ETV Bharat / bharat

ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ಬರೋಬ್ಬರಿ 100 ಕೋಟಿ ಕಳೆದುಕೊಂಡ ಭೂಪ.. ಈತನ ಇತಿಹಾಸ ಕೇಳಿದರೆ ಬೆಚ್ಚಿಬೀಳದೇ ಇರರಿ!

author img

By

Published : Apr 17, 2023, 12:42 PM IST

ಕ್ರಿಕೆಟ್​ ಬೆಟ್ಟಿಂಗ್​ ಅನ್ನು ಮೋಜಿಗಾಗಿ ಆರಂಭಿಸಿದ ಈತ ಕಡೆಗೆ ಅದರ ಚಟಕ್ಕೆ ಬಿದ್ದು, ಕಂಪನಿಯ ಹಣವನ್ನೆಲ್ಲ ಇದಕ್ಕೆ ತಂದು ಸುರಿದಿದ್ದಾನೆ.

a-man-lost-100-crores-in-cricket-betting

ಹೈದರಾಬಾದ್​: ಜೂಜು ಅಪಾಯಕಾರಿಯಾದರೂ ಅದರ ನಶೆ ಕಡಿಮೆಯಲ್ಲ. ಇದೇ ಜೂಜಿನ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ ಲಕ್ಷವಲ್ಲ ಬರೋಬ್ಬರೀ 100 ಕೋಟಿ ರೂ ಕಳೆದು ಕೊಂಡಿರುವ ಘಟನೆ ನೆರೆಯ ರಾಜ್ಯದಿಂದ ವರದಿ ಆಗಿದೆ. ಆರಂಭದಲ್ಲಿ ಕ್ರಿಕೆಟ್​​ ಹುಚ್ಚಿನ ಮಜಾಕ್ಕೆ ಈ ಜೂಜಿನ ಮೋಡಿಗೆ ಒಳಗಾದ ಈತ ಬಳಿಕ ಅದನ್ನೇ ಚಟವನ್ನಾಗಿ ಮಾಡಿಕೊಂಡಿದ್ದ 12 ವರ್ಷದಲ್ಲಿ ಬರೋಬ್ಬರಿ 100 ಕೋಟಿ ಹಣ ಕಳೆದುಕೊಂಡಿದ್ದಾನೆ.

