ETV Bharat / bharat

ಉರುಳಿಬಿದ್ದ ಟ್ರ್ಯಾಕ್ಟರ್​ ಟ್ರೇಲರ್​.. ಮೂವರು ಮಹಿಳೆಯರು ಸೇರಿ ಐವರ ದುರ್ಮರಣ - ತೆಲಂಗಾಣದಲ್ಲಿ ಭೀಕರ ಅಪಘಾತ

ಟ್ರ್ಯಾಕ್ಟರ್​​​ ಟ್ರೇಲರ್​​ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ವೇಳೆ ಪಲ್ಟಿಯಾಗಿರುವ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ವರಂಗಲ್​​​​​​ನಲ್ಲಿ ನಡೆದಿದೆ.

Tractor overturns
Tractor overturns
author img

By

Published : May 19, 2022, 4:48 PM IST

ಹೈದರಾಬಾದ್​: ತೆಲಂಗಾಣದ ವರಂಗಲ್​​ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಟ್ರೇಲರ್​​ ಉರುಳಿಬಿದ್ದಿರುವ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಐವರು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಮತ್ತೆ ಐವರು ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ರ್ಯಾಕ್ಟರ್​ ಟ್ರೇಲರ್​​ನಲ್ಲಿ 10 ಜನರು ಪ್ರಯಾಣಿಸುತ್ತಿದ್ದ ವೇಳೆ ಸ್ಕಿಡ್​​ ಆಗಿ ಪಲ್ಟಿಯಾಗಿದೆ. ಪರಿಣಾಮ, ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಮತ್ತೆ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ಮಲಗಿದ್ದ 14 ಕಾರ್ಮಿಕರ ಮೇಲೆ ಹರಿದ 'ಯಮ ಸ್ವರೂಪಿ' ಲಾರಿ

ಮತ್ತೊಂದೆಡೆ ಹರಿಯಾಣದ ಕುಂಡ್ಲಿ ಮನೇಸರ್​ ಹೆದ್ದಾರಿ ಬಳಿ ಭಾರಿ ದುರಂತವೊಂದು ಸಂಭವಿಸಿದ್ದು, ರಸ್ತೆ ಬದಿಯಲ್ಲಿ ಮಲಗಿದ್ದ 14 ಜನ ಕಾರ್ಮಿಕರ ಮೇಲೆ ಲಾರಿಯೊಂದು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.