ETV Bharat / bharat

ಸಾಕಿನಾಕ ಅತ್ಯಾಚಾರ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ಸಾಕಿನಾಕ ಪ್ರದೇಶದಲ್ಲಿ 2021ರ ಸೆಪ್ಟೆಂಬರ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಅಪರಾಧಿಗೆ ಮುಂಬೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.

author img

By

Published : Jun 2, 2022, 9:32 PM IST

A big decision in Sakinaka rape case
ಸಾಕಿನಾಕ ಅತ್ಯಾಚಾರ ಪ್ರಕರಣ

ಮುಂಬೈ: ಮಹಾರಾಷ್ಟ್ರದ ಸಾಕಿನಾಕ ಪ್ರದೇಶದಲ್ಲಿ ಸೆಪ್ಟೆಂಬರ್ 2021ರಂದು 34 ವರ್ಷದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗೆ ಮುಂಬೈ ನ್ಯಾಯಾಲಯ ಮರಣದಂಡನೆ ಶಿಕ್ಷಿ ವಿಧಿಸಿದೆ. 45 ವರ್ಷದ ವ್ಯಕ್ತಿ, ರಸ್ತೆ ಬದಿ ನಿಲ್ಲಿಸಲಾಗಿದ್ದ ಟೆಂಪೊ ಒಂದರಲ್ಲಿ 34 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಕ್ರೂರವಾಗಿ ಆಕೆಯನ್ನು ಹತ್ಯೆ ಮಾಡಿದ್ದ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ದಿಂಡೋಶಿ) ಹೆಚ್ ಸಿ ಶೆಂಡೆ ಅವರು ಆರೋಪಿ ಮೋಹನ್ ಕಥ್ವಾರು ಚೌಹಾಣ್​​ನನ್ನು ಐಪಿಸಿ ಸೆಕ್ಷನ್ 302 (ಕೊಲೆ), 376 (ಅತ್ಯಾಚಾರ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಮೇ.30 ರಂದು ದೋಷಿ ಎಂದು ತೀರ್ಪು ನೀಡಿದ್ದರು. ಮಹಿಳೆಯನ್ನು ಟೆಂಪೊದಲ್ಲಿ ಕೂಡಿ ಹಾಕಿ ಅತ್ಯಾಚಾರ ನಡೆಸಿದ್ದ ಆರೋಪಿ, ಬಳಿಕ ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್‌ ಹಾಕಿ ಕ್ರೂರವಾಗಿ ಹಿಂಸಿಸಿದ್ದ. ಇದೊಂದು ಅಪರೂಪದ ಪ್ರಕರಣ ಎಂದು ನ್ಯಾಯಾಧೀಶರು ಹೇಳಿದ್ದರು.

ಆರೋಪಿಗೆ ಮರಣದಂಡನೆ ಶಿಕ್ಷೆಯನ್ನು ನೀಡಬೇಕೆಂದು ಸಂತ್ರಸ್ತೆ ಪರ ವಕೀಲರಾದ ಮಹೇಶ್ ಮುಳೆ ಅವರು ಕೋರುವಾಗ "ಇದು ಮಹಿಳೆ ಮೇಲೆ ನಡೆಸಿದ ಅಪರಾಧ ಮತ್ತು ಅದು ಕೂಡ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಮೇಲೆ ನಡೆಸಿದ ಅಪರಾಧವಾಗಿದೆ. ಇದು ಹೆಚ್ಚು ಗಂಭೀರವಾದ ಪ್ರಕರಣವಾಗಿದೆ ಎಂದು ಹೇಳಿದ್ದರು.

ಇದು ಮುಂಬೈನಂತಹ ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಭಯವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದರು. ಈ ಘಟನೆಯು ಸೆಪ್ಟೆಂಬರ್ 10, 2021 ರಂದು ಅಂಧೇರಿಯ ಪಶ್ಚಿಮ ಉಪನಗರದಲ್ಲಿರುವ ಕೈಗಾರಿಕಾ ಪ್ರದೇಶವಾದ ಸಾಕಿನಾಕದಲ್ಲಿ ನಡೆದಿತ್ತು.

ಇದನ್ನೂ ಓದಿ: ಜೂ.7ರಿಂದ 424 ಗಣ್ಯರಿಗೆ ಭದ್ರತೆ ಮರು ನಿಯೋಜನೆ: ಹೈಕೋರ್ಟ್‌ಗೆ ಪಂಜಾಬ್ ಸರ್ಕಾರದ ವರದಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.