ಮಲ್ಕನಗಿರಿ (ಒಡಿಶಾ): ಇಲ್ಲಿನ ಮಲ್ಕಂಗಿರ್‌ನ ಹಂತಲಗುಡ ಘಾಟ್‌ನಲ್ಲಿ ಸಿಮೆಂಟ್ ಗೊತ್ತು ಸಾಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಐವರು ಸಾವಿಗೀಡಾಗಿ, 7 ಮಂದಿ ಗಾಯಗೊಂಡ ಭೀಕರ ಘಟನೆ ಇಂದು (ನವೆಂಬರ್ 25) ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಾಭಿಮಾನ್ ಅಂಚಲ್ ಪ್ರದೇಶದ ಹಂತಲಗುಡ ಘಾಟ್‌ನಲ್ಲಿ ಸಿಮೆಂಟ್ ಚೀಲಗಳನ್ನು ತುಂಬಿಕೊಂಡಿದ್ದ ಟ್ರಕ್ 12 ಮಂದಿ ಕಾರ್ಮಿಕರೊಂದಿಗೆ ಚಿತ್ರಕೊಂಡದಿಂದ ಜೋಡಂಬಕ್ಕೆ ತೆರಳುತ್ತಿತ್ತು. ಈ ವೇಳೆ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ 12 ಮಂದಿಯ ಮೇಲೆ ಸಿಮೆಂಟ್ ಚೀಲಗಳು ಉರುಳಿ ಬಿದ್ದಿವೆ. ಚೀಲಗಳಡಿ ಸಿಲುಕಿದ 5 ಮಂದಿ ಸಾವಿಗೀಡಾಗಿದ್ದಾರೆ.
ಇದನ್ನು ಕಂಡ ಸ್ಥಳೀಯ ಜನರು ಮತ್ತು ಹಂತಲಗೂಡ ಭಾಗದ ಬಿಎಸ್‌ಎಫ್ ಯೋಧರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಿಮೆಂಟ್ ಚೀಲಗಳ ಅಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ, ತಕ್ಷಣವೇ ಯೋಧರ ಜೀಪಿನಲ್ಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನೈಜೀರಿಯಾ: ಆಹಾರ ಪದಾರ್ಥ ಸಾಗಿಸುತ್ತಿದ್ದ ಟ್ರಕ್ ಪಲ್ಟಿ, 25 ಮಂದಿ ಸಾವು
ಟ್ರಕ್ ಪಲ್ಟಿಯಾಗಿ 25 ಮಂದಿ ಸಾವು: ನೈಜೀರಿಯಾ ದೇಶದ ಉತ್ತರ ಭಾಗದಲ್ಲಿರುವ ನೈಜರ್ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ಈಚೆಗೆ ಸಂಭವಿಸಿತ್ತು. 200 ಜನರಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿ, 25 ಮಂದಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಟ್ರಕ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಸರಕುಗಳನ್ನು ಸಾಗಿಸುತ್ತಿದ್ದ ಕಾರಣ ಅನಾಹುತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ದೇಶದ ಆರ್ಥಿಕ ಕೇಂದ್ರವಾದ ಲಾಗೋಸ್‌ಗೆ ಆಹಾರ ಪದಾರ್ಥಗಳು ಮತ್ತು 200 ಕಾರ್ಮಿಕರೊಂದಿಗೆ ಟ್ರಕ್ ಸಂಚರಿಸುತ್ತಿತ್ತು. ಮಗಮಾ ಜಿಲ್ಲೆಯ ತಕಲಾಫಿಯಾ ಎಂಬಲ್ಲಿ ಟ್ರಕ್ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ನೈಜರ್‌ನಲ್ಲಿ ಸಂಚಾರ ಉಲ್ಲಂಘಿಸುವವರಿಗೆ ಕಠಿಣ ದಂಡ ವಿಧಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಉತ್ತಮ ರಸ್ತೆಗಳಿಲ್ಲದ ಕಾರಣ ಹಗಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸಲು ಕೆಲವು ಪ್ರಯಾಣಿಕರು ರಾತ್ರಿಯಲ್ಲಿ ಹೆಚ್ಚು ಪ್ರಯಾಣಿಸುತ್ತಾರೆ. ಈ ಕಾರಣದಿಂದ ಓವರ್‌ಲೋಡ್ ಮಾಡಿದ ಟ್ರಕ್ ಪಲ್ಟಿಯಾಗಿದೆ. ಟ್ರಕ್‌ನಲ್ಲಿದ್ದ ಜನರು ರಸ್ತೆಗಳ ಸ್ಥಿತಿ ಅಥವಾ ಅದರಲ್ಲಿರುವ ವಸ್ತುಗಳ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ನೈಜೀರಿಯಾದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್‌ನ ಸೆಕ್ಟರ್ ಕಮಾಂಡ್ ಕುಮಾರ್ ತ್ಸುಕ್ವಾಮ್ ತಿಳಿಸಿದ್ದರು.