ETV Bharat / snippets

ಶಿವಮೊಗ್ಗ: ವಾಕಿಂಗ್ ಮಾಡುವಾಗ ಹೃಯಾಘಾತದಿಂದ MBBS ವಿದ್ಯಾರ್ಥಿ ಸಾವು

author img

By ETV Bharat Karnataka Team

Published : 12 hours ago

ಹೃದಯಾಘಾತದಿಂದ MBBS ವಿದ್ಯಾರ್ಥಿ ಸಾವು
ಹೃದಯಾಘಾತದಿಂದ MBBS ವಿದ್ಯಾರ್ಥಿ ಸಾವು (ETV Bharat)

ಶಿವಮೊಗ್ಗ: ವಾಕಿಂಗ್ ಮಾಡುತ್ತಿದ್ದ MBBS ವಿದ್ಯಾರ್ಥಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಪೃಥ್ವಿರಾಜ್ (20) ಮೃತಪಟ್ಟವರು. ಬುಧವಾರ ಸಂಜೆ ನಗರದ ಪ್ರವಾಸಿ ಮಂದಿರದ ಬಳಿ ವಾಕಿಂಗ್ ಮಾಡುವಾಗ ವಿದ್ಯಾರ್ಥಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಮೋಹನ್ ಎಂಬುವರು ಪ್ರವಾಸಿ ಮಂದಿರ ಮುಂಭಾಗದಲ್ಲಿಯೇ ಇರುವ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಆದರೆ ಮಾರ್ಗಮಧ್ಯೆಯೇ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ದೃಢಪಡಿಸಿದ್ದಾರೆ. ಪೃಥ್ವಿರಾಜ್ ಅವರ ತಂದೆ ಮುತ್ತಣ್ಣ ಅವರು ನಗರದಲ್ಲಿ ಔಷಧ ಸಗಟು ವ್ಯಾಪಾರ ಮಾಡಿಕೊಂಡಿದ್ದಾರೆ. ಪೃಥ್ವಿರಾಜ್ ನಿಧನಕ್ಕೆ ರೋಟರಿ ಕ್ಲಬ್ ಹಾಗೂ ಔಷಧ ವ್ಯಾಪಾರಿಗಳ ಸಂಘದ ಸದಸ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಆಸ್ಪತ್ರೆಗೆ ರವಾನಿಸಲು ಅನಿಲ್​ ಅಂಬಾನಿಯ ಪ್ರೈವೇಟ್​ ಜೆಟ್​​ ತರಿಸಿದ್ದ ಅಮಿತಾಭ್​ ಬಚ್ಚನ್​​ - Amitabh Aishwarya

ETV Bharat Logo

Copyright © 2024 Ushodaya Enterprises Pvt. Ltd., All Rights Reserved.