ನವದೆಹಲಿ: ರಾಷ್ಟ್ರ ರಾಜಧಾನಿಯ ಎಎಪಿ ಸರ್ಕಾರ ಮತ್ತು ದೆಹಲಿ ಗವರ್ನರ್ ನಡುವೆ ಮತ್ತೊಂದು ಹಂತದ ಸಂಘರ್ಷ ಆರಂಭವಾಗಿದೆ. ಆಮ್ ಆದ್ಮಿ ಪಕ್ಷವು ಸರ್ಕಾರಿ ಜಾಹೀರಾತುಗಳೆಂದು ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದ್ದು, ಇದರ 97 ಕೋಟಿ ರೂಪಾಯಿ ಬಿಲ್ ಅನ್ನು ಆಮ್ ಆದ್ಮಿ ಪಕ್ಷದಿಂದ ವಸೂಲು ಮಾಡುವಂತೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
2015 ರ ಸುಪ್ರೀಂ ಕೋರ್ಟ್ ಆದೇಶಗಳು, 2016 ರ ದೆಹಲಿ ಹೈಕೋರ್ಟ್ ಆದೇಶ ಮತ್ತು 2016 ರ CCRGA ಆದೇಶವನ್ನು ಆಪ್ ಸರ್ಕಾರ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ದೆಹಲಿ ಎಲ್‌ಜಿ ಮತ್ತು ಅಧಿಕಾರದಲ್ಲಿರುವ ಎಎಪಿ ಸರ್ಕಾರದ ನಡುವಿನ ಹೋರಾಟ ಹೊಸದೇನಲ್ಲ. ಇದು ಮಾಜಿ ಎಲ್‌ಜಿ ಅನಿಲ್ ಬೈಜಾಲ್ ಅವರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಶಾಸಕಾಂಗದ ಕಲಾಪಕ್ಕೆ ಅಡ್ಡಿ ಮಾಡಲಾಗುತ್ತಿದೆ ಎಂದು ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ ಆಟ ಹಾಳು ಮಾಡಿದ್ದು ಆಪ್: ಪಿ. ಚಿದಂಬರಂ