ETV Bharat / bharat

ಭಾರತದ ವ್ಯಾಕ್ಸಿನೇಷನ್ ವಿಜ್ಞಾನ ಆಧಾರಿತ; 100 ಕೋಟಿ ಲಸಿಕೆಯು ಇತಿಹಾಸದಲ್ಲಿ ಹೊಸ ಅಧ್ಯಾಯ-ಮೋದಿ - ರಾಷ್ಟ್ರವನ್ನುದ್ದೇಶಿಸಿ ಮೋದಿ ಮಾತು

ಭಾರತದ ವ್ಯಾಕ್ಸಿನೇಷನ್ ಕಾರ್ಯಕ್ರಮವು ಸಂಪೂರ್ಣ ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ. ಕವಚ ಎಷ್ಟು ಉತ್ತಮ, ಎಷ್ಟು ಆಧುನಿಕವಾಗಿರತ್ತೋ ಅಷ್ಟೇ ನಮಗೆ ರಕ್ಷಣೆ ಸಿಗುತ್ತದೆ ಎಂದು ಕೊರೊನಾ ಲಸಿಕೆಗಳ ಸುರಕ್ಷತೆ, ಪರಿಣಾಮಕಾರಿತ್ವವನ್ನು ಪಿಎಂ ಮೋದಿ ಶ್ಲಾಘಿಸಿದರು.

PM Modi
PM Modi
author img

By

Published : Oct 22, 2021, 10:49 AM IST

Updated : Oct 22, 2021, 1:43 PM IST

ನವದೆಹಲಿ: 100 ಕೋಟಿ ಲಸಿಕೆ ಅಂದರೆ ಇದು ಕೇವಲ ಸಂಖ್ಯೆಯಲ್ಲ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯ, ಭಾರತವು ಯಾವುದೇ ಕಠಿಣ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜನವರಿ 16ರಿಂದ ನಿನ್ನೆಯವರೆಗೆ ಕೋವಿಡ್​ ಲಸಿಕೆಯ 100 ಕೋಟಿಗೂ ಅಧಿಕ ಡೋಸ್ ನೀಡುವ ಮೂಲಕ ಭಾರತ ಮೈಲಿಗಲ್ಲು ಸಾಧಿಸಿದ್ದು, ಈ ಕುರಿತು ಇಂದು ಪಿಎಂ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಅಕ್ಟೋಬರ್ 21 ರಂದು, ಭಾರತವು 1 ಬಿಲಿಯನ್ ಕೋವಿಡ್​ -19 ಲಸಿಕೆಗಳ ಗುರಿಯನ್ನು ಸಾಧಿಸಿತು. ಈ ಸಾಧನೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸೇರಿದೆ. ಈ ಸಾಧನೆಗಾಗಿ ನಾನು ಪ್ರತಿಯೊಬ್ಬ ನಾಗರಿಕನನ್ನು ಅಭಿನಂದಿಸುತ್ತೇನೆ ಎಂದರು.

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

ವಿಜ್ಞಾನ ಆಧಾರಿತ ವ್ಯಾಕ್ಸಿನೇಷನ್

ಭಾರತದ ವ್ಯಾಕ್ಸಿನೇಷನ್ ಕಾರ್ಯಕ್ರಮವು ಸಂಪೂರ್ಣ ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ. ಕವಚ ಎಷ್ಟು ಉತ್ತಮ, ಎಷ್ಟು ಆಧುನಿಕವಾಗಿರುತ್ತೋ ಅಷ್ಟೇ ನಮಗೆ ರಕ್ಷಣೆ ಸಿಗುತ್ತದೆ ಎಂದು ಕೊರೊನಾ ಲಸಿಕೆಗಳ ಸುರಕ್ಷತೆ, ಪರಿಣಾಮಕಾರಿತ್ವವನ್ನು ಮೋದಿ ಶ್ಲಾಘಿಸಿದರು.

