ETV Bharat / bharat

ಈಗ್ಲೇ ಮದುವೆ ಬೇಡ ಎಂದ ಪ್ರೇಯಸಿ; 4ನೇ ಅಂತಸ್ತಿನಿಂದ ಜಿಗಿದ ಪ್ರೇಮಿ ‘ಶುಭಂ’

ಯುವತಿ ಈಗಲೇ ಮದುವೆ ಬೇಡ ಎಂದು ಹೇಳಿದ್ದಾಳೆ. ಇದರಿಂದ ಮನನೊಂದ ಪ್ರಿಯತಮ​ ಕಟ್ಟಡದ 4ನೇ ಅಂತಸ್ತಿನಲ್ಲಿ ನಿಂತು ಒಮ್ಮೆ ತನ್ನ ಬದುಕಿನ ಬಗ್ಗೆ ಯೋಚಿಸಲೇ ಇಲ್ಲ.

lover committed suicide, lover committed suicide in Balanagar, Balanagar crime news, ಈಗ್ಲೇ ಮದುವೆ ಬೇಡ ಎಂದ ಪ್ರೇಯಸಿ, ಲವರ್​ ಆತ್ಮಹತ್ಯೆಗೆ ಶರಣು, ಬಾಲನಗರದಲ್ಲಿ ಲವರ್​ ಆತ್ಮಹತ್ಯೆಗೆ ಶರಣು, ಬಾಲನಗರ ಅಪರಾಧ ಸುದ್ದಿ,
4ನೇ ಅಂತಸ್ತಿನಿಂದ ಜಿಗಿದು ಪ್ರೇಮಿ ಜೀವನ ಶುಭಂ
author img

By

Published : Jun 22, 2021, 10:58 AM IST

Updated : Jun 22, 2021, 11:44 AM IST

ಮೆಡ್ಚಲ್​(ತೆಲಂಗಾಣ): ಮದುವೆಗೆ ತರಾತುರಿ ಏಕೆ? ನನಗೀಗಲೇ ಮದುವೆ ಇಷ್ಟವಿಲ್ಲ ಎಂದು ಯುವತಿ ಹೇಳಿದ್ದಾಳೆ. ಪ್ರಿಯತಮೆಯ ನಿರ್ಧಾರದಿಂದ​ ಮನನೊಂದ ಯುವಕ ಕಟ್ಟಡ ನಾಲ್ಕನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಮೆಡ್ಚಲ್ ಜಿಲ್ಲೆಯ ಬಾಲಾನಗರದಲ್ಲಿ ನಡೆದಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೂಸಾಪೇಟಾ ನಿವಾಸಿ ಕೆ.ಶುಭಂ (27) ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಮೂರು ವರ್ಷದಿಂದ ಬಾಲನಗರದ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟಿದ್ದರಿಂದ ಕುಟುಂಬಸ್ಥರು ಕೂಡಾ ಮದುವೆಗೆ ಒಪ್ಪಿಗೆ ಸೂಚಿಸಿದ್ದರಂತೆ.

4ನೇ ಅಂತಸ್ತಿನಿಂದ ಜಿಗಿದು ಪ್ರೇಮಿ ಜೀವನ ಶುಭಂ

ಆದ್ರೆ ಈ ನಡುವೆ ಯುವಕ ಶುಭಂ ಮದುವೆಗೆ ಆತುರ ಪಡುತ್ತಿದ್ದನಂತೆ. ಆದ್ರೆ ಯುವತಿ, ನಮ್ಮ ಮನೆಯಲ್ಲಿ ಅಕ್ಕನ ಮದುವೆಯಾಗಬೇಕು. ಅಲ್ಲಿಯವರೆಗೂ ನಾನು ಮದುವೆಯಾಗೊಲ್ಲ ಎಂದು ಹೇಳುತ್ತಲೇ ಬಂದಿದ್ದಾಳೆ. ರವಿವಾರ ರಾತ್ರಿ 11 ಗಂಟೆಯ ವೇಳೆ ಶುಭಂ ಮತ್ತೊಮ್ಮೆ ಯುವತಿ ಮನೆಗೆ ತೆರಳಿ ಮದುವೆ ಬಗ್ಗೆ ಮಾತನಾಡಿದ್ದಾನೆ. ಈ ವೇಳೆ ಯುವತಿ ತನ್ನ ಅಕ್ಕನ ಮದುವೆಯಾಗುವರೆಗೂ ನಾನು ಯಾವುದೇ ಕಾರಣಕ್ಕೂ ವಿವಾಹವಾಗಲಾರೆ ಎಂದು ತನ್ನ ದೃಢ ನಿರ್ಧಾರವನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾಳೆ.

ಇದರಿಂದ ನೊಂದುಕೊಂಡ ಶುಭಂ ತನ್ನ ಪ್ರಿಯತಮೆ​ ವಾಸಿಸುತ್ತಿದ್ದ ನಾಲ್ಕಂತಸ್ತಿನ ಕಟ್ಟಡದ ಮೇಲಿಂದ ಜಿಗಿದಿದ್ದಾನೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಆತ ಅಷ್ಟರೊಳಗೆ ಕೊನೆಯುಸಿರೆಳೆದಿದ್ದ. ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆಯ ಕುರಿತಾಗಿ ಯುವಕನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಬಳಿಕ ಪೊಲೀಸರಿಗೆ ಮಾಹಿತಿ ನೀಡದೇ ಯುವಕನನ್ನು ಆಟೋದಲ್ಲಿ ಏಕೆ ಕರೆದೊಯ್ದರು? ಎಂದು ಪ್ರಶ್ನಿಸಿದ್ದಾರೆ. ಯುವತಿಯ ಕುಟುಂಬಸ್ಥರೇ ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಅನ್ನೋದು ಶುಭಂ ಪೋಷಕರ ಆರೋಪ.

Last Updated : Jun 22, 2021, 11:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.