ETV Bharat / bharat

13ನೇ ವಯಸ್ಸಿಗೆ 56 ಸ್ಟಾರ್ಟ್​​ ಅಪ್​​ ಕಂಪನಿಗಳ CEO; ದಿನಕ್ಕೆ 17 ರಿಂದ 18 ಗಂಟೆ ಕೆಲಸ ಮಾಡುವ ಸೂರ್ಯಾಂಶ್​! - ಬಿಹಾರದ ಮುಜಾಫರ್​ನಗರ

10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಯೋರ್ವ 56 ಸ್ಟಾರ್ಟ್​ ಅಪ್ ಕಂಪನಿಗಳ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾನೆ.

Etv BharatA 13 year old boy of Bihar is the CEO

author img

By

Published : Aug 2, 2022, 5:05 PM IST

ಮುಜಾಫರ್​ಪುರ(ಬಿಹಾರ): ಸಾಧನೆ ಮಾಡಬೇಕೆಂಬ ಛಲ, ಹುಮ್ಮಸ್ಸು ಇದ್ದರೆ ಯಾವ ವಯಸ್ಸಿನಲ್ಲಾದರೂ ಸಾಧಿಸಬಹುದು. ಈಗಾಗಲೇ ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಇದೀಗ ನಾವು ಹೇಳಹೊರಟಿರುವ ಸ್ಟೋರಿಯೂ ಸಹ ಅಂತಹ ಸಾಧಕನಿಗೆ ಸೇರಿದ್ದಾಗಿದೆ. ಇಲ್ಲೊಬ್ಬ ಕೇವಲ 13ನೇ ವಯಸ್ಸಿನಲ್ಲಿ ಬರೋಬ್ಬರಿ 56 ಸ್ಟಾರ್ಟ್​ ಅಪ್ ಕಂಪನಿಗಳು ಸಿಇಒ ಆಗಿ ಕೆಲಸ ಮಾಡ್ತಿದ್ದಾನೆ ಅಂದ್ರೆ ನಂಬ್ತೀರಾ?.

ಬಿಹಾರದ ಮುಜಾಫರ್​ಪುರದ ಸೂರ್ಯಾಂಶ್ ಕುಮಾರ್​ ಕೇವಲ 13ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಕೇವಲ ಒಂದು ವರ್ಷದಲ್ಲಿ ಇಷ್ಟೊಂದು ಸ್ಟಾರ್ಟ್​​ ಅಪ್ ಕಂಪನಿ ಹುಟ್ಟುಹಾಕುವ ಮೂಲಕ ತಮ್ಮ ಪೋಷಕರ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ಜಿಲ್ಲೆಯ ಕತ್ರಾ ಬ್ಲಾಕ್‌ನ ಅಮ್ಮಾ ಗ್ರಾಮದಲ್ಲಿ ವಾಸವಾಗಿರುವ ಸೂರ್ಯಾಂಶ್ ಒಂಬತ್ತನೇ ತರಗತಿಯಲ್ಲಿದ್ದಾಗ ಮೊದಲ ಕಂಪನಿ ಆರಂಭಿಸಿದ್ದಾರೆ. ಇದೀಗ 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದು, 56 ಕಂಪನಿಗಳ ಸಿಇಒ ಆಗಿ ಕೆಲಸ ಮಾಡ್ತಿದ್ದಾರೆ. ದಿನಕ್ಕೆ 17 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುವ ಇವರು ವಿಶ್ವದ ಅತ್ಯಂತ ಕಿರಿಯ ಸಿಇಒ ಕೂಡಾ ಹೌದು.

13ನೇ ವಯಸ್ಸಿಗೆ 56 ಸ್ಟಾರ್ಟ್​​ ಅಪ್​​ ಕಂಪನಿಗಳ CEO..

