ETV Bharat / bharat

ಕಳೆದ ಐದು ವರ್ಷಗಳಲ್ಲಿ ರಕ್ಷಣಾ ಸಿಬ್ಬಂದಿಯ 113 ವಿಧವೆಯರು, ಕುಟುಂಬಗಳಿಗೆ ಉದ್ಯೋಗ: ಸಚಿವ ಅಜಯ್ ಭಟ್ ಮಾಹಿತಿ - ರಕ್ಷಣಾ ಸಿಬ್ಬಂದಿ

''ಸಂತ್ರಸ್ತ ಸೈನಿಕರ ಕುಟುಂಬಗಳು ಸಶಸ್ತ್ರ ಪಡೆಗಳ ಯುದ್ಧದಲ್ಲಿ ಸಾವನ್ನಪ್ಪಿದವರ ಕಲ್ಯಾಣ ನಿಧಿಯಿಂದ (ಎಎಫ್​ಬಿಸಿಡಬ್ಲ್ಯೂಎಫ್​) ಪ್ರಯೋಜನ ಪಡೆಯಬಹುದು. ಕಳೆದ ಐದು ವರ್ಷಗಳಲ್ಲಿ ರಕ್ಷಣಾ ಸಿಬ್ಬಂದಿಯ 113 ವಿಧವೆಯರು, ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ'' ಎಂದು ಸಚಿವ ಅಜಯ್ ಭಟ್ ಮಾಹಿತಿ ನೀಡಿದರು.

Rajya Sabha
ರಾಜ್ಯಸಭೆ
author img

By

Published : Mar 27, 2023, 9:51 PM IST

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ರಕ್ಷಣಾ ಸಿಬ್ಬಂದಿಯ 113 ವಿಧವೆಯರು, ಕುಟುಂಬಗಳಿಗೆ ಉದ್ಯೋಗಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ರಾಜ್ಯಸಭೆಯಲ್ಲಿ ತಿಳಿಸಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡಾ.ಸಂತಾನು ಸೇನ್ ಮತ್ತು ಅಬಿರ್ ರಂಜನ್ ಬಿಸ್ವಾಸ್ ಅವರು, ಕಳೆದ ಐದು ವರ್ಷಗಳಲ್ಲಿ ಯುದ್ಧ ಮಡಿದ ಸೈನಿಕರ ಕುಟುಂಬದ ಸದಸ್ಯರಿಗೆ ಕೇಂದ್ರ ಸರ್ಕಾರವು ಯಾವೆಲ್ಲಾ ಉದ್ಯೋಗವನ್ನು ನೀಡಿದೆ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಲಿಖಿತವಾಗಿ ಪ್ರತಿಕ್ರಿಯೆ ನೀಡಿದ ಅವರು, ''ಕಳೆದ ಐದು ವರ್ಷಗಳಲ್ಲಿ ಯುದ್ಧದಲ್ಲಿ ಗಾಯಗೊಂಡವರಿಗೆ ಹಾಗೂ ಮೃತಪಟ್ಟವರ ವಿಧವೆಯರು, ಸಂಬಂಧಿಕರಿಗೆ ಉದ್ಯೋಗ ಹಾಗೂ ಅಗತ್ಯವಿರುವ ಧನಸಹಾಯದ ನೆರವನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಈವರೆಗೆ ಎಷ್ಟು ಉದ್ಯೋಗ ಲಭಿಸಿದೆ?: ಕೇಂದ್ರ ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಸೇನೆಯ ಒಟ್ಟಾರೆ 66- ವಿಧವೆಯರು, ಕುಟುಂಬಗಳ ಸದಸ್ಯರಿಗೆ 2018ರಲ್ಲಿ 17, 2019ರಲ್ಲಿ 15, 2020ರಲ್ಲಿ 06, 2021ರಲ್ಲಿ 10 ಮತ್ತು 2022ರಲ್ಲಿ 18 ಜನರಿಗೆ ಉದ್ಯೋಗ ನೀಡಲಾಗಿದೆ.

