ದಕ್ಷಿಣಕಾಶಿ ನಂಜನಗೂಡಿನಲ್ಲಿ ಕಪಿಲಾರತಿ : ವಿಡಿಯೋ - KAPILARATHI
Published : Dec 14, 2024, 3:28 PM IST
|Updated : Dec 14, 2024, 3:55 PM IST
ಮೈಸೂರು : ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯದ ಸಮೀಪ ಕಪಿಲಾ ನದಿಯ ಸ್ನಾನಘಟ್ಟದ ಬಳಿ ಸಾಂಪ್ರದಾಯಿಕವಾಗಿ ಅದ್ಧೂರಿ ಕಪಿಲಾರತಿ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಗಳಿಂದ ನಡೆಯಿತು. ಭಕ್ತರು ಸ್ವಯಂ ಪ್ರೇರಿತರಾಗಿ ಈ ಕಪಿಲಾರತಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಉತ್ತರ ಭಾರತದ ಗಂಗಾ ಆರತಿ ರೀತಿಯಲ್ಲಿ ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿಯ ದಡದ ಮೇಲೆ ಕಪಿಲಾರತಿ ಜರುಗಿತು. ಭಕ್ತರು ಹಾಗೂ ಯುವ ಬ್ರಿಗೇಡ್ನ ಸದಸ್ಯರು ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದು, ನದಿಯ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಿದ್ದ ವೇದಿಕೆಯಲ್ಲಿ ದೀಪ ಹಚ್ಚುವ ಮೂಲಕ ವಚನಾನಂದ ಸ್ವಾಮೀಜಿ ಹಾಗೂ ಸ್ಥಳೀಯ ಸ್ವಾಮೀಜಿಗಳು ಕಪಿಲಾರತಿಗೆ ಚಾಲನೆ ನೀಡಿದರು.
ಕಪಿಲಾರತಿಯ ಸಂದರ್ಭದಲ್ಲಿ ದಕ್ಷಿಣಕಾಶಿ ನಂಜನಗೂಡಿನ ಕಪಿಲಾ ನದಿಯ ಇತಿಹಾಸ ತಿಳಿಸುವ ಲೇಸರ್ ಷೋ ನಡೆಸಲಾಯಿತು. ಕಪಿಲಾ ನದಿಯ ಸ್ನಾನಘಟ್ಟದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ, ಕಪಿಲಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ : ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನಿಗೆ ₹1.12 ಕೋಟಿ ಕಾಣಿಕೆ - Nanjundeshwar Hundi Counting - NANJUNDESHWAR HUNDI COUNTING