ಈ ಕುರಿತು ಹೈದರಾಬಾದ್​ ಪೊಲೀಸರು ಮಾಹಿತಿ ನೀಡಿದ್ದು, ಈ ಸಂಬಂಧ ಇಬ್ಬರೂ ಬುಕ್ಕಿ ಮತ್ತು ಕಲೆಕ್ಷನ್​ ಏಜೆಂಟ್​ ನನ್ನು ಬಂಧಿಸಿದ್ದಾರೆ. ನಗರದಲ್ಲಿ ದೊಡ್ಡ ಮಟ್ಟದಲ್ಲಿ ಈ ಕ್ರಿಕೆಟ್​ ಬೆಟ್ಟಿಂಗ್​ ನಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್​ಬಿ ನಗರ ಸ್ವಾಟ್​ ಪೊಲೀಸ್​ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣ ಸಂಬಂಧ ಮಾತನಾಡಿರುವ ಪೊಲೀಸರು, ಈ ಬೆಟ್ಟಿಂಗ್​ ಭಾಗಿಯಾದರ ಬಂಧನದ ಬಳಿಕ ಅವರ ವಿಚಾರಣೆ ನಡೆಸಿದಾಗ ಈ ಶಾಕಿಂಗ್​ ಮಾಹಿತಿಗಳು ಹೊರ ಬಿದ್ದಿವೆ. ಪೊಲೀಸರ ಮಾಹಿತಿ ಪ್ರಕಾರ, ನಗರದ ವನಸ್ಥಲಿಪುರಂನ ರಿಯಲ್​ ಎಸ್ಟೇಟ್​ ಉದ್ಯಮಿ ಅಶೋಕ ರೆಡ್ಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಗಳಿಕೆ ಮಾಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಆರಂಭದಲ್ಲಿ ಮಜಾಕ್ಕಾಗಿ ಈತ ಕ್ರಿಕೆಟ್​ ಬೆಟ್ಟಿಂಗ್​ ಆಡಲು ಮುಂದಾಗಿದ್ದ. ಈ ಬೆಟ್ಟಿಂಗ್​ನಲ್ಲಿ ಲಕ್ಷ ಲಕ್ಷ ದುಡ್ಡು ಕಾಣುತ್ತಿದ್ದಂತೆ ಆತ ಪದೇ ಪದೆ ಆಡುತ್ತಾ ಅದನ್ನು ದುಪ್ಪಟ್ಟು ಮಾಡಲು ಮುಂದಾದ. ಇದಾದ ಬಳಿಕ ಈ ಬೆಟ್ಟಿಂಗ್​​ ದಾಸನಾದ. ಚಟಕ್ಕೆ ಬಿದ್ದ ಮೇಲೆ ಅದರಿಂದ ಹೊರಬಾರಲು ಅಸಾಧ್ಯ ಎಂಬ ಪರಿಸ್ಥಿತಿಗೆ ಬಂದು ತಲುಪಿದ. ಎಷ್ಟೇ ನಷ್ಟ ಅನುಭವಿಸಿದರೂ, ಬೆಟ್ಟಿಂಗ್​ ಮಾತ್ರ ತೊರೆಯದೇ ಮುಂದುವರೆಸಿದ. ಇದಕ್ಕಾಗಿ ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ಗಳಿಕೆ ಮಾಡಿದ ಎಲ್ಲ ಹಣವನ್ನು ಬೆಟ್ಟಿಂಗ್​ಗೆ ತಂದು ಸುರಿದ. ಇದು ಸಾಲದಾದಾಗ ಈತ ಸಂಬಂಧಿಕರು ಮತ್ತು ಪರಿಚಯಸ್ಥರಿಂದ ಹಣ ಕೇಳಿ ತಂದು ಆಡಲು ಶುರು ಮಾಡಿದ. ಇದೇ ರೀತಿ ಆಡುತ್ತಾ ಆಡುತ್ತಾ ಈತ 12 ವರ್ಷದಲ್ಲಿ ಕಳೆದ ಹಣ ಬರೋಬ್ಬರಿ 100 ಕೋಟಿ ರೂಪಾಯಿಗಳು. ಈ ರೀತಿ ಹಣ ಕಳೆದುಕೊಂಡು ಕಂಪನಿ ನಷ್ಟ ಅನುಭವಿಸಿದ ಕಾರಣ ಇದೀಗ ತನ್ನ ಕಂಪನಿ ದಿವಾಳಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲಗಾರರ ಕಾಟ, ಕಂಪನಿ ನಷ್ಟ, ಬಿಡಿಗಾಸು ಕೈಯಲ್ಲಿ ಇಲ್ಲದ ಕಾರಣ ಈತ ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈ ವೇಳೆ ಹಣಕ್ಕಾಗಿ ಕ್ರಿಕೆಟ್​ ಬುಕ್ಕಿಯಾಗಿ ಕೆಲಸ ಮಾಡಿದ್ದಾನೆ. ಆಗಲೂ ಕೂಡ ಕ್ರಿಕೆಟ್​ ಬೆಟ್ಟಿಂಗ್​ ಚಟ ಆತನಿಂದ ದೂರವಾಗಿಲ್ಲ. ಕೋಟಿ ಕೋಟಿ ಕಳೆದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅದೇ ಕಾಯಕವನ್ನು ಮುಂದುವರೆಸಿದ್ದಾನೆ. ಇದೀಗ ಪೊಲೀಸರ ವಶಕ್ಕೆ ಸಿಕ್ಕಿ ಬಿದ್ದಿದ್ದಾನೆ ಎಂದು ರಾಚಕೊಂಡಾ ಕಮಿಷನರ್​ ಡಿಎಸ್​ ಚೌಹಾಣ್​​​ ತಿಳಿಸಿದ್ದಾರೆ.

ಇದನ್ನೂ ಓದಿ: ಡಾನ್​ ಅತೀಕ್​ ಅಹ್ಮದ್ ಹತ್ಯೆ: ಮಾದಕ ವ್ಯಸನಿ, ನಿರುದ್ಯೋಗಿಗಳಾಗಿದ್ದ ಶೂಟರ್​ಗಳಿಂದ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.