ETV Bharat / bharat

ಹಣಕ್ಕಾಗಿ ಪತ್ನಿ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ಕ್ರೂರಿ.. ಸ್ವದೇಶಕ್ಕೆ ತರಲು ಬೇಕು 30 ಲಕ್ಷ ರೂ. - ಸ್ಥಳೀಯ ಶಾಸಕಿ ಸಿ ಕೆ ಆಶಾ

ತನ್ನ ಪತ್ನಿ ಹಾಗೂ 6 ವರ್ಷದ ಮಗ ಮತ್ತು 4 ವರ್ಷದ ಮಗಳ ಜೊತೆ ಯುಕೆ ಗೆ ಬಂದು ನೆಲೆಸಿದ್ದರು. ನರ್ಸ್​ ಆಗಿರುವ ಅಂಜು ಕಳೆದ ಒಂದು ವರ್ಷದಿಂದ ಯುಕೆ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು. ಈಕೆಯ ಪತಿ ಸಾಜು ವೃತ್ತಿಯಲ್ಲಿ ಚಾಲಕನಾಗಿದ್ದ. ಆದರೆ ಸಾಜುಗೆ ಕೆಲಸ ಸಿಗದೇ ಹತಾಶನಾಗಿದ್ದ ಸಾಜು ಪತ್ನಿ ಮಕ್ಕಳನ್ನು ಕೊಲೆ ಮಾಡಿದ್ದಾನೆ.

Murdered nurse Anju and her children
ಹತ್ಯೆಗೊಳಗಾದ ನರ್ಸ್​ ಅಂಜು ಮತ್ತು ಅವರ ಮಕ್ಕಳು
author img

By

Published : Dec 17, 2022, 6:15 PM IST

Updated : Dec 17, 2022, 6:57 PM IST

ಕೊಚ್ಚಿ: ಹಣದ ಹತಾಶೆಯಿಂದ ತನ್ನ ಪತ್ನಿ ಹಾಗೂ ಪುಟ್ಟ ಮಕ್ಕಳನ್ನು ಹತೈಗೈದ ಘಟನೆ ಬ್ರಿಟನ್‌ನ ನಾರ್ಥಾಂಪ್ಟನ್‌ಶೈರ್‌ನ ಕೆಟ್ಟರಿಂಗ್ ಎಂಬ ಪಟ್ಟಣದಲ್ಲಿ ಗುರುವಾರ ನಡೆದಿದೆ. ಈಗ ಮೃತಳ ಪೋಷಕರು ದೇಹಗಳನ್ನು ಊರಿಗೆ ಕರೆಸಿಕೊಳ್ಳಬೇಕಾದರೆ, 30 ಲಕ್ಷ ನೀಡಬೇಕಾಗುತ್ತದೆ. ಹೀಗಾಗಿ ಕುಟುಂಬಸ್ಥರು ಆರ್ಥಿಕ ಸಹಾಯವನ್ನು ಕೋರಿದ್ದಾರೆ.

