ETV Bharat / bharat

ಯುವತಿ ಅನುಮಾನಾಸ್ಪದ ಸಾವು; ಪಾದ್ರಿಗಳಿಬ್ಬರು ಸೇರಿ ತಂದೆ ವಿರುದ್ಧ ಪ್ರಕರಣ - ತಮಿಳುನಾಡು ಮೂಢನಂಬಿಕೆ ಅನುಮಾನಾಸ್ಪದ ರೀತಿಯಲ್ಲಿ ಯುವತಿ ಸಾವು

ಧರಣಿಯ ದೇಹದ ಸ್ಥಿತಿ ಹಠಾತ್ತನೆ ಕುಸಿದ ಕಾರಣ, ಆಕೆಯ ತಂದೆ ಅವಳನ್ನು ಪಾದ್ರಿಯ ಬಳಿಗೆ ಕರೆದೊಯ್ದರು. ದೇಹದ ಸ್ಥಿತಿ ಹದಗೆಡುತ್ತಿದ್ದಂತೆ, ಮತ್ತೆ, ಅವಳನ್ನು ಬೇರೆ ಪಾದ್ರಿಯ ಬಳಿಗೆ ಕರೆದೊಯ್ಯಲಾಯಿತು. ಪೂಜೆಯ ಸಮಯದಲ್ಲಿ ಪಾದ್ರಿ ಚಾಟಿ ಮತ್ತು ಕೋಲನ್ನು ಬಳಸಿ ಹೊಡೆದ ನಂತರ ಯುವತಿ ಪ್ರಜ್ಞೆ ತಪ್ಪಿದ್ದಳು.

a-girl-died-over-superstitious-beliefs-in-tamil-nadu
ಯುವತಿ ಬಲಿ
author img

By

Published : Feb 21, 2021, 6:55 PM IST

ತಮಿಳುನಾಡು : ಪಾದ್ರಿಯೊಬ್ಬರು ಚಾಟಿ ಮತ್ತು ಕೋಲಿನಿಂದ ಹೊಡೆದ ನಂತರ ಅನುಮಾನಾಸ್ಪದ ರೀತಿಯಲ್ಲಿ ಯುವತಿಯೋರ್ವಳು ಸಾವನ್ನಪ್ಪಿರುವ ಘಟನೆ ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದೆ.

ವೀರ ಸೆಲ್ವಂ ಎಂಬುವರು ತನ್ನ ಮಗಳು ಧರಣಿ ಜೊತೆ ಉಚಿಪುಲಿ ಬಳಿಯ ಕೊರವಳ್ಳಿಯಲ್ಲಿ ವಾಸವಾಗಿದ್ದರು. ಧರಣಿಯ ಆರೋಗ್ಯ ಸ್ಥಿತಿ ಹಠಾತ್ತನೆ ಕುಸಿದ ಕಾರಣ, ಆಕೆಯ ತಂದೆ ಅವಳನ್ನು ಪಾದ್ರಿಯ ಬಳಿಗೆ ಕರೆದೊಯ್ದಿದ್ದರು. ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಮತ್ತೆ ಅವಳನ್ನು ಬೇರೆ ಪಾದ್ರಿಯ ಬಳಿಗೆ ಕರೆದೊಯ್ಯಲಾಯಿತು. ಆರೋಗ್ಯ ಸರಿಪಡಿಸುವುದಾಗಿ ಹೇಳಿದ ಪಾದ್ರಿ ಪೂಜೆ ಆರಂಭಿಸಿದ್ದಾನೆ. ಪೂಜೆಯ ಸಮಯದಲ್ಲಿ ಆ ಪಾದ್ರಿ ಚಾಟಿ ಮತ್ತು ಕೋಲನ್ನು ಬಳಸಿ ಹೊಡೆದ ನಂತರ ಯುವತಿ ಪ್ರಜ್ಞೆ ತಪ್ಪಿದ್ದಳು.

ನಂತರ ಪಾದ್ರಿ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೆಲ್ವಂಗೆ ಹೇಳಿದ್ದಾನೆ. ಆಕೆಗೆ ಟೈಫಾಯಿಡ್ ಜ್ವರ ಇರುವುದು ಪತ್ತೆಯಾಗಿದೆ. ಅದರ ಹೊರತಾಗಿಯೂ, ವೀರ ಸೆಲ್ವಂ ಮಗಳನ್ನು ಮನೆಗೆ ಕರೆದೊಯ್ದಿದ್ದಾರೆ.

ಅದೇ ದಿನ ರಾತ್ರಿಯೇ ಧರಣಿ ಆರೋಗ್ಯ ವಿಪರೀತ ಬಿಗಡಾಯಿಸಿದ್ದು, ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾಳೆ. ಸದ್ಯ ಯುವತಿ ಸಾವಿನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ವೀರ ಸೆಲ್ವಂ ಮತ್ತು ಇಬ್ಬರು ಪಾದ್ರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.