ETV Bharat / bharat

'ಆಕ್ಸಿಜನ್​ಗಾಗಿ ಆಪರೇಷನ್​ ಸಮುದ್ರ ಸೇತು 2'... ಭಾರತೀಯ ನೌಕಾಪಡೆಯಿಂದ ಕಾರ್ಯಾಚರಣೆ

author img

By

Published : May 1, 2021, 7:54 PM IST

ಡೆಡ್ಲಿ ವೈರಸ್ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಇದೀಗ ವಿದೇಶದಿಂದ ಆಮ್ಲಜನಕ ತೆಗೆದುಕೊಂಡು ಬರಲು ನೌಕಾಪಡೆ ಸಿದ್ಧಗೊಂಡಿದೆ. ​

Samudra Setu II
Samudra Setu II

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಎಲ್ಲೆ ಮೀರಿದ್ದು, ಪ್ರತಿದಿನ ಲಕ್ಷಾಂತರ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಕಾರಣ ಬಹುತೇಕ ಎಲ್ಲ ರಾಜ್ಯಗಳಲ್ಲಿ ಆಕ್ಸಿಜನ್​ ಸಮಸ್ಯೆ ಉಂಟಾಗಿದೆ.

ಇದೀಗ ವಿದೇಶಗಳಿಂದ ಆಕ್ಸಿಜನ್​ ತರುವ ಉದ್ದೇಶದಿಂದ ಭಾರತೀಯ ನೌಕಾಪಡೆ ಆಪರೇಷನ್​ ಸಮುದ್ರ ಸೇತು 2 ಕಾರ್ಯಾಚರಣೆ ಆರಂಭಿಸಿದೆ.

'ಆಕ್ಸಿಜನ್​ಗಾಗಿ ಆಪರೇಷನ್​ ಸಮುದ್ರ ಸೇತು 2'

ಏಳು ಭಾರತೀಯ ನೌಕಾ ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್​, ತಬಾರ್​, ತ್ರಿಕಾಂಡ್​, ಜಲಶ್ವಾ ಮತ್ತು ಐರಾವತ್​ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ. ಮೊದಲ ಹಂತದಲ್ಲಿ ಬಹ್ರೈನ್​, ಸಿಂಗಪುರ ಮತ್ತು ಥಾಯ್ಲೆಂಡ್​ಗಳಿಂದ ಆಮ್ಲಜನಕ ತರಲು ನೌಕೆಗಳು ತೆರಳಲಿವೆ. ದೇಶದಲ್ಲಿ ಉಂಟಾಗಿರುವ ಆಮ್ಲಜನಕ ಸಮಸ್ಯೆ ಸರಿದೂಗಿಸುವ ಉದ್ದೇಶದಿಂದ ಆಪರೇಷನ್​ ಸಮುದ್ರ ಸೇತು-2 ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ನೌಕಾಪಡೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆಪರೇಷನ್​ ಸಮುದ್ರ ಸೇತು ಕಳೆದ ವರ್ಷ ಪ್ರಾರಂಭಗೊಂಡಿದ್ದು, ಕೋವಿಡ್ ಸಮಯದಲ್ಲಿ ನೆರೆಯ ದೇಶಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 4,000 ಭಾರತೀಯ ನಾಗರಿಕರನ್ನ ಯಶಸ್ವಿಯಾಗಿ ಭಾರತಕ್ಕೆ ವಾಪಸ್​ ಕರೆತರಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.