ಭಾರತದ ಲಸಿಕಾಭಿಯಾನವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್'ನ ಒಂದು ಜೀವಂತ ಉದಾಹರಣೆಯಾಗಿದೆ. ವಿಐಪಿ ಸಂಸ್ಕೃತಿಯು ನಮ್ಮ ಲಸಿಕಾ ಕಾರ್ಯಕ್ರಮದ ಮೇಲೆ ಪರಿಣಾಮ ಬೀರಲಿಲ್ಲ. ಇಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ನಮ್ಮ ದೇಶದ 'ಕೋವಿನ್'​ ಫ್ಲಾಟ್​ಫಾರ್ಮ್​ ಕೇವಲ ಜನರಿಗೆ ಮಾತ್ರ ಸಹಾಯಕಾರಿಯಾಗಲಿಲ್ಲ. ನಮ್ಮ ವೈದ್ಯಕೀಯ ಸಿಬ್ಬಂದಿಯ ಕೆಲಸವನ್ನೂ ಸುಲಭಗೊಳಿಸಿತು. ನಾವೆಲ್ಲರೂ ಮತ್ತಷ್ಟು ಪ್ರಯತ್ನ ಮಾಡಿ ಕೋವಿಡ್​ ಅನ್ನು ಸಂಪೂರ್ಣವಾಗಿ ಹೊಡೆದೋಡಿಸುತ್ತೇವೆ ಎಂದು ನಂಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಪ್ರಧಾನಿ ಹೇಳಿದರು.

ಮೇಡ್​ ಇನ್​ ಇಂಡಿಯಾ

ಹಿಂದೊಂದು ಕಾಲ ಇತ್ತು, ಆಗ ನಾವು ಮೇಡ್​ ಇನ್​ ಆ ದೇಶ, ಮೇಡ್​ ಇನ್​ ಈ ದೇಶ ಅಂತಾ ಹೇಳ್ತಾ ಇದ್ವಿ.. ಆದ್ರೆ ಈಗೆಲ್ಲಾ 'ಮೇಡ್​ ಇನ್​ ಇಂಡಿಯಾ' ಆಗಿದೆ. ಇದರ ಹಿಂದೆ ಭಾರತೀಯನ ಬೆವರು ಇದೆ. ಈ ವಸ್ತುಗಳನ್ನೇ ನೀವು ಹೆಚ್ಚಾಗಿ ಖರೀದಿಸಬೇಕು. ನಮ್ಮ ಸಣ್ಣಪುಟ್ಟ ಉದ್ಯಮಿಗಳು, ಅಂಗಡಿ-ಮುಂಗಟ್ಟು ವ್ಯಾಪಾರಿಗಳ ಬದುಕಲ್ಲಿ ಆಶಾ ಕಿರಣ ಬೆಳಗಬೇಕು ಎಂದ ಮೋದಿ ಮತ್ತೊಮ್ಮೆ 'ವೋಕಲ್​ ಫಾರ್​ ಲೋಕಲ್​' ಎಂಬುದನ್ನು ನೆನಪಿಟ್ಟುಕೊಳ್ಳಲು ತಿಳಿಸಿದರು.

ಭಾರತ ಮತ್ತು ವಿದೇಶಗಳಲ್ಲಿನ ತಜ್ಞರು ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಇಂದು, ಭಾರತೀಯ ಕಂಪನಿಗಳಿಗೆ ದಾಖಲೆಯ ಮಟ್ಟದಲ್ಲಿ ಹೂಡಿಕೆ ಬರುತ್ತಿದೆ, ಮಾತ್ರ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದರು.

ಎಚ್ಚರಿಕೆಯಿಂದ ಹಬ್ಬ ಆಚರಿಸಿ

ಕಳೆದ ವರ್ಷದ ದೀಪಾವಳಿ ಆಚರಿಸಲು ಎಲ್ಲರೂ ಭಯ ಪಡ್ತಾ ಇದ್ವಿ. ಆದ್ರೆ ಈ ಬಾರಿ ಲಸಿಕೆಯ ವಿಶ್ವಾಸವು ಭಯವನ್ನು ಕಡಿಮೆ ಮಾಡಿದೆ. ಆದರೂ ಮುಂಬರುವ ಹಬ್ಬಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಚರಿಸಲು ನಾನು ಎಲ್ಲರನ್ನೂ ವಿನಂತಿಸುತ್ತೇನೆ. ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳದ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ. ಲಸಿಕೆ ಹಾಕಿಸಿಕೊಂಡವರು ಇತರರನ್ನು ಪ್ರೋತ್ಸಾಹಿಸಬೇಕು. ಮನೆಯಿಂದ ಹೊರ ಹೋಗುವಾಗ ಚಪ್ಪಲಿ ಹಾಕಿಕೊಳ್ಳುವಂತೆ ಮಾಸ್ಕ್​ ಅನ್ನೂ ಧರಿಸೇ ತೆರಳಬೇಕು ಎಂದು ಮೋದಿ ಒತ್ತಾಯಿಸಿದ್ದಾರೆ.

Last Updated : Oct 22, 2021, 1:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.