ETV Bharat / bharat

ಫೆಬ್ರವರಿಯಲ್ಲಿ 1 ಲಕ್ಷದ 50 ಸಾವಿರ ಕೋಟಿ ಜಿಎಸ್​ಟಿ ಸಂಗ್ರಹ: ಶೇ 12 ರಷ್ಟು ಹೆಚ್ಚಳ - ಸರಕುಗಳ ಆಮದು ಆದಾಯ

2023ರ ಫೆಬ್ರವರಿ ತಿಂಗಳಲ್ಲಿ 1,49,577 ಕೋಟಿ ರೂಪಾಯಿ ಜಿಎಸ್​ಟಿ ಆದಾಯ ಸಂಗ್ರಹವಾಗಿದೆ. 2022-23ರ ಸಾಲಿಗೆ 8.54 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

Rs 1,49,577 crore gross GST revenue collected

author img

By

Published : Mar 1, 2023, 5:04 PM IST

ನವದೆಹಲಿ: ಫೆಬ್ರವರಿ 2023 ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆಯಿಂದ ಬಂದ (GST) ಆದಾಯ ಸಂಗ್ರಹವು 1,49,577 ಕೋಟಿ ರೂ.ಗಳಾಗಿದ್ದು, ವಾರ್ಷಿಕ ಆಧಾರದ ಮೇಲೆ ನೋಡುವುದಾದರೆ ಸುಮಾರು ಶೇ 12 ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಮಾಸಿಕ ಜಿಎಸ್‌ಟಿ ಆದಾಯವು ಸತತ 12 ತಿಂಗಳುಗಳಿಂದ 1.4 ಲಕ್ಷ ಕೋಟಿ ರೂ.ಗಿಂತ ಹೆಚ್ಚಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟು ಆದಾಯದಲ್ಲಿ ಸಿಜಿಎಸ್‌ಟಿ 27,662 ಕೋಟಿ ರೂ., ಎಸ್‌ಜಿಎಸ್‌ಟಿ 34,915 ಕೋಟಿ ರೂ., ಐಜಿಎಸ್‌ಟಿ 75,069 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ ₹35,689 ಕೋಟಿ ಸೇರಿದಂತೆ) ಸೆಸ್ 11,931 ಕೋಟಿ ರೂ. (ರೂ. 792 ಕೋಟಿ ಆಮದು ಸೇರಿ) ಇವೆ.

ಫೆಬ್ರವರಿ ತಿಂಗಳಲ್ಲಿ ಸರಕುಗಳ ಆಮದು ಆದಾಯವು ಶೇ 6 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬರುವ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ 15 ರಷ್ಟು ಹೆಚ್ಚಾಗಿದೆ. ಈ ತಿಂಗಳು ಅತ್ಯಧಿಕ ₹11,931 ಕೋಟಿ ರೂ ಸೆಸ್ ಸಂಗ್ರಹವಾಗಿದೆ. ಇದು ಜಿಎಸ್‌ಟಿ ಜಾರಿಯಾದಾಗಿನಿಂದ ಸಂಗ್ರಹವಾದ ಅತ್ಯಧಿಕ ಸೆಸ್ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಎಲ್ಲ ದೊಡ್ಡ ರಾಜ್ಯಗಳು ಜಿಎಸ್​ಟಿ ಸಂಗ್ರಹಣೆಯಲ್ಲಿ ಶೇಕಡಾ 10 ರಿಂದ 24 ರವರೆಗೆ ಗಮನಾರ್ಹ ಹೆಚ್ಚಳ ದಾಖಲಿಸಿವೆ. ಮತ್ತು ಆರ್ಥಿಕ ಬೆಳವಣಿಗೆ ಮತ್ತು ಅನುಸರಣೆಯನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳು ಈಗ ಫಲಿತಾಂಶಗಳನ್ನು ನೀಡುತ್ತಿವೆ ಎಂದು ಡೆಲಾಯ್ಟ್ ಇಂಡಿಯಾ ಪಾರ್ಟನರ್ ಎಂಎಸ್ ಮಣಿ ಹೇಳಿದ್ದಾರೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ತೆರಿಗೆ ಕನೆಕ್ಟ್ ಸಲಹಾ ಪಾಲುದಾರ ವಿವೇಕ್ ಜಲನ್, ಹೆಚ್ಚಿದ ಲೆಕ್ಕಪರಿಶೋಧನೆಗಳು, ಮೌಲ್ಯಮಾಪನಗಳು ಮತ್ತು ದೊಡ್ಡ ಘಟಕಗಳಲ್ಲಿನ ಪ್ರಕ್ರಿಯೆಗಳ ಪರಿಣಾಮಗಳಿಂದ ಜಿಎಸ್‌ಟಿ ಸಂಗ್ರಹಣೆ ಹೆಚ್ಚಾಗಿದೆ. ಫೆಬ್ರವರಿ ಸೇರಿದಂತೆ ಸತತ 12 ತಿಂಗಳ ಕಾಲ ಮಾಸಿಕ ಜಿಎಸ್‌ಟಿ ಆದಾಯ 1.4 ಲಕ್ಷ ಕೋಟಿ ರೂ. ಗಿಂತ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಫೆಬ್ರವರಿಯಲ್ಲಿ 2023-24ರ ಬಜೆಟ್ ಮಂಡಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರಕ್ಕೆ ನಿವ್ವಳ ಜಿಎಸ್​ಟಿ ಸಂಗ್ರಹದಲ್ಲಿ ಶೇ 12ರಷ್ಟು ಬೆಳವಣಿಗೆಯನ್ನು ಯೋಜಿಸಿದ್ದಾರೆ. 2022-23 ರ ಸಾಲಿಗೆ 8.54 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ (ಸಿಬಿಐಸಿ) ಅಧ್ಯಕ್ಷ ವಿವೇಕ್ ಜೋಹ್ರಿ ಮಾತನಾಡಿ, ಇತ್ತೀಚೆಗೆ 1.5 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವು ಹೊಸ ಸಾಮಾನ್ಯವಾಗಿದೆ ಮತ್ತು ಮುಂಬರುವ ವರ್ಷದಲ್ಲಿ ಈ ಅಂಕಿಅಂಶವನ್ನು ದಾಟುವ ವಿಶ್ವಾಸವಿದೆ ಎಂದು ಹೇಳಿದರು.

ಐ-ಟಿ ರಿಟರ್ನ್ ಫೈಲಿಂಗ್ ಮತ್ತು ಅನುಸರಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದು ಜಿಎಸ್‌ಟಿ ಸಂಗ್ರಹಣೆ ಹೆಚ್ಚಳಕ್ಕೆ ದೊಡ್ಡ ಕಾರಣ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದೆ. ರಿಟರ್ನ್ ಫೈಲಿಂಗ್ ಪರ್ಸೆಂಟೇಜ್ ಬಹಳಷ್ಟು ಹೆಚ್ಚಿದೆ, ಅದರೊಂದಿಗೆ ಆರ್ಥಿಕತೆಯೂ ಚುರುಕುಗೊಂಡಿದೆ. ಆರ್ಥಿಕತೆಯು ಸದೃಢವಾಗಿದೆ ಮತ್ತು ಕೋವಿಡ್ ಪರಿಣಾಮ ಕೊನೆಗೊಂಡಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: ವೋಚರ್​ಗಳು ಜಿಎಸ್​ಟಿ ವ್ಯಾಪ್ತಿಗೆ ಬರುವುದಿಲ್ಲ: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.