ಈ ಆಲೋಚನೆ ಬಂದಿದ್ದು ಹೇಗೆ?: ಆನ್​ಲೈನ್​​ನಲ್ಲಿ ಕೆಲವೊಂದು ವಸ್ತುಗಳನ್ನು ಹುಡುಕುತ್ತಿದ್ದಾಗ ಕಂಪನಿ ತೆರೆಯಬೇಕು ಎಂಬ ಆಲೋಚನೆ ಬಂತು. ಇದಕ್ಕೆ ಸಂಬಂಧಿಸಿದಂತೆ ತಂದೆಯ ಮುಂದೆ ಹೇಳಿಕೊಂಡೆ. ನನಗೆ ಅವರು ಪ್ರೋತ್ಸಾಹ ನೀಡಿದರು. ಆರ್ಡರ್ ಮಾಡುವ ಯಾವುದೇ ಸರಕು 30 ನಿಮಿಷದೊಳಗೆ ಜನರ ಮನೆಗಳಿಗೆ ತಲುಪಿಸುವುದು ಇದರ ಉದ್ದೇಶ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಅನಾಹುತ; ಇಂಡಿಗೋ ಚಕ್ರದಡಿ ಸಿಲುಕಿದ ಕಾರು!

17ರಿಂದ 18 ಗಂಟೆಗಳ ಕಾಲ ಕೆಲಸ: ಸೂರ್ಯಾಂಶ್ ಸದ್ಯ ಕಾಂಟ್ರ್ಯಾಕ್ಟ್​ ಪ್ರೈವೇಟ್ ಲಿಮಿಟೆಡ್​​ನಲ್ಲಿ 56 ಸ್ಟಾರ್ಟ್​ ಅಪ್​ ಕಂಪನಿಗಳಿವೆ. ಇದರ ಜೊತೆಗೆ ಶಾದಿಕರೋ ಡಾಟ್​ ಕಾಮ್ ಹೆಸರಿನ ಮತ್ತೊಂದು ಕಂಪನಿ ಹೊಂದಿದ್ದಾರೆ. ಈ ಕಂಪನಿ ಜೀವನ ಸಂಗಾತಿ ಆಯ್ಕೆ ಮಾಡಲು ಜನರಿಗೆ ಸಹಾಯ ಮಾಡುತ್ತದೆ. ಇದೀಗ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಮಂತ್ರ ಫೈ ಕಂಪನಿ ಆರಂಭಿಸಲಿದ್ದಾರೆ. ಈ ಸಮಯದಲ್ಲಿ ತಮ್ಮ ತರಗತಿಗೆ ಸಂಬಂಧಿಸಿದಂತೆ ಅಧ್ಯಯನ ಸಹ ಮಾಡುತ್ತಾರೆ. ಇದರ ಜೊತೆಗೆ ಇತರೆ ಐದು ಸಹ-ಸಂಸ್ಥಾಪಕರಿದ್ದಾರೆ.

56 ಕಂಪನಿ ಹೊಂದಿರುವ ಕಾರಣ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಆದರೆ, ಅವರಿಗೆ ಶಾಲೆಯಿಂದ ಸಂಪೂರ್ಣವಾದ ಬೆಂಬಲ ಸಿಗುತ್ತಿದೆ. ಇಷ್ಟೆಲ್ಲ ಕಂಪನಿ ಆರಂಭಿಸಿರುವ ಅವರಿಗೆ ಯಾವುದೇ ಕಂಪನಿಯಿಂದ ಆದಾಯ ಬರುತ್ತಿಲ್ಲ. ಆದರೆ, ಎಲ್ಲವೂ ಸರಿಯಾಗಿ ನಡೆದರೆ ಶೀಘ್ರದಲ್ಲೇ ಆದಾಯ ಗಳಿಕೆ ಮಾಡಲು ಪ್ರಾರಂಭಿಸುತ್ತಾರೆ. ಸೂರ್ಯಾಂಶ್​ ತಂದೆ ಎನ್​ಜಿಒ ನಡೆಸುತ್ತಿದ್ದು, ವಿಶ್ವಸಂಸ್ಥೆ ಜೊತೆ ಸಹಭಾಗಿತ್ವ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.