ETV Bharat / bharat

15 ವರ್ಷದ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಆರೋಪಿ ಬಂಧನ - etv bharat kannada

Unnatural Sex with Student: ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.

a-career-academy-president-did-unnatural-sex-with-student-in-maharastra
15 ವರ್ಷದ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಆರೋಪಿ ಬಂಧನ
author img

By ETV Bharat Karnataka Team

Published : Sep 5, 2023, 8:44 PM IST

ಕೊಲ್ಹಾಪುರ(ಮಹಾರಾಷ್ಟ್ರ): 15 ವರ್ಷದ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ಘಟನೆ ಶಹವಾಡಿ ತಾಲೂಕಿನ ಕರಂಜೋಶಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಅಕಾಡೆಮಿಯೊಂದರ ಅಧ್ಯಕ್ಷ, ವಿದ್ಯಾರ್ಥಿಯೊಂದಿಗೆ ಅಸಹಜ ಕೃತ್ಯ ಎಸಗಿದ್ದು, ಈ ಸಂಬಂಧ ಶಾಹುವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕಾಡೆಮಿ ಅಧ್ಯಕ್ಷ ಸಂಜಯ್ ಬಲಿರಾಮ್ ಲೋಕ್ರೆ, ಕಾಲು ಮಸಾಜ್ ಮಾಡಿಸಿಕೊಳ್ಳಲು ನನ್ನನ್ನು ತನ್ನ ಕೋಣೆಗೆ ಕರೆದು ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆ ಎಸಗಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿ ಆರೋಪಿಸಿದ್ದಾನೆ.

ಬಾಲಕ ನೀಡಿದ ದೂರಿನಲ್ಲಿ ಏನಿದೆ?: ಆರೋಪಿ ಸಂಜಯ್ ಬಲಿರಾಮ್ ಲೋಕ್ರೆ ಶಾಹುವಾಡಿ ತಾಲೂಕಿನ ಕರಂಜೋಶಿ​ ಗ್ರಾಮದಲ್ಲಿರುವ ಕೆರಿಯರ್ ಅಕಾಡೆಮಿಯ ಅಧ್ಯಕ್ಷನಾಗಿದ್ದು, ವಿದ್ಯಾರ್ಥಿಗಳಿಗೆ ಸೇನಾ ನೇಮಕಾತಿ ಪೂರ್ವ ತರಬೇತಿ ನೀಡುತ್ತಿದ್ದಾನೆ. ಅನೇಕ ವಿದ್ಯಾರ್ಥಿಗಳು ಇಲ್ಲಿ ವಾಸಿಸುವ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಆಗಸ್ಟ್ 26ರಂದು ಆರೋಪಿ ವಿದ್ಯಾರ್ಥಿಯನ್ನು ತನ್ನ ಕೋಣೆಗೆ ಕರೆಸಿಕೊಂಡು ಕಾಲುಗಳಿಗೆ ಮಸಾಜ್ ಮಾಡಿಸಿಕೊಂಡ ಬಳಿಕ ವಿದ್ಯಾರ್ಥಿಯನ್ನು ತನ್ನ ಕೋಣೆಯಲ್ಲಿಯೇ ಮಲಗಲು ಹೇಳಿದ್ದಾನೆ, ಬಳಿಕ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಎಸಗಿದ್ದಾನೆ ಎಂದು ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾನೆ.

ಆರೋಪಿಯು ಸಂತ್ರಸ್ತ ವಿದ್ಯಾರ್ಥಿಯನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದ ಮತ್ತು ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಕಾರಣದಿಂದಾಗಿ ಭಯಭೀತನಾದ ವಿದ್ಯಾರ್ಥಿ ದೂರು ದಾಖಲಿಸಲು ಧೈರ್ಯ ಮಾಡಿರಲಿಲ್ಲ. ಆದರೆ ಅಂತಿಮವಾಗಿ ವಿದ್ಯಾರ್ಥಿ ಸೆಪ್ಟೆಂಬರ್​ 4ರಂದು ಶಾಹುವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಈ ಬಗ್ಗೆ ಎಸ್​​​​​​​​​​ಪಿ ಹೇಳಿದ್ದಿಷ್ಟು: ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ, ಸೆಕ್ಷನ್ 377 ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಜಯಕುಮಾರ್ ಸೂರ್ಯವಂಶಿ ಈ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ತಿಳಿಸಿದ್ದಾರೆ.

ಇದನ್ನೂ ಓದಿ: ಗನ್​ ತೋರಿಸಿ ಮಹಿಳಾ ಕಾನ್ಸ್​ಟೇಬಲ್​​​ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು

ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು, ಪಲ್ವಾಲ್ ಮಹಿಳಾ ಪೊಲೀಸ್​ ಠಾಣಾಧಿಕಾರಿ ಮತ್ತು ಒಬ್ಬ ಮಹಿಳೆ ಸೇರಿದಂತೆ 7 ಜನರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಪೊಲೀಸ್ ಅಧಿಕಾರಿ ನನ್ನ ದೂರನ್ನು ತೆಗೆದುಕೊಳ್ಳಲು ನಿರಾಕರಿಸಿ, ನಂತರ ತನ್ನನ್ನು ಬಲವಂತವಾಗಿ ಬಲ್ಲಿ ಎಂಬ ವ್ಯಕ್ತಿಯೊಂದಿಗೆ ಕಳುಹಿಸಿದ್ದಾರೆ. ಬಲ್ಲಿ ನನ್ನನ್ನು ಹೊಲದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದನು, ಅಲ್ಲಿ ನಿರಂಜನ್ ಮತ್ತು ಭೀಮ್ ಎಂಬ ವ್ಯಕ್ತಿಗಳು ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪಲ್ವಾಲ್ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೇರಿ 7 ಜನರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ, 506, 370, 120 ಬಿ, 342 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.