ನವದೆಹಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದರು ಹಾಗೂ ಶಾಸಕರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ)ಯಲ್ಲಿ 56 ಮೊಕದ್ದಮೆಗಳು ದಾಖಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಎರಡು ಕೇಸ್ ಸಹ ಸೇರಿವೆ.
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಂಪಿ ಮತ್ತು ಎಂಎಲ್ಎಗಳ ವಿರುದ್ಧದ ಸಿಬಿಐ ಕೇಸ್ಗಳ ಕುರಿತಾದ ಮಾಹಿತಿಯನ್ನು ಲೋಕಸಭೆಗೆ ನೀಡಿದ್ದು, 2017ರಿಂದ 2022ರ ಅಕ್ಟೋಬರ್ 31ರವರೆಗೆ ದಾಖಲಾದ ಪ್ರಕರಣಗಳ ಮಾಹಿತಿ ಬಹಿರಂಗ ಪಡಿಸಿದೆ. ಒಟ್ಟಾರೆ 56 ಕೇಸ್ಗಳ ಪೈಕಿ ಈಗಾಗಲೇ 22 ಕೇಸ್ಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
-
56 cases were registered by CBI against MLAs and MPs from 2017 to 2022 (up to 31.10.2022) out of which chargesheet were filed in 22 cases: Department of Personnel & Training (DoPT) in Lok Sabha pic.twitter.com/fRnKrfnR4l
— ANI (@ANI) December 7, 2022 " class="align-text-top noRightClick twitterSection" data="
">56 cases were registered by CBI against MLAs and MPs from 2017 to 2022 (up to 31.10.2022) out of which chargesheet were filed in 22 cases: Department of Personnel & Training (DoPT) in Lok Sabha pic.twitter.com/fRnKrfnR4l
— ANI (@ANI) December 7, 202256 cases were registered by CBI against MLAs and MPs from 2017 to 2022 (up to 31.10.2022) out of which chargesheet were filed in 22 cases: Department of Personnel & Training (DoPT) in Lok Sabha pic.twitter.com/fRnKrfnR4l
— ANI (@ANI) December 7, 2022
ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಎಂದರೆ ಹತ್ತು ಕೇಸ್ಗಳನ್ನು ಸಿಬಿಐ ದಾಖಲಿಸಿದೆ. ಉತ್ತರ ಪ್ರದೇಶ, ಕೇರಳ ತಲಾ 6, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ತಲಾ 5, ತಮಿಳುನಾಡು 4, ದೆಹಲಿ, ಮಣಿಪುರ, ಬಿಹಾರ ತಲಾ 3, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ ತಲಾ 2 ಹಾಗೂ ಹರಿಯಾಣ, ಛತ್ತೀಸ್ಗಢ, ಮೇಘಾಲಯ, ಉತ್ತರಾಖಂಡ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪದಲ್ಲಿ ತಲಾ ಒಂದು ಸಿಬಿಐ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಸಂಸತ್ ಅಧಿವೇಶನ ಫಲಪ್ರದವಾಗಲು ಸಹಕರಿಸಿ: ಪ್ರಧಾನಿ ಮನವಿ