ETV Bharat / bharat

ಬಟ್ಟೆ ತೊಳೆಯಲು ಹೋಗಿದ್ದ ಐವರು ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಸಾವು

author img

By

Published : Jul 14, 2021, 4:46 PM IST

ಸ್ಥಳೀಯರು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಎಲ್ಲರ ಮೃತದೇಹಗಳನ್ನು ಕಲ್ಯಾಣಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪೊನ್ನೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..

5 women, including 3 girls died by drowning in the temple pool
ಬಟ್ಟೆ ತೊಳೆಯಲು ಹೋಗಿದ್ದ ಐವರು ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಸಾವು

ತಿರುವಳ್ಳುರ್, ತಮಿಳುನಾಡು : ಬಟ್ಟೆ ತೊಳೆಯಲು ಬಂದು ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಮೂವರು ಬಾಲಕಿಯರು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಳ್ಳುರ್‌ನಲ್ಲಿ ನಡೆದಿದೆ.

ತಿರುವಳ್ಳುರ್​ನ ನ್ಯೂ ಗುಮ್ಮಿಡಿಪೂಂದಿಯ ಸೀತಾಮ್ಮಾಳ್ ರಸ್ತೆಯಲ್ಲಿರುವ ದೇವಾಲಯದ ಬಳಿ ಈ ಘಟನೆ ನಡೆದಿದೆ. ಜೀವಿತಾ (14), ನರ್ಮದಾ (11) ಹಾಗೂ ಅಶ್ವಿತಾ(15) ಎಂಬ ಬಾಲಕಿಯರು ಸಾವನ್ನಪ್ಪಿದ್ರೇ, ಜ್ಯೋತಿಲಕ್ಷ್ಮಿ(30) ಮತ್ತು ಸುಮತಿ (35) ಎಂಬ ಮಹಿಳೆಯರೂ ಮೃತಪಟ್ಟಿದ್ದಾರೆ.

ದೇವಸ್ಥಾನದ ಕಲ್ಯಾಣಿಯಲ್ಲಿ ಅವಘಡ

ಇವರೆಲ್ಲಾ ಬಟ್ಟೆ ತೊಳೆಯಲು ತೆರಳಿದ್ದರು. ಆಟವಾಡುತ್ತಾ ಮೂವರೂ ಬಾಲಕಿಯರು ಕಲ್ಯಾಣಿಯಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಸುಮತಿ ಮತ್ತು ಜ್ಯೋತಿ ಲಕ್ಷ್ಮಿ ಅವರನ್ನೆಲ್ಲ ರಕ್ಷಿಸಲು ತೆರಳಿದ್ದರು. ಅವರೂ ಕೂಡ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಪಾಕ್‌ ಬಸ್ ಸ್ಫೋಟದಲ್ಲಿ 9 ಚೀನಿ ಪ್ರಜೆಗಳು ಸೇರಿ 13 ಸಾವು: 'ಭಯೋತ್ಪಾದಕ ದಾಳಿ' ಎಂದ ಚೀನಾ

ಸ್ಥಳೀಯರು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಎಲ್ಲರ ಮೃತದೇಹಗಳನ್ನು ಕಲ್ಯಾಣಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪೊನ್ನೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.