ಮರಳು ಕಲೆಯಲ್ಲಿ ಅರಳಿದ ಶ್ರೀರಾಮನ ವಿಶ್ವದ ಅತಿದೊಡ್ಡ ಆಕೃತಿ: ನೂತನ ವಿಶ್ವ ದಾಖಲೆ ನಿರ್ಮಿಸಿದ ಮರಳು ಕಲಾವಿದ ಸುದರ್ಶನ್
Published : Jan 22, 2024, 12:22 PM IST
ಪುರಿ/ಅಯೋಧ್ಯೆ: ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು, ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಭಗವಾನ್ ಶ್ರೀರಾಮನ ಅತಿದೊಡ್ಡ ಮರಳು ಆಕೃತಿಯನ್ನು ರಚಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸುದರ್ಶನ್ ಅವರು ಅಯೋಧ್ಯೆಯಲ್ಲಿ ಮರಳಿನಿಂದ ರಾಮಮಂದಿರದ 500 ಚಿಕ್ಕ ಪ್ರತಿಕೃತಿಗಳನ್ನು ರಚಿಸಿದ್ದಾರೆ. ಅವರು 23 ಅಡಿ ಎತ್ತರ ಮತ್ತು 55 ಅಡಿ ಅಗಲದ ಶ್ರೀರಾಮನ ಮರಳು ಶಿಲ್ಪವನ್ನು ರಚಿಸಿದ್ದಾರೆ. ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಮರಳು ಶಿಲ್ಪವನ್ನು ಸಹ ರಚಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮರಳು ಕಲಾವಿದ ಸುದರ್ಶನ್ ಅವರಿಗೆ ವಿಶ್ವ ದಾಖಲೆ ಪ್ರಮಾಣಪತ್ರವನ್ನು ನೀಡಿದರು. ಸ್ವತಃ ಯೋಗಿ ಆದಿತ್ಯನಾಥ್ ಸ್ಯಾಂಡ್ ಆರ್ಟ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವಿಶ್ವ ದಾಖಲೆಯ ಸಾಧನೆಗಾಗಿ ಯೋಗಿ ಆದಿತ್ಯನಾಥ್ ಅವರು ಸುದರ್ಶನ್ ಪಟ್ನಾಯಕ್ ಅವರನ್ನು ಅಭಿನಂದಿಸಿದರು. ಭಗವಾನ್ ಶ್ರೀರಾಮನ ಆಕೃತಿಯನ್ನು ಸಾವಿರಾರು ಭಕ್ತರು ವೀಕ್ಷಿಸಿ ಸಂತಸ ಪಟ್ಟರು.
''ಈ ಶುಭ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿನಮ್ರ ವಿನಂತಿಗೆ ನಾವೆಲ್ಲರೂ ಸ್ಪಂದಿಸೋಣ ಮತ್ತು ನಮ್ಮ ಮನೆಗಳಲ್ಲಿ ರಾಮ ಜ್ಯೋತಿಯಿಂದ ಬೆಳಗಿಸೋಣ. ಅಯೋಧ್ಯೆಯಲ್ಲಿ ರಚಿಸಲಾದ ನನ್ನ ಮರಳು ಕಲೆಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತದೆ. ಜೈ ಶ್ರೀ ರಾಮ್'' ಎಂದು ಮರಳು ಕಲಾವಿದ ಸುದರ್ಶನ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಆಹ್ವಾನ ಅನಿರೀಕ್ಷಿತ, ರಾಮನೇ ಕರೆದಂತಿದೆ': ಅಯೋಧ್ಯೆಯಲ್ಲಿ 'ರಾಮಾಯಣ' ಪಾತ್ರಧಾರಿ ಸೀತೆ