ETV Bharat / bharat

ದೇಶದ 24 ವಿಶ್ವವಿದ್ಯಾಲಯಗಳು FAKE​... ಯುಪಿಯಲ್ಲಿ ಅತಿ ಹೆಚ್ಚು, ಕರ್ನಾಟಕದಲ್ಲಿ ಎಷ್ಟು?

author img

By

Published : Aug 3, 2021, 3:27 PM IST

ವಿಶ್ವವಿದ್ಯಾಲಯ ಅನುದಾಯ ಆಯೋಗ(ಯುಜಿಸಿ) ಘೋಷಣೆ ಮಾಡಿರುವ ಪ್ರಕಾರ ದೇಶದ 24 ವಿಶ್ವವಿದ್ಯಾಲಯಗಳು ನಕಲಿ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

24 universities declared fake by ugc
24 universities declared fake by ugc

ನವದೆಹಲಿ: ದೇಶದಲ್ಲಿ ಒಟ್ಟು 24 ವಿಶ್ವವಿದ್ಯಾಲಯಗಳು ನಕಲಿ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್​ ಮಾಹಿತಿ ನೀಡಿದ್ದು, ಕರ್ನಾಟಕದಲ್ಲೂ ಒಂದು ಯೂನಿವರ್ಸಿಟಿ ಫೇಕ್​ ಎಂದು ಅವರು ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಒಂದು ವಿಶ್ವವಿದ್ಯಾಲಯ ಕೂಡ ನಕಲಿ ಎಂದು ಗೊತ್ತಾಗಿದ್ದು, ಇದರ ಬಗ್ಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸಂಪೂರ್ಣವಾದ ಮಾಹಿತಿ ಹಂಚಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 8 ವಿಶ್ವವಿದ್ಯಾಲಯಗಳು ನಕಲಿಯಾಗಿದ್ದು, ದೆಹಲಿಯಲ್ಲಿ ಏಳು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ವಿಶ್ವವಿದ್ಯಾಲಯಗಳು ಫೇಕ್​ ಎಂದು ತಿಳಿದು ಬಂದಿದ್ದು, ಯುಜಿಸಿ ಕೂಡ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಎಂದು ಧರ್ಮೇಂದ್ರ ಪ್ರಧಾನ್​ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆವೊಂದಕ್ಕೆ ಲಿಖಿತ ರೂಪದಲ್ಲಿ ಧರ್ಮೇಂದ್ರ ಪ್ರಧಾನ್​ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು, ಪೋಷಕರು, ಜನ ಸಾಮಾನ್ಯರು ಮೂಲಕ ನೀಡಿರುವ ದೂರುಗಳ ಆಧಾರದ ಮೇಲೆ 24 ವಿವಿ ನಕಲಿ ಎಂದು ಘೋಷಿಸಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ದಿನಕ್ಕೆ ವಿಶೇಷ ಅತಿಥಿಗಳಾಗಿ ಟೋಕಿಯೋ ಒಲಿಂಪಿಕ್ಸ್ ಭಾರತದ ಅಥ್ಲೀಟ್ಸ್​​ : ನಮೋ ಆಹ್ವಾನ

ಯಾವೆಲ್ಲ ವಿಶ್ವವಿದ್ಯಾಲಯಗಳು ನಕಲಿ

  • ಕರ್ನಾಟಕ: ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ
  • ವಾರಾಣಸಿ: ಸಂಸ್ಕೃತ ವಿಶ್ವವಿದ್ಯಾಲಯ; ಮಹಿಳಾ ಗ್ರಾಮ ವಿದ್ಯಾಪೀಠ
  • ಅಲಹಾಬಾದ್​: ಗಾಂಧಿ ಹಿಂದಿ ವಿದ್ಯಾಪೀಠ
  • ಅಲಹಾಬಾದ್​: ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ
  • ಕಾನ್ಪುರ್​: ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ
  • ಅಲಿಘರ್​: ಉತ್ತರ ಪ್ರದೇಶ ವಿಶ್ವವಿದ್ಯಾಲಯ
  • ಮಥುರಾ: ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ
  • ಪ್ರತಾಪಘರ್ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್
  • ದೆಹಲಿ: ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್
  • ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ ದೆಹಲಿ
  • ವೊಕೇಷನಲ್ ಯೂನಿವರ್ಸಿಟಿ ದೆಹಲಿ
  • ಎಡಿಆರ್ ಸೆಂಟ್ರಿಕ್ ಜುರಿಡಿಕಲ್ ವಿಶ್ವವಿದ್ಯಾಲಯ ದೆಹಲಿ
  • ಇಂಡಿಯನ್ ಇನ್ ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್
  • ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್
  • ಆಧ್ಯಾತ್ಮಿಕ ವಿಶ್ವವಿದ್ಯಾಲಯ (ಆಧ್ಯಾತ್ಮಿಕ ವಿಶ್ವವಿದ್ಯಾಲಯ)
  • ಕೋಲ್ಕತ್ತಾ: ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್
  • ಕೋಲ್ಕತ್ತಾದ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್
  • ರೂರ್ಕೆಲಾ: ನವಭಾರತ್ ಶಿಕ್ಷಾ ಪರಿಷತ್
  • ಉತ್ತರ ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ
  • ಉಳಿದಂತೆ ಮಹಾರಾಷ್ಟ್ರ, ಪುದುಚೇರಿ, ಕೇರಳ ಮತ್ತು ಮಹಾರಾಷ್ಟ್ರದಲ್ಲೂ ತಲಾ ಒಂದು ನಕಲಿ ವಿಶ್ವವಿದ್ಯಾಲಯವಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.