ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 10,126 ಹೊಸ ಕೋವಿಡ್-19 (COVID-19) ಪ್ರಕರಣಗಳು ದೃಢಪಟ್ಟಿದೆ. 266 ದಿನಗಳಲ್ಲಿ ಇದೇ ಮೊದಲು ಇಷ್ಟು ಕಡಿಮೆ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,43,77,113ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ನಿನ್ನೆ ಒಟ್ಟು 11,451 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಕೊಂಚ ಕಡಿಮೆಯಾಗಿದೆ. ಸೋಂಕಿಗೆ ತುತ್ತಾದ 332 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ 4,61,389ಕ್ಕೆ ಏರಿದೆ. ಸದ್ಯ 1,40,638 ಸಕ್ರಿಯ ಪ್ರಕರಣಗಳಿದ್ದು, 263 ದಿನಗಳಲ್ಲಿ ಇದೇ ಮೊದಲು ಇಷ್ಟು ಇಳಿಕೆ ಕಂಡಿದೆ.
ಇದನ್ನೂ ಓದಿ: ಮನೆ ಕುಸಿದು 9 ಮಂದಿಗೆ ಗಾಯ.. ಭರದಿಂದ ಸಾಗಿದ ರಕ್ಷಣಾ ಕಾರ್ಯ
ಇನ್ನೂ 1,982 ಮಂದಿ ಗುಣಮುಖರಾಗುವ ಮುಖೇನ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,37,75,086ಕ್ಕೆ ತಲುಪಿದೆ.