ETV Bharat / assembly-elections

ಚುನಾವಣಾ ಕಣದಲ್ಲಿ ಅಪ್ಪ-ಮಕ್ಕಳು: ಮತದಾರ ಮಣೆ ಹಾಕಿದ್ದು ಯಾರಿಗೆ?

author img

By

Published : May 13, 2023, 6:47 PM IST

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಪ್ಪ ಮತ್ತು ಮಕ್ಕಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. ಗೆದ್ದವರು ಮತ್ತು ಸೋತವರ ಮಾಹಿತಿ ಇಲ್ಲಿದೆ.

karnataka-assembly-elections-father-and-son-and-daughter-results
ಕಣದಲ್ಲಿ ಅಪ್ಪ-ಮಕ್ಕಳು: ಗೆದ್ದವರಾರು..? ಸೋತವರಾರು..?

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಹೊಸದಲ್ಲ. ಈ ಬಾರಿಯೂ ಕೂಡ ಅಪ್ಪ, ಮಕ್ಕಳು ಚುನಾವಣಾ ಕಣದಲ್ಲಿದ್ದರು. ಅಂತಹ ಕುಟುಂಬ ನಾಯಕರುಗಳಲ್ಲಿ ಯಾರು ಗೆದ್ದರು, ಮತ್ತು ಸೋತವರಾರು ನೋಡೋಣ.

ಶಾಮನೂರು ಶಿವಶಂಕರಪ್ಪ ಮತ್ತು ಎಸ್​.ಎಸ್.ಮಲ್ಲಿಕಾರ್ಜುನ್:​​​ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್​ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಅಜಯ್​​ ಕುಮಾರ್​ ವಿರುದ್ಧ ಸುಮಾರು 27 ಸಾವಿರ ಮತಗೊಳಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಪುತ್ರ ಎಸ್​​.ಎಸ್.ಮಲ್ಲಿಕಾರ್ಜುನ ಅವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದರು. ಈ ಬಾರಿಯ ಚುನಾವಣೆಯಲ್ಲಿ 94,019 ಮತಗಳನ್ನು ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕೆ.ಎಚ್​​.ಮುನಿಯಪ್ಪ ಮತ್ತು ರೂಪಕಲಾ.ಎಂ: ಕೋಲಾರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್​ ಅಭ್ಯರ್ಥಿ ಕೆ.ಎಚ್​​.ಮುನಿಯಪ್ಪ, 73 ಸಾವಿರ ಮತಗಳನ್ನು ಪಡೆದುಕೊಂಡು ಜೆಡಿಎಸ್​​ನ ನಿಸರ್ಗ ರಂಗಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇವರ ಪುತ್ರಿ ರೂಪಕಲಾ.ಎಂ ಅವರು ಕೂಡ ಕೆಜಿಎಫ್​​ ಕ್ಷೇತ್ರದಲ್ಲಿ ಸ್ಪರ್ಧಿಸಿ ದಾಖಲೆಯ 50 ಸಾವಿರ ಮತಗಳಿಂದ ಗೆಲುವಿನ ನಗೆ ಬೀರಿದರು.

ಸೌಮ್ಯ ರೆಡ್ಡಿ ಮತ್ತು ರಾಮಲಿಂಗಾ ರೆಡ್ಡಿ: ಕಾಂಗ್ರೆಸ್​ನ ಹಾಲಿ ಶಾಸಕರಾಗಿರುವ ಇಬ್ಬರೂ ಕ್ರಮವಾಗಿ ಈ ಬಾರಿಯೂ ಜಯನಗರ ಮತ್ತು ಬಿಟಿಎಂ ಲೇಔಟ್​ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಸೌಮ್ಯ ರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ವಿರುದ್ಧ 3 ಸಾವಿರ ಅಂತರದಿಂದ ಗೆದ್ದಿದ್ದಾರೆ. ಬಿಟಿಎಂ ಲೇಔಟ್​​ ಕ್ಷೇತ್ರದ ರಾಮಲಿಂಗಾ ರೆಡ್ಡಿ 68,557 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.

