ತಾಯಿ ಬಳಿ ತೆರಳುತ್ತಿದ್ದ ಬಾಲಕಿಗೆ ಕಾರು ಡಿಕ್ಕಿಯಾಗಿ ಸಾವು.. ಅಪಘಾತದ ಬಳಿಕವೂ ಮದ್ಯ ಸೇವಿಸಿ ದುಷ್ಟರು ಪರಾರಿ - ತೆಲಂಗಾಣ ಅಪರಾಧ ಸುದ್ದಿ
ನಿರ್ಲಕ್ಷ್ಯದ ಚಾಲನೆ- ಯಮಸ್ವರೂಪಿಯಾಗಿ ಬಂದ ಕಾರು- ತಾಯಿ ಬಳಿ ತೆರಳುತ್ತಿದ್ದ ಬಾಲಕಿ ಕಾರು ಡಿಕ್ಕಿಯಾಗಿ ಸಾವು
ಕರೀಂನಗರ(ತೆಲಂಗಾಣ): ಬಾಲಕಿ ತನ್ನ ಮನೆಯಲ್ಲಿ ಆಟವಾಡುತ್ತಿದ್ದಳು. ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ತನ್ನ ತಾಯಿ ಬಳಿಗೆ ಆಕೆ ಹೋಗುತ್ತಿದ್ದಳು. ರಸ್ತೆ ಬದಿಗೆ ತೆರಳುತ್ತಿದ್ದ ಬಾಲಕಿಗೆ ನಿಯಂತ್ರಣ ತಪ್ಪಿದ ಕಾರೊಂದು ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಬಾಲಕಿ ಹತ್ತಾರು ಅಡಿಗಳಷ್ಟು ತೂರಿಕೊಂಡು ಹೋಗಿ ನೆಲಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಚಿಗುರುಮಾಮಿಡಿ ತಾಲೂಕಿನಲ್ಲಿ ಸಂಭವಿಸಿದೆ.
ಇಂಧುರ್ತಿ ಗ್ರಾಮದ ನಿವಾಸಿ ಲೋಕಿನಿ ಜಂಪಯ್ಯ ಮತ್ತು ರಾಜೇಶ್ವರಿ ತಿಮ್ಮಾಪುರ ರಾಜೀವ್ ರಸ್ತೆ ಪಕ್ಕದ ಮನೆಯಲ್ಲಿ ವಾಸವಾಗಿದ್ದು, ಈ ದಂಪತಿಗೆ 10 ವರ್ಷದ ಮುದ್ದಾದ ಹೆಣ್ಣು ಮಗಳು ಇದ್ದಳು. ರಸ್ತೆ ಬದಿಯ ಹೋಟೆಲ್‌ನಲ್ಲಿ ತಾಯಿ ರಾಜೇಶ್ವರಿ ಕೆಲಸ ಮಾಡುತ್ತಾರೆ. ಆದ್ರೆ ಅಲ್ಲಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಓದಿ: ಕಲಬುರಗಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ.. ಮೂವರು ಯುವಕರು ದುರ್ಮರಣ
ಶುಕ್ರವಾರ ಮಧ್ಯಾಹ್ನ ಶಿವಾನಿ ತನ್ನ ತಾಯಿಯ ಕೆಲಸದ ಸ್ಥಳಕ್ಕೆ ಹೋಗುವುದಾಗಿ ಮನೆಯಿಂದ ತೆರಳುತ್ತಿದ್ದಳು. ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಂತೋಷಕುಮಾರ್ ಎಂಬ ವ್ಯಕ್ತಿ ಅತಿವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬಾಲಕಿ ಸುಮಾರು ಹತ್ತಾರು ಅಡಿಗಳಷ್ಟು ತೂರಿ ಬಿದ್ದಿದ್ದಾಳೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಗಿತ್ತು. ಆದ್ರೆ ಮಾರ್ಗಮಧ್ಯೆದಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾರಿನಲ್ಲಿದ್ದ ಮೂವರು ಪಾನಮತ್ತರಾಗಿದ್ದು, ಅಪಘಾತದ ಬಳಿಕವೂ ಸಮೀಪದ ವೈನ್ ಶಾಪ್ಗಳಿಗೆ ತೆರಳಿ ಕುಡಿದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಎಲ್‌ಎಂಡಿ ಎಸ್‌ಎಸ್‌ಐ ಪ್ರಮೋದ್‌ರೆಡ್ಡಿ ತಿಳಿಸಿದ್ದಾರೆ.