ETV Bharat / bharat

ಕೃಷಿ ಕಾಯ್ದೆ ವಿರೋಧಿಸಿ ಮೇ 26ರಂದು ಪ್ರತಿಭಟನೆ; 'ಕೈ' ಸೇರಿ 12 ಪಕ್ಷಗಳ ಬೆಂಬಲ - 12 ಪಕ್ಷಗಳು ಬೆಂಬಲ

ಮೇ 26ರಂದು ಕರಾಳ ದಿನ ಆಚರಣೆ ಮಾಡುತ್ತಿರುವ ಸಂಯುಕ್ತ ಕಿಸಾನ್​ ಮೋರ್ಚಾಗೆ ಇದೀಗ ಪ್ರಮುಖ 12 ಪಕ್ಷಗಳು ಬೆಂಬಲ ಸೂಚಿಸಿವೆ.

farmer union's protest
farmer union's protest
author img

By

Published : May 23, 2021, 11:22 PM IST

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಅನೇಕ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯು ಮೇ 26ಕ್ಕೆ ಆರು ತಿಂಗಳು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕರಾಳ ದಿನ ಆಚರಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಸಂಯುಕ್ತ ಕಿಸಾನ್​ ಮೋರ್ಚಾ ಈ ಪ್ರತಿಭಟನೆಗೆ ಕರೆ ನೀಡಿದ್ದು, ಇದೀಗ ಕಾಂಗ್ರೆಸ್​​, ತೃಣಮೂಲ ಕಾಂಗ್ರೆಸ್​, ಎಸ್​​ಪಿ​, ಎನ್​ಸಿಪಿ, ಡಿಎಂಕೆ ಸೇರಿ ಎಡ ಪಕ್ಷಗಳಾದ ಜೆಡಿಎಸ್​​, ಜೆಕೆಪಿಎಲ್​, ಆರ್​ಜೆಡಿ, ಸಿಪಿಐ ಸೇರಿದಂತೆ 12 ಪಕ್ಷಗಳು ಬೆಂಬಲ ನೀಡಿವೆ. ವಿಶೇಷವೆಂದರೆ ಈ ಪ್ರತಿಭಟನೆಯಲ್ಲಿ ವಿವಿಧ 40 ರೈತ ಸಂಘಟನೆ ಭಾಗಿಯಾಗಲಿವೆ.

ಎಲ್ಲ ಪಕ್ಷಗಳು ಸೇರಿ ಜಂಟಿ ಹೇಳಿಕೆ ರಿಲೀಸ್ ಮಾಡಿದ್ದು, ಮೇ. 26ರಂದು ನಡೆಸಲು ಉದ್ದೇಶಿಸಲಾಗಿರುವ ರೈತ ಪ್ರತಿಭಟನೆಗೆ ನಾವು ಸಾಥ್​ ನೀಡಲಿದ್ದೇವೆ ಎಂದು ತಿಳಿಸಿವೆ. ಪ್ರತಿಭಟನೆ ಶಾಂತಿಯುತವಾಗಿರಲಿದೆ ಎಂದಿವೆ. ಸೋನಿಯಾ ಗಾಂಧಿ (ಕಾಂಗ್ರೆಸ್​), ಹೆಚ್​ಡಿ ದೇವೇಗೌಡ (ಜೆಡಿಎಸ್​), ಶರದ್​ ಪವಾರ್​​ (ಎನ್​​ಸಿಪಿ), ಮಮತಾ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್​), ಉದ್ಧವ್​ ಠಾಕ್ರೆ (ಶಿವಸೇನೆ), ಎಂ.ಕೆ ಸ್ಟಾಲಿನ್ ​​​(ಡಿಎಂಕೆ), ಹೇಮಂತ್​ ಸೊರೆನ್​ (ಜೆಎಂಎಂ), ಫಾರೂಕ್​ ಅಬ್ದುಲ್ಲಾ (ಜೆಕೆಪಿಎ), ಅಖಿಲೇಶ್ ಯಾದವ್ ​​(ಸಮಾಜವಾದಿ ಪಕ್ಷ), ತೇಜಸ್ವಿ ಯಾದವ್ ​(ಆರ್​ಜೆಡಿ), ಡಿ. ರಾಜಾ (ಸಿಪಿಎಂ) ಹಾಗೂ ಸೀತಾರಾಮ್​ ಯಚೂರಿ (ಸಿಪಿಎ-ಐ) ಜಂಟಿಯಾಗಿ ಹೇಳಿಕೆ ರಿಲೀಸ್ ಮಾಡಿವೆ.

  • We extend our support to the call given by the Samyukta Kisan Morcha (SKM) to observe a countrywide protest day on May 26, marking the completion of six months of the heroic peaceful Kisan struggle.

    - Joint Statement by 12 Major Opposition Parties pic.twitter.com/pfIByd3vjI

    — Congress (@INCIndia) May 23, 2021 " class="align-text-top noRightClick twitterSection" data=" ">

ಕೇಂದ್ರ ಜಾರಿಗೊಳಿಸಿರುವ ರೈತ ವಿರೋಧಿ ಮೂರು ಕೃಷಿ ಕಾನೂನು ತಕ್ಷಣವೇ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿದ್ದು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಅರ್ಹತೆ ಜೊತೆಗೆ ಸ್ವಾಮಿನಾಥನ್​ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಒತ್ತಾಯ ಮಾಡಿವೆ. ಜತೆಗೆ ಮೇ 12 ರಂದು ಪ್ರಧಾನಿ ಮೋದಿಗೆ ಜಂಟಿಯಾಗಿ ಪತ್ರ ಬರೆದಿರುವುದಾಗಿ ತಿಳಿಸಿವೆ. ಇದರಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೃಷಿ ಕಾಯ್ದೆ ಹಿಂಪಡೆದುಕೊಂಡು ಆಹಾರ ಬೆಳೆ ಬೆಳೆಯುವುದಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾಗಿ ಹೇಳಿವೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ವಿವಿಧ ಗಡಿ ಭಾಗದಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದ್ದು, ಮೇ 26ರಂದು ಕರಾಳ ದಿನ ಆಚರಣೆ ಮಾಡಲು ನಿರ್ಧರಿಸಿವೆ. ಇನ್ನು ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 26ಕ್ಕೆ ಏಳು ವರ್ಷ ಪೂರೈಕೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.