ಉತ್ತರ ಪ್ರದೇಶ(ಕಾನ್ಪುರ): ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಾಂಡುನಗರ ಶಾಖೆಯಲ್ಲಿ 42 ಲಕ್ಷ ರೂಪಾಯಿ ನೋಟುಗಳು ಕೊಳೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆರ್‌ಬಿಐನ ಲೆಕ್ಕಪರಿಶೋಧನೆಯಲ್ಲಿ ಚೆಸ್ಟ್ ಕರೆನ್ಸಿಯಲ್ಲಿ 42 ಲಕ್ಷ ರೂಪಾಯಿ ಇಳಿಕೆಯಾದ ನಂತರ ಈ ವಿಚಾರ ಬಹಿರಂಗವಾಗಿದೆ. ಬ್ರಾಂಚ್ಗೆ ಚರಂಡಿ ನೀರು ನುಗ್ಗಿದ್ದು, ನೋಟು ಕೊಳೆಯಲು ಕಾರಣ ಎನ್ನಲಾಗುತ್ತಿದೆ. ನಿರ್ಲಕ್ಷ್ಯ ತೋರಿದ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ದೇವಿ ಶಂಕರ್, ಆಶಾ ರಾಮ್, ರಾಕೇಶ್ ಕುಮಾರ್ ಮತ್ತು ಭಾಸ್ಕರ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಇದು ಇಡೀ ನಗರದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.
ಲೆಕ್ಕ ಪರಿಶೋಧನೆಯನ್ನು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ನಿರ್ವಹಿಸಿದ್ದಾರೆ. ಇದರಲ್ಲಿ ಹಣದ ಕೊರತೆ ಮರೆಮಾಚುವ ಮೂಲಕ ಕಳೆದು ಹೋದ ಹಣವನ್ನು ಎಣಿಸುವ ಕೆಲಸ ವಾರಗಟ್ಟಲೆ ನಡೆಯಿತು. ಆರಂಭದಲ್ಲಿ ಕೆಲವು ಲಕ್ಷಗಳ ಕೊರತೆಯಿತ್ತು. ಎಣಿಕೆಯ ಅಂತ್ಯದ ವೇಳೆಗೆ ಅದು 42 ಲಕ್ಷಕ್ಕೆ ತಲುಪಿತು. ಈ ಘಟನೆಯ ನಂತರ, ಬ್ಯಾಂಕ್‌ನ ಝೋನಲ್ ಆಡಿಟ್ ಮತ್ತು ವಿಜಿಲೆನ್ಸ್ ತಂಡವು ಬ್ರಾಂಚ್ ಪರಿಶೀಲನೆ ನಡೆಸಿದೆ. ಕೊನೆಗೆ 42 ಲಕ್ಷದ ಕೊರತೆ ನೀಗಿಸಲು ಬ್ಯಾಂಕ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಯಿತು.
ಹಣದ ಕೊರತೆ ಪೂರೈಸುವಂತೆ ಒತ್ತಡ: ಈ ಒತ್ತಡದಲ್ಲಿ ಕಾನ್ಪುರ ಸರ್ಕಲ್ ಹೆಡ್, ಪಾಂಡುನಗರ ಶಾಖೆಯ ಮುಖ್ಯ ವ್ಯವಸ್ಥಾಪಕ ಸರ್ವೇಶ್ ಸಿಂಗ್ ಮತ್ತು ಅಧಿಕಾರಿಗಳ ಸಂಘದ ಮಾಜಿ ನಾಯಕ, ಚೆಸ್ಟ್‌ನ ನಾಲ್ವರು ಅಧಿಕಾರಿಗಳಿಗೆ ನಿನ್ನೆ ರಾತ್ರಿಯವರೆಗೆ ವೈಯಕ್ತಿಕ ಸಾಲ ಪಡೆದು 42 ಲಕ್ಷದ ಕೊರತೆಯನ್ನು ಪೂರೈಸುವಂತೆ ಒತ್ತಡ ಹೇರಿದ್ದರು.
ನೋಟುಗಳು ಕೊಳೆತಿರುವುದು ಬೆಳಕಿಗೆ: ಕೊನೆಗೆ ಅಧಿಕಾರಿಗಳು ಸಾಲ ಪಡೆಯಲು ನಿರಾಕರಿಸಿದ್ದರಿಂದ ಗುರುವಾರ ತಡರಾತ್ರಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆದರೆ, ನೋಟುಗಳು ಕೊಳೆತಿರುವುದು ಲೆಕ್ಕ ಪರಿಶೋಧನೆಯಲ್ಲೂ ಬಯಲಿಗೆ ಬಂದಿದೆ. ದೇವಿ ಶಂಕರ್, ಆಶಾ ರಾಮ್, ರಾಕೇಶ್ ಕುಮಾರ್ ಮತ್ತು ಭಾಸ್ಕರ್ ಕುಮಾರ್ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.
ಇಲ್ಲಿನ ಪಿಎನ್‌ಬಿ ಪಾಂಡುನಗರ ಶಾಖೆಯ ಯಾವೊಬ್ಬ ಅಧಿಕಾರಿಯೂ ಈ ವಿಷಯದಲ್ಲಿ ಏನನ್ನೂ ಹೇಳಲು ಸಿದ್ಧರಿಲ್ಲ. ಅಲ್ಲದೇ, ಜಿಲ್ಲಾ ಲೀಡ್ ಮ್ಯಾನೇಜರ್ ದೀಪೇಂದ್ರ ಶುಕ್ಲಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ರಜೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಓದಿ: ಧನ್‌ಬಾದ್ ನ್ಯಾ ಉತ್ತಮ್ ಆನಂದ್ ಹತ್ಯೆ ಪ್ರಕರಣ.. ಇಂಟರ್‌ಪೋಲ್ ಸಹಾಯ ಪಡೆಯಲಿರುವ ಸಿಬಿಐ