ETV Bharat / bharat

ಡ್ರಗ್ಸ್ ದಂಧೆಗೆ ಕಡಿವಾಣ: ಸಮನ್ವಯತೆ ಸಾಧಿಸಲು ಏಳು ರಾಜ್ಯಗಳ ಪೊಲೀಸರ ಮಹತ್ವದ ಸಭೆ - ಏಳು ರಾಜ್ಯಗಳ ಪೊಲೀಸರ ಮಹತ್ವದ ಸಭೆ

ಡ್ರಗ್ಸ್ ದಂಧೆ ನಿಯಂತ್ರಣಕ್ಕಾಗಿ ಪಂಜಾಬ್, ಹರಿಯಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿಯ ಪೊಲೀಸ್​ ಉನ್ನತ ಅಧಿಕಾರಿಗಳು ಒಟ್ಟುಗೂಡಿ ಮಹತ್ವದ ಸಭೆ ಜರುಗಿಸಿದ್ದಾರೆ.

7-states-police-officers-meeting-in-chandigarh-on-curb-drug-smuggling
ಡ್ರಗ್ಸ್ ದಂಧೆಗೆ ಕಡಿವಾಣ: ಸಮನ್ವಯತೆ ಸಾಧಿಸಲು ಏಳು ರಾಜ್ಯಗಳ ಪೊಲೀಸರ ಮಹತ್ವದ ಸಭೆ
author img

By

Published : Mar 2, 2023, 9:15 PM IST

ಚಂಡೀಗಢ (ಪಂಜಾಬ್​): ಮಾದಕವಸ್ತು ಕಳ್ಳಸಾಗಣೆ ಕಡಿವಾಣಕ್ಕೆ ಸಂಬಂಧಿಸಿದಂತೆ ಏಳು ರಾಜ್ಯಗಳ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳು ಚಂಡೀಗಢದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಅಕ್ರಮ ಡ್ರಗ್ಸ್​ ನಿಯಂತ್ರಣಕ್ಕೆ ಪರಸ್ಪರ ಸಹಕಾರದ ಬಗ್ಗೆ ಪೊಲೀಸರು ಚರ್ಚೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಅಧಿಕಾರಿಗಳನ್ನೊಳಗೊಂಡ ಕಾರ್ಯಕಾರಿ ತಂಡ ರಚನೆಗೂ ತೀರ್ಮಾನಿಸಲಾಗಿದೆ.

ದೇಶದಲ್ಲಿ, ಅದರಲ್ಲೂ ಉತ್ತರ ಭಾರತದಲ್ಲಿ ಮಾದಕವಸ್ತು ಕಳ್ಳಸಾಗಣೆ ಅಧಿಕವಾಗಿದೆ. ಗಡಿಯಾಚೆಗಿನ ಡ್ರಗ್ಸ್​ ಕೂಡ ವ್ಯಾಪಕವಾಗಿ ಪೂರೈಕೆ ಆಗುತ್ತಿದೆ. ಆದ್ದರಿಂದ ಪಂಜಾಬ್​ ಮತ್ತು ಹರಿಯಾಣ ಉಭಯ ರಾಜ್ಯಗಳ ರಾಜಧಾನಿಯಾದ ಚಂಡೀಗಢದಲ್ಲಿ ಗುರುವಾರ ಪ್ರಮುಖ ಏಳು ರಾಜ್ಯಗಳ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಇದರಲ್ಲಿ ಪಂಜಾಬ್, ಹರಿಯಾಣ ಸೇರಿದಂತೆ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ಚಂಡೀಗಢ, ಹರಿಯಾಣ ಮತ್ತು ಉತ್ತರಾಖಂಡದ ಡಿಜಿಪಿಗಳು ಖುದ್ದಾಗಿ ಈ ಸಭೆಯಲ್ಲಿ ಭಾಗಿಯಾದರೆ, ಹಿಮಾಚಲ ಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು. ಇಡೀ ಸಭೆಯಲ್ಲಿ ಮಾದಕ ವಸ್ತುಗಳಿಗೆ ಕಡಿವಾಣ ಹಾಕುವ ಕುರಿತು ಮತ್ತು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮಾದಕ ದ್ರವ್ಯ ಸಾಗಣೆ ತಡೆಯುವ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು.

