ETV Bharat / assembly-elections

ಬಿಜೆಪಿಗೆ ನಟ ಸುದೀಪ್‌ ಬೆಂಬಲ: ಕೇಸರಿ ಪಕ್ಷದ ಲೆಕ್ಕಾಚಾರವೇನು? - ಬಿಜೆಪಿ ಮತ್ತು ಕಿಚ್ಚ ಸುದೀಪ್

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ಬೆಂಬಲ ಗಿಟ್ಟಿಸುವ ಪ್ರಯತ್ನದಲ್ಲಿ ಮೊದಲ ಯಶಸ್ಸು ಕಂಡಿದೆ. ಈ ಮೂಲಕ ಅವರ ತಾರಾ ಮೆರುಗು ಮತ್ತು ಸಮುದಾಯದ ಬಲ ಪಡೆದು ಮತ ಸೆಳೆಯವ ಕಾರ್ಯಕ್ಕೆ ಕೈ ಹಾಕಿದೆ.

how-actor-sudeeps-support-helped-bjp-in-karnataka-elections
ಸುದೀಪ್ ತಾರಾ ಮೆರುಗು, ಸಮುದಾಯದ ಬಲ: ಬಿಜೆಪಿ ಲೆಕ್ಕಾಚಾರವೇನು?, ಚುನಾವಣಾ ಮೇಲೆ ಪರಿಣಾಮ ಹೇಗೆ?
author img

By

Published : Apr 5, 2023, 6:34 PM IST

Updated : Apr 5, 2023, 6:43 PM IST

ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಭರ್ಜರಿ ಸಿನಿಮಾ ತಾರೆಗಳ ಮೆರುಗು ತುಂಬಲು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಂದಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ಚಂದನವನದ ಪ್ರಭಾವಿ ನಟ ಕಿಚ್ಚ ಸುದೀಪ್ ಅವರನ್ನು ಸೆಳೆಯುವಲ್ಲಿ ಕಮಲ ಪಾಳಯ ಸಫಲವಾಗಿದೆ. ಪಕ್ಷದ ಆಯ್ದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸುದೀಪ್ ಒಪ್ಪಿಗೆ​ ನೀಡಿದ್ದು, ಚುನಾವಣೆಗೂ ಮುನ್ನ ದೊಡ್ಡ ಶಕ್ತಿ ಲಭಿಸಿರುವ ಲೆಕ್ಕಾಚಾರ ಬಿಜೆಪಿಯದ್ದು. ಎಲ್ಲೆಲ್ಲಿ ಯಾವ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು ಎನ್ನುವ ಕುರಿತು ಸದ್ಯದಲ್ಲೇ ನೀಲನಕ್ಷೆಯನ್ನು ಪಕ್ಷ ಸಿದ್ದಪಡಿಸಲಿದ್ದು, ಅಭ್ಯರ್ಥಿಗಳ ಪರ ನಟ ಪ್ರಚಾರ ನಡೆಸುವುದಂತೂ ಪಕ್ಕಾ ಆಗಿದೆ.

ಇದನ್ನೂ ಓದಿ: 'ಸುದೀಪ್​ಗೆ ಬೆದರಿಕೆ ವಿಚಾರದಲ್ಲಿ ಸರ್ಕಾರ ಸುಮ್ಮನೆ ಕೂರಲ್ಲ': ಡಾ. ಸುಧಾಕರ್

ಇಂದು ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡುವ ಘೋಷಣೆ ಮಾಡುವ ಮೂಲಕ ಪಕ್ಷದ ತಾರಾ ಪ್ರಚಾರಕರ ಪಟ್ಟಿಗೆ ಪ್ರವೇಶ ಪಡೆದಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಮತ್ತವರು ಸೂಚಿಸುವ ಅಭ್ಯರ್ಥಿಗಳ ಪರ ಮತಬೇಟೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ಸುದೀಪ್ ಜನಪ್ರಿಯತೆ ಮತ್ತು ತಾರಾ ವರ್ಚಸ್ಸು ಹಾಗೂ ಸಮುದಾಯದ ಬೆಂಬಲಗಳಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಬಿಜೆಪಿ ಲೆಕ್ಕಾಚಾರವೇನು?: ಕಳೆದ ಕೆಲವು ದಿನಗಳಿಂದ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆತರಲು ಬಿಜೆಪಿ ಕಸರತ್ತು ನಡೆಸುತ್ತಿತ್ತು. ಈ ನಿಟ್ಟಿನಲ್ಲಿ ಕೊನೆಗೂ ಸಚಿವ ಸುಧಾಕರ್ ಮಧ್ಯಸ್ಥಿಕೆಯಲ್ಲಿ ನಡೆದ ಪ್ರಯತ್ನ ಫಲ ನೀಡಿದೆ. ಮುಂದೆ ಪ್ರಚಾರದ ನೀಲ ನಕ್ಷೆ ಕೇಶವಕೃಪಾ, ಜಗನ್ನಾಥ ಭವನದಿಂದ ಅಂತರ ಕಾಯ್ದುಕೊಂಡೇ ಸಿದ್ಧವಾಗಲಿದೆ.

