ಕ್ಯಾಂಪ್‌ಬೆಲ್(ಅಂಡಮಾನ್) : ಭಾರತದ ದಕ್ಷಿಣದ ದ್ವೀಪ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ. ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5ರಷ್ಟು ತೀವ್ರತೆ ದಾಖಲಾಗಿದೆ.
ಕ್ಯಾಂಪ್‌ಬೆಲ್ ಕೊಲ್ಲಿಯಿಂದ ಸುಮಾರು 40 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರ (NCS- National Center for Seismology) ಮಾಹಿತಿ ನೀಡಿದೆ.
ಭೂಕಂಪನದ ನಿಖರ ಸ್ಥಳವನ್ನು ತಿಳಿಸಿರುವ ಎನ್ಸಿಎಸ್ 'ಅಕ್ಷಾಂಶ 3.30 ಮತ್ತು ರೇಖಾಂಶ 95.71ರಲ್ಲಿ ಬೆಳಗ್ಗೆ 1 ಗಂಟೆ 43 ನಿಮಿಷ 59 ಸೆಕೆಂಡ್ ವೇಳಗೆ ಭೂಕಂಪನ ಸಂಭವಿಸಿದೆ' ಎಂದು ಟ್ವೀಟ್ ಮಾಡಿದೆ. ಈವರೆಗೂ ಯಾವುದೇ ಸಾವು - ನೋವಿನ, ಹಾನಿಯ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: DRDO Data: ರಕ್ಷಣಾ ರಹಸ್ಯ ಬಹಿರಂಗ ಆರೋಪದಲ್ಲಿ ನಾಲ್ವರ ಉದ್ಯೋಗಿಗಳ ಬಂಧನ