ಎಂ.ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ: ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿದಿದ್ದ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಪ್ರಿಯಾಕೃಷ್ಣ 82,134 ಮತಗಳನ್ನು ಪಡೆದು ಗೆಲವು ಪಡೆದಿದ್ದರೆ, ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಂದೆ ಎಂ.ಕೃಷ್ಣಪ್ಪ ಬಿಜೆಪಿ ಅಭ್ಯರ್ಥಿ ಹೆಚ್​​.ರವೀಂದ್ರ ವಿರುದ್ದ 7 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಹೆಚ್​.ಡಿ.ಕುಮಾರಸ್ವಾಮಿ ಮತ್ತು ನಿಖಿಲ್​​ ಕುಮಾರಸ್ವಾಮಿ: ಜೆಡಿಎಸ್​ನಿಂದ ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ನಿಖಿಲ್​ ಕುಮಾರಸ್ವಾಮಿ ಅವರು ತಮ್ಮ ರಾಜಕೀಯದಲ್ಲಿ ನೆಲೆವೂರಲು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ನಿಖಿಲ್​ ಕುಮಾರಸ್ವಾಮಿ ಅವರು ಕಾಂಗ್ರೆಸ್​​ ಅಭ್ಯರ್ಥಿ ಹೆಚ್​​.ಎ.ಇಕ್ಬಾಲ್​​ ಅನ್ಸಾರಿ ಎದುರು ಸೋತು ನಿರಾಸೆ ಮೂಡಿಸಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್​ ವಿರುದ್ಧ ಗೆದ್ದಿದ್ದಾರೆ.

ಜಿ.ಡಿ.ದೇವೇಗೌಡ ಮತ್ತು ಜಿ.ಡಿ.ಹರೀಶ್​ ​ಗೌಡ: ಮೈಸೂರು ರಾಜಕಾರಣದಲ್ಲಿನ ಹಿರಿಯರಲ್ಲಿ ಒಬ್ಬರಾದ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ ಜಿ.ಟಿ.ಹರೀಶ್​ಗೌಡ ಜೆಡಿಎಸ್​​ ಪಕ್ಷದ ಅಭ್ಯರ್ಥಿಗಳಾಗಿ ಚಾಮುಂಡೇಶ್ವರಿ ಮತ್ತು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಜಿ.ಟಿ.ದೇವೆಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ 1,04,873 ಮತಗಳನ್ನು ಪಡೆದು ಗೆಲುವು ಪಡೆದುಕೊಂಡಿದ್ದರೆ. ಪುತ್ರ ಜಿ.ಡಿ.ಹರೀಶ್​​ಗೌಡ ಕಾಂಗ್ರೆಸ್​​ ಅಭ್ಯರ್ಥಿ ಹೆಚ್​.ಪಿ ಮಂಜುನಾಥ್​ ವಿರುದ್ಧ 2 ಸಾವಿರ ಮತಗಳಿಂದ ಗೆದ್ದಿದ್ದಾರೆ.

ಎ.ಮಂಜು ಮತ್ತು ಮಂಥರ್​​ ಗೌಡ: ಎ.ಮಂಜು ಅವರು ಜೆಡಿಎಸ್​​ ಅಭ್ಯರ್ಥಿಯಾಗಿ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೆ. ಇವರ ಮಗ ಮಂಥರ್​ ಗೌಡ ಅವರು ಮಡಿಕೇರಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಅಪ್ಪಚ್ಚು ರಂಜನ್​ ವಿರುದ್ಧ 4 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಎರಡು ದಶಕಗಳ ಚುನಾವಣಾ ಇತಿಹಾಸದಲ್ಲೇ ಜೆಡಿಎಸ್​ ಅತ್ಯಂತ ಕಳಪೆ ಸಾಧನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.