ETV Bharat / bharat

ಕೊಲೆ ಮಾಡಿ ಚಿನ್ನ ದೋಚಿ ಪರಾರಿಯಾಗುತ್ತಿದ್ದ ಅಪರಾಧಿ ಬಂಧಿಸಿದ ಆರ್​ಪಿಎಫ್​! - ಕೊಲೆ ಮತ್ತು ಚಿನ್ನ ದರೋಡೆ ಅಪರಾಧಿ ಬಂಧನ

ರೈಲಿನ ಮೂಲಕ ಪರಾರಿಯಾಗುತ್ತಿದ್ದ ಕೊಲೆ, ಚಿನ್ನ ದರೋಡೆ ಅಪರಾಧಿಯನ್ನು ಪೊಲೀಸರು ಚೇಸ್​ ಮಾಡಿ ಹಿಡಿದಿರುವ ಘಟನೆ ಜಾರ್ಖಂಡ್​ನ ಗಿರಿಡಹ್​ ಜಿಲ್ಲೆಯಲ್ಲಿ ನಡೆದಿದೆ.

a murderer and robber arrested  Murder and robbery incident in giridih  ಕೊಲೆ ಮತ್ತು ಚಿನ್ನ ದರೋಡೆ ಅಪರಾಧಿ ಬಂಧನ  ಗಿರಿಡಿಹ್​ನಲ್ಲಿ ಕೊಲೆ ಮತ್ತು ಚಿನ್ನ ದರೋಡೆ ಅಪರಾಧಿ ಬಂಧನ
ಕೊಲೆ ಮಾಡಿ ಚಿನ್ನ ದೋಚಿ ಪರಾರಿಯಾಗುತ್ತಿದ್ದ ಅಪರಾಧಿ ಹಿಡಿದ ಆರ್​ಪಿಎಫ್
author img

By

Published : Jan 16, 2021, 2:41 PM IST

ಗಿರಿಡಿಹ್(ಜಾರ್ಖಂಡ್​): ಕಲ್ಕಾ ಹೌರಾ ಮೇಲ್​ ಟ್ರೈನ್​ನಲ್ಲಿ​ ಪರಾರಿಯಾಗುತ್ತಿದ್ದ ಕೊಲೆ ಮತ್ತು ಚಿನ್ನ ದರೋಡೆ ಅಪರಾಧಿಯನ್ನು ಗಿರಿಡಿಹ್ ಜಿಲ್ಲೆಯ ಹಜಾರಿಬಾಗ್ ರಸ್ತೆ ಆರ್‌ಪಿಎಫ್ ಬಂಧಿಸಿದೆ.

ಬಂಧಿತ ಅಪರಾಧಿಯಿಂದ 86 ಲಕ್ಷ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಹಜಾರಿಬಾಗ್ ರಸ್ತೆ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಖಚಿತಪಡಿಸಿದ್ದಾರೆ. ದೆಹಲಿಯ ಎಸಿಪಿ ರೋಹಿಣಿ ಅವರ ಮಾಹಿತಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಏನಿದು ಪ್ರಕರಣ

ಕಲ್ಕಾ ಹೌರಾ ಮೇಲ್ ಟ್ರೈನ್​ನಲ್ಲಿ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಂಗಾರ ದೋಚಿಕೊಂಡು ಪರಾರಿಯಾಗುತ್ತಿದ್ದ. ಈ ಬಗ್ಗೆ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಹಜಾರಿಬಾಗ್​ ನಿಲ್ದಾಣದಲ್ಲಿ ರೈಲು ನಿಲ್ಲಿಸುವಂತೆ ಒತ್ತಾಯಿಸಿದರು. ನಂತರ, ಟಿಟಿಇ ಸಹಾಯದಿಂದ ಅಪರಾಧಿಯ ತನಿಖೆ ಬೋಗಿಯಲ್ಲಿ ಪ್ರಾರಂಭಿಸಲಾಯಿತು ಮತ್ತು ಅಪರಾಧಿಯನ್ನು ಸೆರೆ ಹಿಡಿಯಲಾಯಿತು.

ಅಪರಾಧಿ ಪಶ್ಚಿಮ ಬಂಗಾಳದ ನಿವಾಸಿ

ಪಶ್ಚಿಮ ಬಂಗಾಳದ ಪೈಕರ್ ಬಿರ್ಭುಮ್ ಜಿಲ್ಲೆಯ ನಿವಾಸಿ ಪೀತು ಶೇಖ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 1 ಕೆಜಿ 800 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧಿಗಳಿಂದ ಮೊಬೈಲ್ ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೊಬ್ಬ ಪರಾರಿ

ಚೇತರಿಸಿಕೊಂಡ ಚಿನ್ನದ ಅಂದಾಜು ಮೌಲ್ಯ ಸುಮಾರು 86 ಲಕ್ಷ 40 ಸಾವಿರ ಆಗಿದೆ. ತನ್ನ ಇನ್ನೊಬ್ಬ ಸಹಚರನೊಂದಿಗೆ ಪೀತು ಶೇಖ್ ಕಲ್ಕಾ ಹೌರಾ ಮೇಲ್​ನಿಂದ ಅಸ್ಸೋಂಗೆ ತೆರಳುತ್ತಿದ್ದನು ಎಂದು ಆರೋಪಿ ತಿಳಿಸಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.