ETV Bharat / bharat

ಊರಿಗೆ ತೆರಳಲು ರಸ್ತೆ ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಹರಿದ ಟ್ರಕ್: ಮೂವರು ರೈತ ಮಹಿಳೆಯರ​ ದಾರುಣ ಸಾವು - ಟ್ರಕ್​ ಗುದ್ದಿದ ಪರಿಣಾಮ ಮೂವರು ಮಹಿಳೆಯರು ಸಾವು,

ಹರಿಯಾಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ರೈತ ಮಹಿಳೆಯರು ಸಾವನ್ನಪ್ಪಿದ್ದಾರೆ.

3 Women Killed, 3 Women Killed After Truck Hits, 3 Women Killed After Truck Hits in Haryana, Haryana crime news, ಮೂವರು ಮಹಿಳೆಯರು ಸಾವು, ಟ್ರಕ್​ ಗುದ್ದಿದ ಪರಿಣಾಮ ಮೂವರು ಮಹಿಳೆಯರು ಸಾವು, ಹರಿಯಾಣ ಅಪರಾಧ ಸುದ್ದಿ,
ಡಿವೈಡರ್ ಮೇಲೆ ಕುಳಿತ್ತಿದ್ದ ಮಹಿಳೆಯರ ಮೇಲೆ ಹರಿಸಿದ ಟ್ರಕ್​
author img

By

Published : Oct 28, 2021, 10:42 AM IST

ಬಹದ್ದೂರ್‌ಗಢ(ಹರಿಯಾಣ): ಇಲ್ಲಿನ ಝಜ್ಜರ್ ರಸ್ತೆಯಲ್ಲಿ ಡಿವೈಡರ್ ಮೇಲೆ ಆಟೋಗಾಗಿ ಕಾದು ಕುಳಿತಿದ್ದ ರೈತ ಮಹಿಳೆಯರ ಮೇಲೆ ವೇಗದೂತ ಟ್ರಕ್ ​ಹರಿದಿದ್ದು, ಮೂವರು ಸಾವನ್ನಪ್ಪಿದ್ದಾರೆ.

ರೈತ ಚಳವಳಿಯಲ್ಲಿಯೂ ತೊಡಗಿದ್ದ ಈ ಮಹಿಳೆಯರು ಬಹದ್ದೂರ್‌ಗಢದ ಬೈಪಾಸ್‌ ಬಳಿ ವಾಸವಿದ್ದರು. ಇವರು ಆಟೋ ಹಿಡಿದು ರೈಲು ನಿಲ್ದಾಣ ತೆರಳಿ ಅಲ್ಲಿಂದ ಪಂಜಾಬ್‌ಗೆ ತೆರಳಬೇಕಿತ್ತು. ಈ ಹಿನ್ನೆಲೆಯಲ್ಲಿ ಜಜ್ಜರ್ ರಸ್ತೆಯ ಡಿವೈಡರ್‌ ಮೇಲೆ ಕುಳಿತು ಆಟೋಗಾಗಿ ಕಾಯುತ್ತಿದ್ದರಂತೆ. ಇದೇ ವೇಳೆ ವೇಗವಾಗಿ ಬಂದ ಲಾರಿ ಡಿವೈಡರ್ ಮೇಲೆ ಕುಳಿತಿದ್ದ ಮಹಿಳೆಯರ ಮೇಲೆಯೇ ಹರಿದಿದೆ. ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇನ್ನೊಬ್ಬ ಮಹಿಳೆ ಬಹದ್ದೂರ್‌ಗಢದ ಸಿವಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೃತಪಟ್ಟವರು ಪಂಜಾಬ್‌ನ ಮಾನ್ಸಾ ಜಿಲ್ಲೆಯವರಾಗಿದ್ದು ಅಮರ್ಜೀತ್ ಕೌರ್(60), ಗುರ್ಮೆಲ್ ಕೌರ್ (58) ಹಾಗು ಮೆಹರ್‌ ಎಂದು ಗುರುತಿಸಲಾಗಿದೆ.

ದುರ್ಘಟನೆಯ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.