ಎಸ್ಎಸ್ಎಲ್ಸಿ ಸೇರಿದಂತೆ ಪ್ರಮುಖ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಾಗುವುದು. ಆದರೂ ಕೂಡ ಕೆಲವೊಮ್ಮೆ ಪರೀಕ್ಷೆಗೆ ಇನ್ನೇನು 5-10 ನಿಮಿಷ ಇರುವಾಗ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿರುವ ಉದಾಹರಣೆಗಳಿವೆ. ಇದೀಗ ತೆಲಂಗಾಣದ ವಿಕ್ರಬಾದ್ ಜಿಲ್ಲೆಯಲ್ಲೂ ಕೂಡ ಇದೇ ರೀತಿ ಘಟನೆ ಮರುಕಳಿಸಿದೆ. ಪರೀಕ್ಷೆ ಆರಂಭವಾದ 7 ನಿಮಿಷದ ಬಳಿಕ ಪತ್ರಿಕೆ ಸೋರಿಕೆ ಆಗಿದ್ದು, ಶಿಕ್ಷಕರೇ ತಮ್ಮ ವಾಟ್ಸ್ಆ್ಯಪ್ನಲ್ಲಿ ತೆಲುಗು ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡಿದ್ದಾರೆ.
ಏನಿದು ಘಟನೆ?: ಇಲ್ಲಿನ ತಂದೂರ್ ನಗರದಲ್ಲಿ 10ನೇ ತರಗತಿ ಪರೀಕ್ಷೆ ಮೇಲ್ವಿಚಾರಕರಾಗಿ ಬಂದಿದ್ದ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿದ್ದಾರೆ. ಆದರೆ, ಇದು ಉದ್ದೇಶ ಪೂರ್ವಕ ಘಟನೆ ಅಲ್ಲ ಎಂದು ತಿಳಿದು ಬಂದಿದೆ. 9. 30ಕ್ಕೆ ಪರೀಕ್ಷೆ ಆರಂಭವಾಗಿದೆ. ಸರ್ಕಾರಿ ಫ್ರೌಢಶಾಲೆಯಲ್ಲಿ ಕೊಠಡಿ ಸಂಖ್ಯೆ 11ರ ಮೇಲ್ವಿಚಾರಕರಾಗಿದ್ದ ಬಂಡೆಪ್ಪ ಈ ಕೃತ್ಯ ಎಸಗಿದ್ದಾರೆ. ತಮ್ಮ ಕೊಠಡಿಯಲ್ಲಿ ಗೈರಾಗಿದ್ದ ಅಭ್ಯರ್ಥಿಗಳ ಕುರಿತ ಮಾಹಿತಿಯನ್ನು ಅವರು ಅದೇ ಮಂಡಲ್ನ ಚೆಂಗೊಲ್ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕರಾಗಿದ್ದ ಸಮಪ್ಪ ಅವರಿಗೆ ವಾಟ್ಸ್ಆ್ಯಪ್ ಮಾಡಿದ್ದಾರೆ.
ಇದಾದ ಬಳಿಕ ಅವರಿಗೆ ತಿಳಿಯದಂತೆ ಪ್ರಶ್ನೆ ಪತ್ರಿಕೆಯನ್ನು ಕೂಡ ಕಳುಹಿಸಿದ್ದು, ಬಳಿಕ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಕಳುಹಿಸಿದ್ದಾರೆ. ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಶಿಕ್ಷಕರು ತಮಗೆ ಅರಿವಿಲ್ಲದಂತೆ ಅವರು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಪ್ರಶ್ನೆ ಪತ್ರಿಕೆ ಕಳುಹಿಸಿದ್ದು, ಅದನ್ನು ತಕ್ಷಣಕ್ಕೆ ಡಿಲೀಟ್ ಮಾಡಿದ್ದಾರೆ. ಆದರೆ, ಅನೇಕರು ಪ್ರಶ್ನೆ ಪತ್ರಿಕೆಯನ್ನು ಪಡೆದಿದ್ದಾರೆ. ಪೇಪರ್ ಲೀಕ್ ಆಗುವ ಸಮಯದಲ್ಲಿ ಪರೀಕ್ಷೆ ಅದಾಗಲೇ ಆರಂಭವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೈರಾಗಿದ್ದ ವಿದ್ಯಾರ್ಥಿ ಪ್ರಶ್ನೆ ಪತ್ರಿಕೆ: ಸೋರಿಕೆಯಾದ ಕೇಂದ್ರದಲ್ಲಿ 260 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದರು. ಆದರೆ, ಪರೀಕ್ಷೆಗೆ ಇಬ್ಬರು ವಿದ್ಯಾರ್ಥಿಗಳು ಗೈರಾಗಿದ್ದರು. ಬಂಡೆಪ್ಪ ಅವರು ಕಳುಹಿಸಿರುವ ಪ್ರಶ್ನೆ ಪತ್ರಿಕೆ ಯಾರೋ ವಿದ್ಯಾರ್ಥಿಗಳಿಂದ ಪಡೆದು ಸೋರಿಕೆ ಆಗೊದೆ. ಅವರು ವಾಟ್ಸ್ಆ್ಯಪ್ ಗ್ರೂಪ್ಗೆ ಕಳುಹಿಸಿದ್ದಾರೆ. ಶಿಕ್ಷಕರು ಪ್ರಕಟಿಸಿದ ಗ್ರೂಪ್ನಲ್ಲಿ ಶಿಕ್ಷಕರು ಮತ್ತು ಪತ್ರಕತ್ತರಿಒದ್ದ ಗ್ರೂಪ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದಿದ್ದಾರೆ.
