ETV Bharat / bharat

247 ಕೋಟಿ ರೂ. ಮೌಲ್ಯದ ಹೆರಾಯಿನ್​​​ ವಶಕ್ಕೆ ಪಡೆದ ಏರ್​​​ ಇಂಟೆಲಿಜೆನ್ಸ್​​​ ಯುನಿಟ್​​ - Drug Worth Rs 247 Crore Seized

ಭರ್ಜರಿ ಕಾರ್ಯಾಚರಣೆ ನಡೆಸಿರುವ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ದಾಖಲೆಯ 247 ಕೋಟಿ ರೂ. ಮೌಲ್ಯದ ಹೆರಾಯಿನ್​ ವಶಕ್ಕೆ ಪಡೆದುಕೊಂಡಿದ್ದಾರೆ.

247 crore heroin seized
247 crore heroin seized
author img

By

Published : Dec 9, 2021, 10:28 PM IST

ಮುಂಬೈ(ಮಹಾರಾಷ್ಟ್ರ): ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​​ ಇಂಟೆಲಿಜೆನ್ಸ್​​​ ಯುನಿಟ್​​ ಮಹತ್ವದ ಕಾರ್ಯಾಚರಣೆ ನಡೆಸಿ, ಬರೋಬ್ಬರಿ 247 ಕೋಟಿ ರೂ. ಮೌಲ್ಯದ 35 ಕೆಜಿ ಹೆರಾಯಿನ್​ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ವಿದೇಶಿ ಪ್ರಜೆಗಳ ಬಳಿ ಇಷ್ಟೊಂದು ಮೌಲ್ಯದ ಡ್ರಗ್ಸ್​​ ಪತ್ತೆಯಾಗಿದೆ. ಈಗಾಗಲೇ ಅವರನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಿದೇಶದಿಂದ ಡ್ರಗ್ಸ್​ ತೆಗೆದುಕೊಂಡು ಬರುವ ಮಾಹಿತಿಯನ್ನ ರಹಸ್ಯ ಡಿಆರ್​ಐ ನೀಡಿತ್ತು. ಇದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅದರಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ವಿಮಾನ ನಿಲ್ದಾಣದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆ ಇದಾಗಿದ್ದು, ನಾಲ್ಕು ಬ್ಯಾಗ್​​​ ಮೂಲಕ ಹೆರಾಯಿನ್​ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳು ಪಾರ್ಟಿಗಳಲ್ಲಿ ಡ್ರಗ್ಸ್​ ಸರಬರಾಜು ನೀಡಲು​ ಮುಂಬೈಗೆ ಆಗಮಿಸಿದ್ದು, ಇವರು ಜಿಂಬಾಬ್ವೆ ಪ್ರಜೆಗಳೆಂದು ತಿಳಿದು ಬಂದಿದೆ. ಬಂಧಿತರನ್ನ 46 ವರ್ಷದ ವ್ಯಕ್ತಿ ಹಾಗೂ 27 ವರ್ಷದ ಮಹಿಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ವೀರಪುತ್ರರ ದುರಂತ ಸಾವು: ಪಾರ್ಥಿವ ಶರೀರದ ಅಂತಿಮ ದರ್ಶನ, ಕುಟುಂಬಸ್ಥರಿಗೆ ನಮೋ ಸಾಂತ್ವನ

ಮತ್ತೊಂದು ಪ್ರಕರಣದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಎನ್​ಸಿಬಿ ಅಧಿಕಾರಿಗಳು ದಾಖಲೆಯ 662 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಟ್ರಕ್​​ನಲ್ಲಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿರುವ ನಾರ್ಕೊಟಿಕ್​ ಡೆಪ್ಯುಟಿ ಕಮಿಷನರ್ ಸಂಜಯ್​ ಕುಮಾರ್​​ ಇಷ್ಟೊಂದು ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.