ಬದ್ಮೇರ್( ರಾಜಸ್ಥಾನ): ವಾಟರ್ ಟ್ಯಾಂಕರ್ ಎದುರು ಹೋದ ಬಾಲಕ ವಾಹನಡಿ ಸಿಲುಕಿದರೂ ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ. ವಾಟರ್ ಟ್ಯಾಂಕರ್ಗೆ ಬಾಲಕ ಸಿಲುಕಿದ್ದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗುತ್ತಿದೆ.
ಇತರ ನಾಲ್ಕು ಮಕ್ಕಳೊಂದಿಗೆ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ರಸ್ತೆಗೆ ಓಡಿ, ನೀರಿನ ಟ್ಯಾಂಕರ್ ಅಡಿ ಬೀಳುತ್ತದೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಬಾಲಕ ಮುಂಭಾಗದ ಟೈರ್ ಅಡಿ ಬೀಳುತ್ತಿರುವುದನ್ನು ಚಾಲಕ ನೋಡಿದ ತಕ್ಷಣ, ವಾಹನವನ್ನು ನಿಲ್ಲಿಸಿದ್ದಾನೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ತೊಂದರೆ ಆಗಿಲ್ಲ. ಇಡೀ ಘಟನೆ ಹತ್ತಿರದ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.