ನವೀ ಮುಂಬೈ: ನವಜಾತ ಶಿಶುವನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಓರ್ವ ವೈದ್ಯ ಹಾಗೂ ಮೂವರು ಮಹಿಳೆಯರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರು ನವೀ ಮುಂಬೈನ ತಲೊಜಾ ಮೂಲದವರಾಗಿದ್ದು, ವೈದ್ಯ ಕಾಮೋಥಾದಲ್ಲಿ ಸ್ವಂತ ಕ್ಲಿನಿಕ್ ಹೊಂದಿದ್ದನು ಎಂದು ತಿಳಿದುಬಂದಿದೆ.
ಪಂಕಜ್ ಪಟೇಲ್ ಬಂಧಿತ ವೈದ್ಯನಾಗಿದ್ದು, ಕಾಮೋಥೆ ಸೆಕ್ಟರ್ 8ರಲ್ಲಿ ಕ್ಲಿನಿಕ್ ನಡೆಸುತ್ತಿದ್ದನು. ಮಗುವನ್ನು ಈ ಕ್ಲಿನಿಕ್ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿ, ವೈದ್ಯ ಹಾಗೂ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.
ಖಾಸಗಿ ನ್ಯಾಯಾಧೀಶ (private judge) ನಾಯಕ್ ಮಂಥನ್ ಪಾಟೀಲ್ ಎಂಬುವರು ಮಗುವನ್ನು ಖರೀದಿಸಲು ಆಸ್ಪತ್ರೆಗೆ ನಾಲ್ಕು ಲಕ್ಷ ರೂಪಾಯಿ ಹಣ ತೆಗೆದುಕೊಂಡು ಕ್ಲಿನಿಕ್ಗೆ ಬಂದಿದ್ದು, ಹಣ ನೀಡಿ ಮಗುವನ್ನು ಖರೀದಿಸಿ ಹೊರಗೆ ತೆರಳಿದ್ದಾರೆ. ಈ ವೇಳೆ ಹೊರಗೆ ಕಾಯುತ್ತಿದ್ದ ಪೊಲೀಸರ ತಂಡ ಮೂವರು ಮಹಿಳೆಯರು ಮತ್ತು ವೈದ್ಯರನ್ನು ಬಂಧಿಸಿದೆ.
ಇದನ್ನೂ ಓದಿ: ಜೆಕ್ ಗಣರಾಜ್ಯದ ಸೇನಾ ಮುಖ್ಯಸ್ಥರೊಂದಿಗೆ ಬಿಪಿನ್ ರಾವತ್ ಚರ್ಚೆ