ಸಮನ್ವಯತೆಯೇ ಪ್ರಮುಖ ಅಂಶ: ಅಷ್ಟೇ ಅಲ್ಲ, ಈ ಸಭೆಯಲ್ಲಿ ಮಾದಕವಸ್ತು ಕಳ್ಳಸಾಗಣೆ ತಡೆಗೆ ಆಯಾ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ವೇಳೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಗುಂಪು ರಚಿಸಬೇಕು. ಈ ಮೂಲಕ ಪರಸ್ಪರ ನಿರಂತರ ಸಂಪರ್ಕದಲ್ಲಿ ಎಲ್ಲ ರಾಜ್ಯಗಳ ಅಧಿಕಾರಿಗಳು ಇರಬೇಕು. ಈ ಗುಂಪಿನಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಳ್ಳಬೇಕೆಂಬ ನಿರ್ಣಯವನ್ನು ಉನ್ನತ ಅಧಿಕಾರಿಗಳ ತೆಗೆದುಕೊಂಡರು.

ಇದರಿಂದ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಕ್ಕೆ ಬಂದರು. ಜೊತೆಗೆ ಮುಂದಿನ ಸಭೆಯಲ್ಲಿ ಪೊಲೀಸ್​ ಇಲಾಖೆಯ ಅಧಿಕಾರಿಗಳೊಂದಿಗೆ ಇತರ ಇಲಾಖೆ ಅಧಿಕಾರಿಗಳು ಭಾಗವಹಿಸುವಂತೆ ನೋಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಕಾರಾಗೃಹ ಇಲಾಖೆಯ ಅಧಿಕಾರಿಗಳು, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಅಧಿಕಾರಿಗಳನ್ನು ಸೇರಿಸಲು ತೀರ್ಮಾನಿಸಲಾಯಿತು. ಗಂಪಿನಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನವನ್ನೂ ಸೇರ್ಪಡೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಹಣದ ದೊಡ್ಡ ವಹಿವಾಟು: ಡ್ರಗ್ಸ್ ದಂಧೆಯಲ್ಲಿ ಹಣದ ದೊಡ್ಡ ವಹಿವಾಟು ನಡೆಯುತ್ತಿದೆ ಎಂದು ಹರಿಯಾಣದ ಡಿಜಿಪಿ ಪಿ.ಕೆ.ಅಗರ್ವಾಲ್ ಹೇಳಿದರು. ಹಿಮಾಚಲ ಪ್ರದೇಶದಲ್ಲಿ ಹಲವು ಕೆಲ ಔಷಧ ಕಂಪನಿಗಳು ಈ ಮಾದಕವಸ್ತು ತಯಾರಿಕೆ ವ್ಯವಹಾರ ನಡೆಸುತ್ತಿವೆ ಎಂದು ಆ ರಾಜ್ಯದ ಹಿರಿಯ ಅಧಿಕಾರಿ ಕಳವಳ ವ್ಯಕ್ತಪಡಿಸಿದರು. ಪಂಜಾಬ್ ಅಂತಾರಾಷ್ಟ್ರೀಯ ಗಡಿಯೊಂದಿಗೆ ಬಹಳ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇದರ ಲಾಭ ಪಡೆದು ಸ್ಮಗ್ಲರ್‌ಗಳು ಡ್ರೋನ್‌ಗಳ ಮೂಲಕ ಗಡಿಯಾಚೆಗಿನ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಎಸ್‌ಎಫ್ ಜೊತೆಗೂಡಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಪಂಜಾಬ್​ನ ಉನ್ನತ ಅಧಿಕಾರಿ ತಿಳಿಸಿದರು.

ಇದನ್ನೂ ಓದಿ: ಗಡಿಯಾಚೆಗಿನ ಡ್ರಗ್ಸ್​ ದಂಧೆಯ ಕಿಂಗ್​ ಪಿನ್​ಗಳ ಸೆರೆ: 10 ಕೆಜಿ ಹೆರಾಯಿನ್, 20 ಲಕ್ಷದ ಅಮೆರಿಕನ್ ಡ್ರೋನ್ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.