ETV Bharat / bharat

ಕಾಂಪೌಂಡ್ ಹಾರಿ ಟೆರೇಸ್​​ ತಲುಪಿದ ಪ್ರಿಯಕರ: ಏಕಾಂತದಲ್ಲಿದ್ದಾಗ ದಿಢೀರ್​ ಬಂದ ಪ್ರೇಯಸಿಯ ತಾಯಿ.. ನಡೀತು ದುರಂತ - ಪ್ರಿಯಕರ ಆತ್ಮಹತ್ಯೆ

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಕಾನೂನು ಪದವಿ ವಿದ್ಯಾರ್ಥಿಯೊಬ್ಬ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಮೃತಪಟ್ಟಿದ್ದಾನೆ.

18-yr-old-youth-accidently-jumps-off-building-fearing-girlfriends-mother
ಕಾಂಪೌಂಡ್ ಹಾರಿ ಟೆರೇಸ್​ಗೆ​ ತಲುಪಿದ ಪ್ರಿಯಕರ: ಪ್ರೇಯಸಿ ಜೊತೆಗಿದ್ದಾಗ ಬಂದ ತಾಯಿ
author img

By

Published : Feb 5, 2023, 9:42 PM IST

ಚೆನ್ನೈ (ತಮಿಳುನಾಡು): ಪ್ರೇಯಸಿಯ ತಾಯಿ ಕೈಯಲ್ಲಿ ಸಿಕ್ಕಿಬೀಳುವ ಭಯದಲ್ಲಿ ಯುವಕನೋರ್ವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿರುವ ದಾರುಣ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಮೃತ ಪ್ರಿಯಕರನನ್ನು 18 ವರ್ಷದ ಸಂಜಯ್ ಎಂದು ಗುರುತಿಸಲಾಗಿದೆ. ಈತ ಕಾನೂನು ಪದವಿ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ.

ಸೇಲಂ ಸಮೀಪದ ಚಿನ್ನಾ ಕೋಲ್ಪಟ್ಟಿಯಲ್ಲಿ ನಿವಾಸಿಯಾದ ಸಂಜಯ್, ತನ್ನ ಶಾಲಾ ಹಾಗೂ ಕಾಲೇಜು ಸಹಪಾಠಿಯಾಗಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಸಂಜಯ್ ವಾಸವಿದ್ದ ಸ್ಥಳದ ಸಮೀಪವೇ ಯುವತಿ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದಳು. ಶನಿವಾರ ಬೆಳಗ್ಗೆ ಸಂಜಯ್ ತನ್ನ ಪ್ರೇಯಸಿ ವಾಸವಾಗಿದ್ದ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಪೌಂಡ್ ಹಾರಿ ಟೆರೇಸ್​ಗೆ​ ತಲುಪಿದ್ದ ಪ್ರೇಮಿ: ಸಂಜಯ್ ಮತ್ತು ಆತನ ಪ್ರೇಯಸಿ ಒಂದೇ ಪ್ರದೇಶದಲ್ಲಿ ವಾಸವಾಗಿದ್ದರು ಮತ್ತು ಇಬ್ಬರು ಮನೆಗಳು ಸಮೀಪದಲ್ಲೇ ಇದ್ದವು. ಹೀಗಾಗಿಯೇ ಶನಿವಾರ ಬೆಳಗ್ಗೆಯೇ ಪ್ರಿಯಕರ ಸಂಜಯ್​ ತನ್ನ ಪ್ರೇಯಸಿಯನ್ನು ಭೇಟಿ ಮಾಡಲೆಂದು ಆಕೆಯ ಅಪಾರ್ಟ್‌ಮೆಂಟ್‌ ಬಳಿಗೆ ಹೋಗಿದ್ದ. ಅಲ್ಲದೇ, ಅಪಾರ್ಟ್‌ಮೆಂಟ್‌ ಕಾಂಪೌಂಡ್ ಅನ್ನು ಏರಿ, ಅಲ್ಲಿಂದ ಮೆಟ್ಟಿಲುಗಳ ಮೂಲಕ ಟೆರೇಸ್​ಗೆ ತಲುಪಿದ್ದ ಎಂದು ತಿಳಿದು ಬಂದಿದೆ.

ಅಂತೆಯೇ, ಅಪಾರ್ಟ್‌ಮೆಂಟ್​ನ ಟೆರೇಸ್​ ಮೇಲೆ ಸಂಜಯ್ ಮತ್ತು ಆತನ ಪ್ರೇಯಸಿ ಇಬ್ಬರೂ ಪರಸ್ಪರ ಹರಟೆಯಲ್ಲಿ ತೊಡಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಪ್ರೇಯಸಿಯ ತಾಯಿ ಟೆರೇಸ್​ಗೆ ಬಂದಿದ್ದಾರೆ. ಹೀಗಾಗಿಯೇ, ಪ್ರೇಯಸಿಯ ತಾಯಿ ಕೈಯಲ್ಲಿ ಸಿಕ್ಕಿಬೀಳುವ ಭಯದಲ್ಲಿ ಸಂಜಯ್ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಿಂದ ಜಿಗಿದಿದ್ದಾನೆ. ಇದರ ಪರಿಣಾಮ ತಲೆ ನೆಲಕ್ಕೆ ಬಡಿದು ಪ್ರಿಯಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಸಂಜಯ್​ ಚಿನ್ನಾ ಕೋಲ್ಪಟ್ಟಿಯಲ್ಲಿ ಸೆಂಟ್ರಲ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಕನ್ನಕುರಿಚಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ತುಟಿ ಕಚ್ಚಿ ತುಂಡರಿಸಿದ ಧೀರೆ..

ಪ್ರಿಯತಮೆಯ ಬೆದರಿಕೆ - ಪ್ರಿಯಕರ ಆತ್ಮಹತ್ಯೆ: ಮತ್ತೊಂದೆಡೆ, ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ಬೆದರಿಕೆಯಿಂದ 24 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ದಿಲೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಡೆತ್​ನೋಟ್​ ಕೂಡ ಪತ್ತೆಯಾಗಿದೆ.

ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದಿಲೀಪ್ ಕುಮಾರ್, ಇದೀಗ ಈಕೆಯನ್ನು ಬಿಟ್ಟು ಬೇರೆ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದ. ಈ ವಿಷಯ ತಿಳಿದ ಪ್ರಿಯತಮೆ ತನ್ನನ್ನು ಮದುವೆಯಾಗದಿದ್ದರೆ, ದಿಲೀಪ್ ಕುಮಾರ್​ ಮೇಲೆ ಅತ್ಯಾಚಾರದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಳು. ಹೀಗಾಗಿ, ಪ್ರಿಯಕರ ಸಾವಿಗೆ ಶರಣಾಗಿದ್ದಾನೆ. ಘಟನಾ ಸ್ಥಳದಲ್ಲಿ ಮೊಬೈಲ್ ಫೋನ್ ಮತ್ತು ಡೆತ್​ನೋಟ್ ಪತ್ತೆಯಾಗಿದೆ. ಈ ಘಟನೆ ಬಗ್ಗೆ ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಿದ್ದರೂ, ಯಾವುದೇ ದೂರು ದಾಖಲಿಸಿಲ್ಲ ಎಂದು ಡಿಸಿಪಿ ಮನೀಶಾ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಚಿನ್ನಾಭರಣ ದೋಚಲು ಯತ್ನ; ದರೋಡೆಕೋರನ ಬೆರಳು ಕಚ್ಚಿ ಕತ್ತರಿಸಿದ ಮಹಿಳೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.