ರಾಂಪುರ: ಶಿಮ್ಲಾದ ರಾಂಪುರ ಬುಶಹರ್ ಗ್ರಾಮ ಪಂಚಾಯತ್ನ ದನ್ಸಾದ ನೋಗಿಧರ್ ಗ್ರಾಮದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ರಿಕೆಟ್ ಆಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮಹಿಳೆಯ ತಲೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಘಟನೆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಆರೋಪಿ ಮಕ್ಕಳನ್ನು ಕ್ರಿಕೆಟ್ ಆಡದಂತೆ ತಡೆಯುತ್ತಿದ್ದ: ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ ನೋಗಿಧಾರ್‌ನ ತಮೈಸು ಧಂಕ್‌ನಲ್ಲಿರುವ ಕ್ರೀಡಾ ಮೈದಾನದಲ್ಲಿ ಪ್ರಕರಣ ನಡೆದಿದೆ. ಹಲವು ವರ್ಷಗಳಿಂದ ಏರಿಯಾದ ಮಕ್ಕಳು ಕ್ರಿಕೆಟ್ ಆಡುತ್ತಾರೆ.
ಈ ಜಮೀನನ್ನು ಧಾರ್ ಗ್ರಾಮದ ನಿವಾಸಿ ರಾಮ್ ಎಂಬುವವ ಒತ್ತುವರಿ ಮಾಡಿಕೊಂಡಿದ್ದು, ಸೇವಾಕ್ ರಾಮ್ ಈ ಭೂಮಿಯಲ್ಲಿ ಮಕ್ಕಳನ್ನು ಕ್ರಿಕೆಟ್ ಆಡದಂತೆ ತಡೆದಿದ್ದ. ಈ ಹಿಂದೆಯೂ 2-3 ಬಾರಿ ಇದೇ ರೀತಿ ಮಾಡಿದ್ದನಂತೆ.
ಕೊಡಲಿಯಿಂದ ತಲೆಗೆ ಹೊಡೆದು ಹಲ್ಲೆ: ಶನಿವಾರ ಮಕ್ಕಳನ್ನು ತಡೆಯುತ್ತಿದ ಹಿನ್ನೆಲೆ ಧಾರ್ ಗ್ರಾಮದ ಮಹಿಳಾ ಮಂಡಲ ಮುಖ್ಯಸ್ಥೆ ಹಾಗೂ ಕಾರ್ಯದರ್ಶಿ ಅಲ್ಲಿಗೆ ತಲುಪಿದ್ದಾರೆ. ಆಘ ಮಹಿಳೆ ಮತ್ತು ರಾಮ್ನ ನಡುವೆ ವಾಗ್ವಾದ ಶುರುವಾಗಿದೆ. ಚರ್ಚೆ ತಾರಕಕ್ಕೇರಿದ್ದು, ಈ ನಡುವೆ ಮಹಿಳಾ ಮಂಡಳದ ಮುಖ್ಯಸ್ಥರು ಈ ಭೂಮಿ ನಿಮ್ಮದಲ್ಲ, ಮಕ್ಕಳು ಇಲ್ಲಿ ಆಟವಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಸೇವಾಕ್ ರಾಮ್ ಕೋಪಗೊಂಡು ಕೊಡಲಿಯಿಂದ ಮಹಿಳೆಯ ತಲೆಗೆ ಹೊಡೆದಿದ್ದಾನೆ. ಘಟನೆಯಲ್ಲಿ ಮಹಿಳಾ ಮಂಡಲದ ಮುಖ್ಯಸ್ಥ ರಾಮ್ ಪ್ಯಾರಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿ ದಿನೇಶ್, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದು, ಗಾಯಗೊಂಡ ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಶಿಮ್ಲಾಕ್ಕೆ ಕಳುಹಿಸಲಾಗಿದೆ.