ಮೈಸೂರು:ಪತ್ನಿಯನ್ನು ಕೊಲೆಗೈದ ಪತಿಗೆ ಮೈಸೂರಿನ ಏಳನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಮೈಸೂರಿನ ಬನ್ನಿಮಂಟಪದ ನಿವಾಸಿ ರಾಜೇಶ್ ಶಿಕ್ಷೆಗೆ ಗುರಿಯಾದವ.
ರಾಧಾರನ್ನು(ಕೊಲೆಯಾದವರು) ವಿವಾಹವಾಗಿದ್ದ ರಾಜೇಶ್ ಆಕೆಯ ಬಗ್ಗೆ ಅನುಮಾನ ಹೊಂದಿದ್ದ. ಇದೇ ವಿಚಾರಕ್ಕೆ ನಿತ್ಯ ಗಲಾಟೆ ನಡೆಯುತ್ತಿತ್ತು. 2022ರ ಆಗಸ್ಟ್ 27ರಂದು ಮನೆಯಲ್ಲಿ ಮಲಗಿದ್ದ ರಾಧಾ ಅವರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ಧ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಎನ್.ಆರ್.ಠಾಣೆ ಪೊಲೀಸರು ರಾಜೇಶ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ರಮೇಶ ಅವರು ಅಪರಾಧಿಗೆ "7 ವರ್ಷ ಶಿಕ್ಷೆಯೊಂದಿಗೆ 1 ಸಾವಿರ ರೂ. ದಂಡ" ವಿಧಿಸಿದ್ದಾರೆ.