ಯಥಾವತ್ತಾಗಿ ನಡೆಯಲಿದೆ ಪರೀಕ್ಷೆ: ಪರೀಕ್ಷೆ 9.30ಕ್ಕೆ ಆರಂಭವಾಗಿದ್ದು, ಪ್ರಶ್ನಾ ಪತ್ರಿಕೆ 9. 37ಕ್ಕೆ ವಾಟ್ಸ್ಆಪ್ನಲ್ಲಿ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರಕ್ಕೆ ಯಾರೂ ಕೂಡ ಆಗಮಿಸಿಲ್ಲ ಎಂದು ಶಿಕ್ಷಣಾ ಇಲಾಖೆ ನಿರ್ದೇಶಕರಾದ ಶ್ರೀದೇವಸೇನಾ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಶಿಕ್ಷಕರಿಂದ ಸ್ಪಷ್ಟೀಕರಣದ ಕ್ರಮವನ್ನು ಪಡೆಯಲಾಗುವುದು. ಮುಂದಿನ ಪರೀಕ್ಷೆಗಳು ಘೋಷಣೆಯಾದ ದಿನಾಂಕದಂತೆ ನಡೆಸಲಾಗುವುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಘಟನೆ ಸಂಬಂಧ ಯಾವುದೇ ಗೊಂದಲಗಳಿಗೆ ಒಳಗಾಗುವುದು ಬೇಡ ಎಂದಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಬಂಡಲ್ ನಾಪತ್ತೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಅದಿಲ್ಬಾದ್ ಜಿಲ್ಲೆಯ ಉಟ್ನೂರ್ನಲ್ಲಿ ಶಿಕ್ಷಕರ ಆಚಾತುರ್ಯದಿಂದ ಈ ಘಟನೆ ನಡೆದಿದೆ. ಉಟ್ನೂರ್ನಲ್ಲೂ 5 ಕೇಂದ್ರದಲ್ಲಿ 1, 011 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 11 ಬಂಡಲ್ಗಳು ಸಂಗ್ರಹವಾಗಿದ್ದು, ಅವುಗಳನ್ನು ಮೌಲ್ಯಮಾಪನ ಕೇಂದ್ರಕ್ಕೆ ಕಳುಹಿಸಲು ಆಟೋ ಮೂಲಕ ಬಸ್ ನಿಲ್ದಾಣಕ್ಕೆ ತರಲಾಗಿದೆ. ಈ ವೇಳೆ 11ರ ಬದಲಾಗಿ 10 ಬಂಡಲ್ಗಳಿವೆ. ಎಲ್ಲಾ ಕಡೆಯ ಇನ್ನೊಂದು ಬಂಡಲ್ಗಾಗಿ ಹುಟುಕಾಟ ನಡೆಸಲಾಯಿತು. ಆದರೆ, ಪ್ರಯೋಜವಾಗಿಲ್ಲ. ಕಡೆಗೆ ಈ ಸಂಬಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣ ಸಂಬಂದ ಪೊಲೀಸರು ದೂರು ದಾಖಲಿಸಿದ್ದು, ಈ ಸಂಬಂದ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕಕ್ಕೆ ಒಳಗಾಗಬಾರದು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ: 7500 ಗ್ರೂಪ್ ಬಿ ಮತ್ತು ಸಿ ಹುದ್ದೆಗೆ ಅರ್ಜಿ ಆಹ್ವಾನ