ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ಇಂದು ಬರೋಬ್ಬರಿ 10.93 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಿದ್ದು, ಕಳೆದ 48 ದಿನಗಳಲ್ಲಿ 1.77 ಕೋಟಿಗೂ ಅಧಿಕ ಡೋಸ್ ನೀಡಿದೆ.
ಪ್ರಮುಖವಾಗಿ 68,38,077 ಆರೋಗ್ಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗಿದ್ದು, 60,22,136 ಮುಂಚೂಣಿ ಕಾರ್ಯಕರ್ತರು,14,95,016 ಡೋಸ್ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 2,18,939 ಡೋಸ್ 45 ವಯಸ್ಸು ಮೇಲ್ಪಟ್ಟವರಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಭಾರತದಿಂದ 47 ದೇಶಗಳಿಗೆ ಕೋವಿಡ್ ಲಸಿಕೆ: ವಿಶ್ವ ನಾಯಕರಿಂದ ನಮೋಗೆ ಧನ್ಯವಾದ
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭಗೊಂಡಿದ್ದು, ಮೊದಲನೇ ಹಂತ ಮುಕ್ತಾಯಗೊಂಡು ಇದೀಗ ಮಾರ್ಚ್ 1ರಿಂದ 2ನೇ ಹಂತದ ಅಭಿಯಾನ ಆರಂಭಗೊಂಡಿದೆ. ಇಲ್ಲಿಯವರೆಗೆ 1,77,11,287 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ.