾರಿಗೆ ಅತೀಕ್​ ಶಿಕ್ಷೆಗೆ ಗುರಿಯಾಗಿದ್ದ.

ಇದನ್ನೂ ಓದಿ: ಭಾರಿ ಭದ್ರತೆಯೊಂದಿಗೆ ಸಾಬರಮತಿಯಿಂದ ಯುಪಿಗೆ ಕರೆತಂದ ಪೊಲೀಸರು.. ಡಾನ್​ ಅತೀಕ್​ಗೆ ಹತ್ಯೆ ಭೀತಿ

ಏಪ್ರಿಲ್​ 13ರಂದು ಅತೀಕ್​ ಮತ್ತು ಸಹೋದರ ಅಶ್ರಫ್​ರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದ ವಾಹನದ ಮೇಲೆ ದಾಳಿಗೆ ಹೊಂಚು ಹಾಕಿದ ಆರೋಪ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅತೀಕ್​ ಮಗ ಅಸದ್​ ಮತ್ತು ಶೂಟರ್​ ಗುಲಾಮ್​ನನ್ನು ಪೊಲೀಸರು ಎನ್​ಕೌಂಟರ್​ ಮಾಡಿದ್ದರು. ಇದಾದ ಎರಡು ದಿನಗಳ ಅಂತರದಲ್ಲಿ ಎಂದರೆ ಏಪ್ರಿಲ್​ 15ರ ರಾತ್ರಿ ಪತ್ರಕರ್ತರ ಸೋಗಿನಲ್ಲಿದ್ದ ಮೂವರು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಅತೀಕ್​ ಹಾಗೂ ಅಶ್ರಫ್​ ಹತ್ಯೆಯಾಗಿದ್ದಾರೆ. ಅತೀಕ್‌ನ ಇತರ ಇಬ್ಬರು ಮಕ್ಕಳು ಸದ್ಯ ವಿವಿಧ ಅಪರಾಧಗಳಲ್ಲಿ ಜೈಲಿನಲ್ಲಿದ್ದಾರೆ. ಅಸದ್ ಮಾತ್ರ ಜೈಲಿನ ಹೊರಗಿದ್ದ. ಮಾರ್ಚ್​ 26ರಂದು ಸಬರಮತಿ ಜೈಲಿನಿಂದ ಹೊರಬರುವ ಹೊತ್ತಲ್ಲಿ ಅತೀಕ್​ ನನ್ನನ್ನು ಹತ್ಯೆ ಮಾಡುವ ಯೋಜನೆ ಇದೆ ಎಂದು ಉಚ್ಛರಿಸಿದ್ದನು. ಕೊನೆಗೆ ಮಾಫಿಯಾ ಡಾನ್​​ನ ಆ ಆತಂಕ ನಿಜವಾಗಿದೆ.

ಇದನ್ನೂ ಓದಿ: ಗ್ಯಾಂಗ್​ಸ್ಟರ್​ - ರಾಜಕಾರಣಿ ಅತೀಕ್ ಅಹ್ಮದ್, ಸಹೋದರ ಅಶ್ರಫ್​ಗೆ​ ಗುಂಡಿಕ್ಕಿ ಹತ್ಯೆ

Last Updated : Apr 16, 2023, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.