ಗುಂಟೂರು (ಆಂಧ್ರಪ್ರದೇಶ): ಕ್ಯಾನ್ಸರ್ನಿಂದ ಬಳಲುತ್ತಿರುವ ಶೇಖ್ ರೆಹಾಲ್ ಎಂಬ ಬಾಲಕನ ಪೊಲೀಸ್ ಆಗಬೇಕೆನ್ನುವ ಇಚ್ಛೆಯನ್ನು ಗುಂಟೂರು ಅರ್ಬನ್ ಎಸ್ಪಿ ಆರ್.ಎನ್. ಅಮ್ಮಿರಡ್ಡಿ ಈಡೇರಿಸಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿರುವ ಆ ಬಾಲಕನನ್ನು ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ ಬಾಲಕನ ಆಸೆ ಈಡೇರಿಸಿದ್ದಾರೆ. ಬಾಲಕನನ್ನು ಆತ್ಮೀಯವಾಗಿ ಸ್ವಾಗತಿಸಿ ಆತನ ಕುರಿತು ವಿಚಾರಿಸಿದ್ದಾರೆ.
ಓದಿ: ಈ ಭಿಕ್ಷುಕ ಕೋಟ್ಯಧಿಪತಿಯಂತೆ.. ಹಾಗಾದ್ರೆ ಭಿಕ್ಷೆ ಬೇಡಿದ್ಯಾಕೆ?
ಶೇಖ್ ರೆಹಾಲ್ನ ಪೋಷಕರಾದ ನೋಯೆಲ್ ಚಂದ್ ಮತ್ತು ಬೀಬಿ ನೂರ್ಜಹಾನ್ ತಮ್ಮ ಮಗುವಿನ ಆಕಾಂಕ್ಷೆಯನ್ನು ಪೂರೈಸಿದ್ದಕ್ಕಾಗಿ ಗುಂಟೂರು ಅರ್ಬನ್ ಎಸ್ಪಿಗೆ ಧನ್ಯವಾದ ಅರ್ಪಿಸಿದರು.