ಕಣ್ಣೂರು: ಕೇರಳದ ಕಣ್ಣೂರಿನ 104 ವರ್ಷದ ವೃದ್ಧೆ ಜಾನಕಿಯಮ್ಮ ಮಾರಣಾಂತಿಕ ಕೋವಿಡ್-19 ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು-ಆಸ್ಪತ್ರೆಯಿಂದನಿಂದ ನಿನ್ನೆ ಬಿಡುಗಡೆಯಾಗಿದ್ದಾರೆ. ಕೇವಲ 11 ದಿನಗಳಲ್ಲೇ ವೈರಸ್ನಿಂದ ಗುಣಮುಖರಾಗಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಮೇ 31ರಂದು ತಾಲಿಪರಂಬಾದ ಕೋವಿಡ್ ಕೇರ್ ಕೇಂದ್ರದಿಂದ ಪರಿಯಾರಂ ವೈದ್ಯಕೀಯ ಕಾಲೇಜು-ಆಸ್ಪತ್ರೆಯ ಐಸಿಯು ವಾರ್ಡ್‌ಗೆ ಜಾನಕಿಯಮ್ಮರನ್ನು ಕರೆದೊಯ್ಯುವ ವೇಳೆ ಅವರ ಸ್ಥಿತಿ ಗಂಭೀರವಾಗಿತ್ತು. ಆದರೆ ಇದೀಗ ಮಹಾಮಾರಿ ವಿರುದ್ಧ ಜಾನಕಿಯಮ್ಮ ಗೆದ್ದಿದ್ದು, ಕೊರೊನಾವನ್ನು ಸೋಲಿಸಿದ ಕಣ್ಣೂರು ಜಿಲ್ಲೆಯ ಅತ್ಯಂತ ಹಿರಿಯ ವ್ಯಕ್ತಿ ಮತ್ತು ಕೇರಳದ ನಾಲ್ಕನೇಯ ಹಿರಿಯರು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಇದನ್ನೂ ಓದಿ: ವೃದ್ಧಾಪ್ಯದಲ್ಲಿಯೂ ಬತ್ತದ ಆರೋಗ್ಯ ಕಾಳಜಿ: ಯುವಕರೂ ನಾಚುವಂತಿದೆ 'ಅಜ್ಜಿಯ ಯೋಗಾಸನ'
ಇದಕ್ಕೆಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ಪ್ರಯತ್ನದ ಫಲ ಹಾಗೂ ಜಾನಕಿಯಮ್ಮರ ಆತ್ಮವಿಶ್ವಾಸ ಕಾರಣವಾಗಿದೆ. ವೃದ್ಧೆಗೆ ಚಿಕಿತ್ಸೆ ನೀಡಿದ್ದ ವೈದ್ಯಕೀಯ ಸಿಬ್ಬಂದಿಯನ್ನು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಅಭಿನಂದಿಸಿದ್ದಾರೆ.