ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿನ್ನೆ ಸ್ಫೋಟಕ ಸಾಮಗ್ರಿ(ಜಿಲಿಟಿನ್ ಕಡ್ಡಿ) ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಇದೀಗ ಮುಂಬೈ ಕ್ರೈಂ ಬ್ರ್ಯಾಂಚ್ನಿಂದ ಇದರ ತನಿಖೆ ನಡೆಸಲು 10 ತಂಡಗಳ ರಚನೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇದೀಗ ಮುಂಬೈ ಕ್ರೈಂ ಬ್ರ್ಯಾಂಚ್ ಹಾಗೂ ಎಟಿಎಸ್ ಜಂಟಿಯಾಗಿ ತನಿಖೆ ನಡೆಸಲಿದ್ದು, ಅದಕ್ಕಾಗಿ 10 ತಂಡ ರಚನೆ ಮಾಡಲಾಗಿದೆ. ಮೊದಲ ತಂಡ ಪೆಡ್ಡರ್ ರಸ್ತೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಕಲೆಹಾಕುವುದರಲ್ಲಿ ನಿರಂತವಾಗಿದೆ ಎಂದು ತಿಳಿದು ಬಂದಿದ್ದು, ಎರಡನೇ ತಂಡ ವಾಹನದ ಚಲನೆ ಪತ್ತೆಗಾಗಿ ಟ್ರಾಫಿಕ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾದ ಸಿಸಿಟಿವಿ ದೃಶ್ಯಾವಳಿ ಸ್ಕ್ಯಾನ್ ಮಾಡ್ತಿದೆ.
ಮೂರನೇ ತಂಡ ಪೊಲೀಸ್ ಪ್ರಧಾನ ಕಚೇರಿ ಹಾಗೂ ಕ್ರಾಫೋರ್ಡ್ ಮಾರುಕಟ್ಟೆ ಪ್ರದೇಶದ ಸಿಸಿಟಿವಿ ದೃಶ್ಯಾವಳಿ ಹಾಗೂ ನಾಲ್ಕನೇ ತಂಡ ಶಂಕಿತರ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಐದನೇ ತಂಡ ವಿಧಿ ವಿಜ್ಞಾನ ತಂಡಕ್ಕೆ ಸಹಾಯ ಮಾಡಲಿದ್ದು, ಆರನೇ ತಂಡ ಅಂಬಾನಿ ಕುಟುಂಬಕ್ಕೆ 2013ರಲ್ಲಿ ಭಾರತೀಯ ಮುಜಾಹಿದ್ದೀನ್ ನೀಡಿದ್ದ ಬೆದರಿಕೆಯ ಕೋನ ತನಿಖೆ ಮಾಡುತ್ತಿದೆ. ಉಳಿದ ತಂಡಗಳು ವಿವಿಧ ಪ್ರದೇಶಗಳಲ್ಲಿ ತನಿಖೆ ನಡೆಸುತ್ತಿವೆ.
ಇದನ್ನೂ ಓದಿ: ಮುಖೇಶ್ ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಸ್ಫೋಟಕ ಹೊಂದಿದ್ದ ವಾಹನ.. ಬೆದರಿಕೆ ಪತ್ರದಲ್ಲಿ ಹೀಗಿದೆ..
2013ರಲ್ಲಿ ಭಾರತೀಯ ಮುಜಾಹಿದ್ದೀನ್ನಿಂದ ಅಂಬಾನಿ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದ್ದು, ತದನಂತರ CISF Z + ಭದ್ರತೆ ನೀಡಲಾಗಿತ್ತು. ಗುರುವಾರ ನಡೆದ ಘಟನೆ ಬಳಿಕ ಅವರ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಅಂಬಾನಿ ಅವರ ಮನೆ ಹೊರಗೆ ಪತ್ತೆಯಾಗಿರುವ ಕಾರು ವಿಖ್ರೋಲಿ ಪ್ರದೇಶದಿಂದ ಕಳವು ಆಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಫೆ. 18ರಂದು ವಿಖ್ರೋಲಿ ಪೂರ್ವ ಎಕ್ಸ್‌ಪ್ರೆಸ್ ವೇಯಿಂದ ವಾಹನ ಕಳ್ಳತನವಾಗಿದೆ. ಇದರ ಜತೆಗೆ ಕಾರಿನಲ್ಲಿ ನಾಗ್ಪುರ್ ಸೌರ ಸ್ಫೋಟಕ ಲಿಮಿಟೆಡ್ನಿಂದ ತಯಾರಿಸಿದ ಸ್ಫೋಟಕ ವಸ್ತು ತುಂಬಲಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ, ಅಂಬಾನಿಯ ಮನೆಯ ಹೊರಗೆ ಪತ್ತೆಯಾದ ಎಸ್ಯುವಿಯನ್ನು ವಿಖ್ರೋಲಿ ಪ್ರದೇಶದಿಂದ ಕಳವು ಮಾಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಫೆಬ್ರವರಿ 18ರಂದು ವಿಖ್ರೋಲಿ ಪೂರ್ವ ಎಕ್ಸ್‌ಪ್ರೆಸ್ ವೇಯಿಂದ ವಾಹನವನ್ನು ಕಳವು ಮಾಡಲಾಗಿದ್ದು, ಕಾರು ಕಳ್ಳತನದ ದೂರು ದಾಖಲಿಸಿದ್ದ ಮನ್ಸುಖ್ ಹಿರೆನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.