ಸುದೀಪ್ ಕನ್ನಡದ ಟಾಪ್ ನಟರಲ್ಲಿ ಪ್ರಮುಖರು. ದೊಡ್ಡ ಅಭಿಮಾನಿ ಬಳಗ ಇವರಿಗಿದೆ. ಹೀಗಾಗಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸುದೀಪ್ ಪ್ರಚಾರ ನಡೆಸಿದರೂ ಪ್ಲಸ್ ಪಾಯಿಂಟ್ ಆಗುತ್ತೆ ಅನ್ನೋದು ಬಿಜೆಪಿ ಪ್ಲಾನ್. ಇದಕ್ಕೂ ಮೇಲಾಗಿ ಸುದೀಪ್ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದವರು. ನಾಲ್ಕೈದು ಜಿಲ್ಲೆಗಳಲ್ಲಿ ಈ ಸಮುದಾಯ ಸಾಕಷ್ಟು ಪ್ರಭಾವಿಯಾಗಿದೆ. ಇಂತಹ ಜಿಲ್ಲೆಗಳಲ್ಲಿ ಸುದೀಪ್ ಅಲೆ ಬಿಜೆಪಿ ಕಡೆಗೆ ಬೀಸುವಂತೆ ಮಾಡಬಹುದು ಎನ್ನುವುದು ಲೆಕ್ಕಾಚಾರ.

ನಟ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್

15 ಎಸ್​ಟಿ ಮೀಸಲು ಕ್ಷೇತ್ರಗಳು: ವಾಲ್ಮೀಕಿ ಸಮುದಾಯದ ಪ್ರಮುಖರು ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ ಅಂದಾಜು 60 ಲಕ್ಷ ಜನರಿದ್ದಾರೆ. 40-45 ಲಕ್ಷದಷ್ಟು ಮತದಾರರು ಇರಬಹುದು ಎಂಬುದು ಒಂದು ಅಂದಾಜು. ರಾಯಚೂರು, ಬಳ್ಳಾರಿ, ಬೆಳಗಾವಿ, ತುಮಕೂರು, ದಾವಣಗೆರೆ, ಕೊಪ್ಪಳ, ಚಿತ್ರದುರ್ಗದಲ್ಲಿ ಈ ಸಮುದಾಯ ಪ್ರಾಬಲ್ಯ ಹೊಂದಿದೆ. 15 ವಿಧಾನಸಭಾ ಕ್ಷೇತ್ರಗಳು ಮತ್ತು 2 ಲೋಕಸಭಾ ಕ್ಷೇತ್ರಗಳು ಎಸ್​ಟಿಗೆ ಮೀಸಲಿದ್ದು, ಈ ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಸುದೀಪ್​ ರೋಡ್ ಶೋ ನಡೆಸಿದರೂ ಸಾಕು, ಅಭ್ಯರ್ಥಿಗಳ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂಬ ಯೋಜನೆಯನ್ನು ಕಮಲ ಪಕ್ಷ ಹೊಂದಿದೆ.

ಸಿಎಂಗೂ ತಾರಾ ಮೆರುಗು ನೆರವು?: ಮತ್ತೊಂದೆಡೆ, ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತವರು ಕ್ಷೇತ್ರ ಶಿಗ್ಗಾವಿ ಗೆಲುವು ಸುಲಭ ತುತ್ತಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು. ಶಿಗ್ಗಾವಿಯಲ್ಲಿ ಇವರನ್ನು ಕಟ್ಟಿಹಾಕಲು ಮತ್ತು ಪ್ರಬಲ ಎದುರಾಳಿಯನ್ನು ನಿಲ್ಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಯತ್ನಿಸುತ್ತಿವೆ. ಹಾಗಾಗಿ ಸ್ವತಃ ಸಿಎಂ ಕೂಡಾ ಗೆಲ್ಲಲು ಸುದೀಪ್ ನೆರವು ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ.. ಸಿಸಿಬಿ ಹೆಗಲಿಗೆ ಪ್ರಕರಣದ ತನಿಖಾ ಜವಾಬ್ದಾರಿ

ಸುದೀಪ್ ತಾರಾ ಬಲ ಪಡೆದು ಬೊಮ್ಮಾಯಿ ಕ್ಷೇತ್ರದಲ್ಲಿ ಮತಬುಟ್ಟಿ ಗಟ್ಟಿಗೊಳಿಸಿಕೊಳ್ಳಲು ಯೋಜಿಸಿದ್ದಾರೆ. ಮುಖ್ಯಮಂತ್ರಿ ಜೊತೆ ಪ್ರಭಾವಿ ನಾಯಕರ ಕ್ಷೇತ್ರಗಳಿಗೂ ಸುದೀಪ್‌ರನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ. ಸಮುದಾಯದ ನಾಯಕರಾದ ಶ್ರೀರಾಮುಲು, ರಾಜುಗೌಡ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಸಮುದಾಯದ ಪ್ರಭಾವಿ ನಾಯಕರೂ ಕೂಡ ತಮ್ಮ ವರ್ಚಸ್ಸಿನ ಜೊತೆಗೆ ಸುದೀಪ್ ಹೆಸರು ಬಳಸಿ ಹೆಚ್ಚಿನ ಮತಗಳಿಸಲು ಪ್ರಯತ್ನ ನಡೆಸಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಹರಿದಾಡುತ್ತಿವೆ.

ಬೊಮ್ಮಾಯಿ ಸೇರಿದಂತೆ ಯಾವೆಲ್ಲಾ ನಾಯಕರ ಪರವಾಗಿ ಸುದೀಪ್ ಪ್ರಚಾರ ಕಾರ್ಯ ನಡೆಸಬೇಕು. ಯಾವ ಯಾವ ಕ್ಷೇತ್ರದಲ್ಲಿ ರೋಡ್ ಶೋ ನಡೆಸಬೇಕು, ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಬೇಕು ಎನ್ನುವ ಕುರಿತು ಯೋಜನೆ ತಯಾರಾಗುತ್ತಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಪರ ನಾನು ನಿಲ್ಲುತ್ತೇನೆ, ಆದರೆ ಪಕ್ಷ ಸೇರಲ್ಲ: ಸುದೀಪ್ ಸ್ಪಷ್ಟನೆ

Last Updated : Apr 5, 2023, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.