ತೊಂಡಗಿ (ಆಂಧ್ರಪ್ರದೇಶ): ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯ ತೊಂಡಗಿಯಲ್ಲಿನ ಅವಿಭಕ್ತ ಕುಟುಂಬದ 21 ಜನರಿಗೆ ಕೊರೊನಾ ದೃಢಪಟ್ಟಿದೆ. ಇವರು ಇತ್ತೀಚೆಗಷ್ಟೇ ತಿರುಮಲಕ್ಕೆ ಹೋಗಿ ಬಂದಿದ್ದರು.
ಕೆಲವರು ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಪರೀಕ್ಷೆ ನಡೆಸಲಾಗಿ ಆ ಪೈಕಿ 21 ಜನರಿಗೆ ಕೋವಿಡ್ ಪಾಸಿಟಿವ್ ಇದೆ ಎಂದು ಕಂಡುಬಂದಿದೆ.
ಭಜನೆ ಕಾರ್ಯಕ್ರಮದಲ್ಲಿ ಕುಟುಂಬದ ಜೊತೆ ಇತರ ನಾಲ್ಕು ಕುಟುಂಬಗಳು ಕೂಡ ಭಾಗವಹಿಸಿದ್ದವು. ಈ ಹಿನ್ನೆಲೆ ಈ ಎಲ್ಲಾ ಕುಟುಂಬಗಳ ಸದಸ್ಯರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.