ETV Bharat / bharat

ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಪುಂಡರಿಂದ ಕಿರುಕುಳ; ಇಬ್ಬರ ಬಂಧನ - ಕ್ರಿಕೆಟಿಗ ನಿತೀಶ್ ರಾಣಾ ಪತ್ನಿ ಸಾಚಿ ಮಾರ್ವಾ

ಕ್ರಿಕೆಟಿಗ ನಿತೀಶ್ ರಾಣಾ ಅವರ ಪತ್ನಿ ಸಾಚಿ ಮಾರ್ವಾ ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಇಬ್ಬರು ಕಿಡಿಗೇಡಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Sachi Marwa
ಸಾಚಿ ಮಾರ್ವಾಗೆ ತೊಂದರೆ ನೀಡಿದ ಆರೋಪಿಗಳಿಬ್ಬರ ಬಂಧನ
author img

By

Published : May 7, 2023, 1:03 PM IST

ನವದೆಹಲಿ: ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಕ್ರಿಕೆಟಿಗ ನಿತೀಶ್ ರಾಣಾ ಅವರ ಪತ್ನಿ ಸಾಚಿ ಮಾರ್ವಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಇಬ್ಬರು ಅಪರಿಚಿತ ಯುವಕರು ಹಿಂಬಾಲಿಸಿಕೊಂಡು ಬಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕುರಿತು ಸಾಚಿ ಮಾರ್ವಾ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆ ಮೇ 4 ರ ಗುರುವಾರ ನಡೆದಿದೆ. ಪಟೇಲ್ ನಗರದ ನಿವಾಸಿಗಳಾದ ಚೈತನಯ ಶಿವಂ (18) ಮತ್ತು ವಿವೇಕ್ (18) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ನಿತೀಶ್ ರಾಣಾ ಅವರ ಪತ್ನಿ, ಅಪರಿಚಿತರು ಹಿಂಬಾಲಿಸಿದ್ದಲ್ಲದೆ ತೊಂದರೆ ಉಂಟು ಮಾಡಿದಕ್ಕಾಗಿ ಶುಕ್ರವಾರ ಇ-ಮೇಲ್​ ಮೂಲಕ ಕೀರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಘನಶ್ಯಾಮ್ ಬನ್ಸಾಲ್ ತಿಳಿಸಿದರು.

ಸಾಚಿ ಮಾರ್ವಾ ಗುರುವಾರ ರಾತ್ರಿ 8.30 ರ ಸುಮಾರಿಗೆ ಛತ್ತರ್‌ಪುರದಿಂದ ತನ್ನ ಕಾರಿನಲ್ಲಿ ಮಾಡೆಲ್ ಟೌನ್‌ನಲ್ಲಿರುವ ಮನೆಗೆ ಹಿಂದಿರುಗುತ್ತಿದ್ದರು. ಟ್ರಾಫಿಕ್ ಸಿಗ್ನಲ್‌ ಬಳಿ​ ಕಾಯುತ್ತಿದ್ದಾಗ, ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಇವರ ಕಾರಿಗೆ ಬೈಕ್‌ ಅಡ್ಡಗಟ್ಟಿದ್ದಲ್ಲದೆ, ಕಾರಿಗೆ ತಮ್ಮ ಕೈಗಳಿಂದ ಬಡಿಯುವ ಮೂಲಕ ಆತಂಕ ಉಂಟು ಮಾಡಿದ್ದರು ಎಂದು ಡಿಸಿಪಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಾಚಿ ಮಾರ್ವಾ ತನ್ನ ಮೊಬೈಲ್‌ನಲ್ಲಿ ಆರೋಪಿಗಳ ಫೋಟೋವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು.

ನಮ್ಮ ಪೊಲೀಸರು ತಕ್ಷಣ ತನಿಖೆ ಪ್ರಾರಂಭಿಸಿದ್ದರು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಗಿತ್ತು. ಆರೋಪಿಗಳನ್ನು ಪಟೇಲ್ ನಗರದಲ್ಲಿರುವ ಅವರ ನಿವಾಸದಿಂದಲೇ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಘಟನೆ ಕುರಿತು ಇನ್ನೂ ಹೆಚ್ಚು ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಘನಶ್ಯಾಮ್ ಬನ್ಸಾಲ್ ಮಾಹಿತಿ ನೀಡಿದರು.

ಪೊಲೀಸರ ವಿರುದ್ಧ ಅಸಮಾಧಾನ: ಘಟನೆಯ ನಂತರ ನಾನು ಪೊಲೀಸರಿಗೆ ಫೋನ್​ನಲ್ಲಿ ಮಾಹಿತಿ ನೀಡಿದಾಗ, ಸುರಕ್ಷಿತವಾಗಿ ಮನೆ ತಲುಪಿದ್ದೀರಾ? ಎಂದು ಕೇಳಿದರು. ಬಳಿಕ ಹೋಗಲಿ ಬಿಡಿ ಎನ್ನುತ್ತಾ ಮುಂದಿನ ಬಾರಿ ಇದೇ ರೀತಿ ನಡೆದರೆ ನಂಬರ್​ ನೋಟ್​ ಮಾಡಿಕೊಳ್ಳುವಂತೆ ಹೇಳಿದರು. ಪೊಲೀಸರ ನಡೆಗೆ ಸಾಚಿ ಮಾರ್ವ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅನ್ಯ ಜಾತಿ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಸೊಸೆಯನ್ನೇ ಕೊಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.