ನಾಸಿಕ್ (ಮಹಾರಾಷ್ಟ್ರ): ಇಲ್ಲಿನ ಯೆಯೋಲಾ ತಾಲೂಕಿನ ರಾಜಪುರ ಗ್ರಾಮದಲ್ಲಿ ಒಂದು ವಾರದಲ್ಲಿ ಕೊರೊನಾ ವೈರಸ್‌ನಿಂದಾಗಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದು, ಸುತ್ತಮುತ್ತಲಿನ ಜನ ಆತಂಕಗೊಂಡಿದ್ದಾರೆ.
ಮೃತರನ್ನು ಮಲನ್‌ಬಾಯಿ ಜಾಧವ್, ಅವರ ಪುತ್ರ ಅರುಣ್ ಜಾಧವ್, ಇಬ್ಬರು ಪುತ್ರಿಯರಾದ ಶೋಭಾ ಸಾದಿವೇವ್ ಮತ್ತು ಛಾಯಾ ವಾಘ್ ಮತ್ತು ಮೊಮ್ಮಗ ಅಮಿತ್ ಜಾಧವ್ ಎಂದು ಗುರುತಿಸಲಾಗಿದೆ.
ಮಲನ್‌ಬಾಯಿ ಜಾಧವ್ ಅವರು ರಾಜಪುರದಲ್ಲಿ ಧಾನ್ಯದ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಳ್ಳಲು ಮುಂಬೈನಿಂದ ರಾಜಪುರಕ್ಕೆ ಬಂದಿದ್ದರು.
ಮರುದಿನ, ಅರುಣ್ ಜಾಧವ್ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರ ನಂತರ ಕುಟುಂಬದ ಇತರ ಸದಸ್ಯರು ಸೋಂಕಿಗೆ ಒಳಗಾಗಲು ಪ್ರಾರಂಭಿಸಿದರು.
ಒಂದು ವಾರದೊಳಗೆ ಕುಟುಂಬದ ಐದು ಸದಸ್ಯರು ಸಾವನ್ನಪ್ಪಿದ್ದು, ಮೃತರು ಅಮಿತ್ ಜಾಧವ್ ಅವರ ಪತ್ನಿ, ಮಗು ಮತ್ತು ಅವರ ದೈಹಿಕ ಅಂಗವಿಕಲ ಸಹೋದರನನ್ನು ಅಗಲಿದ್ದಾರೆ. ಅಮಿತ್ ಕುಟುಂಬದ ಅಧಾರ ಸ್ಥಂಬವಾಗಿದ್ದರು. ಅವರ ಅಕಾಲಿಕ ನಿಧನವು ಕುಟುಂಬದ ಉಳಿದ ಸದಸ್ಯರನ್ನು ಅನಾಥರನ್ನಾಗಿಸಿದೆ.