ಇತ್ತೀಚೆಗಷ್ಟೇ ತನ್ನ ಪತ್ನಿ ಹಾಗೂ 6 ವರ್ಷದ ಮಗ ಮತ್ತು 4 ವರ್ಷದ ಮಗಳ ಜೊತೆ ಯುಕೆ ಗೆ ಬಂದು ನೆಲೆಸಿದ್ದರು. ನರ್ಸ್​ ಆಗಿರುವ ಅಂಜು ಕಳೆದ ಒಂದು ವರ್ಷದಿಂದ ಇಂಗ್ಲೆಂಡ್​ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು. ಇವರ ಪತಿ ಸಾಜು ವೃತ್ತಿಯಲ್ಲಿ ಚಾಲಕನಾಗಿದ್ದ. ಆದರೆ, ಸಾಜುಗೆ ಕೆಲಸ ಸಿಗದೇ ಹತಾಶನಾಗಿದ್ದ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ದಂಪತಿ ನಡುವೆ ಜಗಳ ನಡೆಯುತ್ತಿದ್ದು, ಗುರುವಾರದಂದು ಜಗಳ ವಿಕೋಪಕ್ಕೆ ತಿರುಗಿ ಸ್ವಂತ ಹೆಂಡತಿ ಮಕ್ಕಳನ್ನು ಯಾವುದೇ ಕನಿಕರ ಇಲ್ಲದೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಈ ವಿಷಯವನ್ನು ಅಲ್ಲಿನ ಪೊಲೀಸರು ಅಂಜುವಿನ ಮನೆಗೆ ತಿಳಿಸಿದ್ದಾರೆ. ಸದ್ಯ ಸಾಜು ಯುಕೆ ಪೊಲೀಸರ ವಶದಲ್ಲಿದ್ದು, ಸಾಜು ವಿರುದ್ಧ ಕೊಲೆ ಆರೋಪ ಹೊರಿಸುವುದಾಗಿ ಅಂಜು ಪೋಷಕರಿಗೆ ತಿಳಿಸಿದ್ದಾರೆ. ಅಂಜು ಅವರ ಪೋಷಕರು ಈಗ ಶವಗಳನ್ನು ವೈಕೋಮ್‌ನಲ್ಲಿರುವ ಮನೆಗೆ ಮರಳಿ ತರಲು ಪ್ರಯತ್ನಿಸುತ್ತಿದ್ದಾರೆ, ಇದಕ್ಕಾಗಿ ಅವರಿಗೆ ಮೂವತ್ತು ಲಕ್ಷ ರೂಪಾಯಿಗಳು ಬೇಕಾಗುತ್ತವೆ. ಅದನ್ನು ಈ ಕುಟುಂಬದಿಂದ ಭರಿಸಲು ಅಸಾದ್ಯವಾಗಿರುತ್ತದೆ.

ಹೀಗಾಗಿ ಕಂಗಾಲಾದ ತಂದೆ "ನನಗೆ ನನ್ನ ಮಗಳು ಮತ್ತು ಮೊಮ್ಮಕ್ಕಳ ಮುಖವನ್ನು ನೋಡಬೇಕು ಮತ್ತು ಅದಕ್ಕಾಗಿ ನನಗೆ ನಿಮ್ಮ ಸಹಾಯ ಬೇಕು. ನಿಮ್ಮ ಸಹಕಾರದಿಂದ ಸಾಧ್ಯವಾಗುತ್ತದೆ ಎಂದಿದ್ದಾರೆ. ಇದೇ ವೇಳೆ, ಸ್ಥಳೀಯ ಶಾಸಕಿ ಸಿ.ಕೆ.ಆಶಾ ಈ ಸಮಸ್ಯೆಯನ್ನು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಯುಕೆ ದೇಹಗಳನ್ನು ಹಸ್ತಾಂತರಿಸುವಲ್ಲಿ ಕಠಿಣ ಕಾರ್ಯವಿಧಾನಗಳನ್ನು ಅನುಸರಿಸುತ್ತದೆ. ಹಾಗಾಗಿ ಮೃತದೇಹಗಳು ಭಾರತಕ್ಕೆ ತಲುಪಲು ಕನಿಷ್ಠ ಮೂರು ವಾರಗಳು ಬೇಕಾಗುತ್ತದೆ. ಏನೇ ಇರಲಿ ತನ್ನ ಮಕ್ಕಳು ಪತಿಯೊಂದಿಗೆ ಸುಖ ಸಂಸಾರ ಮಾಡಿ ಬದುಕಬೇಕಾಗಿದ್ದ ಮಗಳು ತನ್ನ ಮಕ್ಕಳೊಂದಿಗೆ ದೂರದ ದೇಶದಲ್ಲಿ ಹೆಣವಾಗಿರುವುದು ಅವಳ ಪೋಷಕರಿಗೆ ತುಂಬಲಾರದ ನೋವಾಗಿದೆ.

ಇದನ್ನೂ ಓದಿ:2 ವರ್ಷದ ಮಗನನ್ನು ಮಹಡಿಯಿಂದ ಕೆಳಗೆಸೆದು ತಾನೂ ಜಿಗಿದ ತಂದೆ

Last Updated : Dec 17, 2022, 6:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.