ದೇವನಹಳ್ಳಿ:ವಿದೇಶದಿಂದ ಅಕ್ರಮವಾಗಿ ಬಂದಿದ್ದ 73 ಲಕ್ಷ ಮೌಲ್ಯದ 4.3 ಲಕ್ಷ ಸಿಗರೇಟ್ಗಳನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಗಸ್ಟ್ 12 ರಿಂದ 21ರವರೆಗೂ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ 22 ಸ್ಮಗ್ಲರ್ಸ್ಗಳನ್ನು ಪತ್ತೆ ಮಾಡಲಾಗಿದೆ. ಅವರಿಂದ ವಿದೇಶದಿಂದ ಅಕ್ರಮವಾಗಿ ಕಳ್ಳಸಾಗಣೆಗೆ ಯತ್ನಿಸಿದ ವಿದೇಶಿ ಸಿಗರೇಟ್ ಮತ್ತು ಲ್ಯಾಪ್ ಟಾಟ್ಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು: ವಿಮಾನ ನಿಲ್ದಾಣದಲ್ಲಿ 73 ಲಕ್ಷ ರೂ ಮೌಲ್ಯದ 4.3 ಲಕ್ಷ ಸಿಗರೇಟ್ ಜಪ್ತಿ
Published : Aug 23, 2024, 1:30 PM IST
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4.3 ಲಕ್ಷ ಸಿಗರೇಟ್ ಜಪ್ತಿ (ETV Bharat)
ದುಬೈ, ಬ್ಯಾಂಕಾಕ್, ಮಲೇಷ್ಯಾ, ಸಿಂಗಾಪುರ ಮತ್ತು ಬಹ್ರೇನ್ನಿಂದ ಸ್ಮಗ್ಲರ್ಸ್ಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಅವರಿಂದ 73,30,400 ಮೌಲ್ಯದ 4,31,200 ಸಿಗರೇಟ್ಗಳು ಮತ್ತು 23 ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಪಾನಮತ್ತ ಚಾಲಕರ ವಿರುದ್ಧ ಕಾರ್ಯಾಚರಣೆ: ತಡರಾತ್ರಿ 167 ಪ್ರಕರಣ ದಾಖಲು - Drunk and Drive