ಭಾರತೀಯ ನೌಕಾಪಡೆಯಲ್ಲಿ, 2018ರಲ್ಲಿ 6, 2019ರಲ್ಲಿ 5, 2020ರಲ್ಲಿ 1 ಹಾಗೂ 2021 ಮತ್ತು 2022ರಲ್ಲಿ ತಲಾ 8 ಸೇರಿ ಒಟ್ಟು 28 ವಿಧವೆಯರು, ರಕ್ಷಣಾ ಸಿಬ್ಬಂದಿಯ ಕುಟುಂಬಗಳಿಗೆ ಉದ್ಯೋಗವನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಭಾರತೀಯ ವಾಯುಪಡೆಗೆ ಸಂಬಂಧಿಸಿದಂತೆ 2017ರಲ್ಲಿ 2, 2018ರಲ್ಲಿ 1, 2019ರಲ್ಲಿ 4, 2020ರಲ್ಲಿ 5 ಹಾಗೂ 2021ರಲ್ಲಿ 7 ಸೇರಿದಂತೆ ಜೊತೆಗೆ ಒಟ್ಟು 19 ಜನರಿಗೆ ಉದ್ಯೋಗವನ್ನು ಒದಗಿಸಲಾಗಿದೆ.

ಸೈನಿಕರ ಅವಲಂಬಿತರಿಗೆ ದೊರೆತ ಸೌಲಭ್ಯಗಳ್ಯಾವು?: ವಿಕಲಚೇತನ ಮಕ್ಕಳ ಅನುದಾನದಲ್ಲಿ ಜೆಸಿಒ ಶ್ರೇಣಿಯವರೆಗಿನ ಪಿಂಚಣಿದಾರರು, ಪಿಂಚಣಿದಾರರಲ್ಲದವರು ಸೇರಿದಂತೆ ದೇಶದ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. 3,000 ರೂ ಮಾಸಿಕ ಹಾಗೂ ವಿಧವಾ ಮರು-ವಿವಾಹ ಅನುದಾನದಡಿ ಪಿಂಚಣಿದಾರ, ಪಿಂಚಣಿದಾರರಲ್ಲದವರು ತಿಂಗಳಿಗೆ 50,000 ರೂ. ವರೆಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಏನಿದು ಎಫ್​ಬಿಸಿಡಬ್ಲ್ಯೂಎಫ್​ ನಿಧಿ?: ಸೈನಿಕರ ಸಂತ್ರಸ್ತ ಕುಟುಂಬಗಳು ಸಶಸ್ತ್ರ ಪಡೆಗಳ ಯುದ್ಧ ಅಪಘಾತಗಳ ಕಲ್ಯಾಣ ನಿಧಿಯಿಂದ (ಎಎಫ್​ಬಿಸಿಡಬ್ಲ್ಯೂಎಫ್​) ಪ್ರಯೋಜನ ಪಡೆಯಬಹುದು ಎಂದು ಹೇಳಿದ ಅವರು, ಇದು ತ್ರಿ-ಸೇವಾ ನಿಧಿಯಾಗಿದ್ದು, ಅವರ ಅವಲಂಬಿತರಿಗೆ ಎಕ್ಸ್-ಗ್ರೇಷಿಯಾ ಮೊತ್ತವನ್ನು ನೀಡುತ್ತದೆ. ದೇಶಕ್ಕಾಗಿ ಜೀವ ಹಂಗು ತೊರೆದು ಹೋರಾಡಿದವರು, ರಾಷ್ಟ್ರಕ್ಕಾಗಿ ಅತ್ಯುನ್ನತ ತ್ಯಾಗವನ್ನು ಮಾಡಿದವರು ಅಥವಾ ತೀವ್ರವಾಗಿ ಗಾಯಗೊಂಡರು, ಅಂಗವಿಕಲರಾಗುತ್ತಾರೆ. ಈ ನಿಧಿಯು ಅವರಿಗೆ ತಕ್ಷಣದ ಆರ್ಥಿಕ ಒತ್ತಡವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಯುದ್ಧದ ಕಾರಣಗಳ ಹಿನ್ನೆಲೆ ನೊಕ್​ಗೆ ನೀಡಲಾದ ಇತರೆ ಅನುದಾನಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಹಣಕಾಸು ವಿನಿಯೋಗ ಮಸೂದೆ ಅಂಗೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.