ಕರ್ನಾಟಕ

karnataka

ETV Bharat / technology

ಹಬ್ಬದ ಸೀಸನ್​ನಲ್ಲಿ ಟೊಯೊಟಾ ರೂಮಿಯಾನ್ ಫೆಸ್ಟಿವ್​​ ಎಡಿಷನ್​ ಬಿಡುಗಡೆ, ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

Toyota Rumion SUV: ಟೊಯೊಟಾ ತನ್ನ ಟೊಯೊಟಾ ರೂಮಿಯಾನ್‌ನ ಸೀಮಿತ ಫೆಸ್ಟಿವ್​​ ಆವೃತ್ತಿಯನ್ನು ಹಬ್ಬದ ಸೀಸನ್​ಗಾಗಿ ಬಿಡುಗಡೆ ಮಾಡಿದೆ. ಇದಕ್ಕಾಗಿ ಕಂಪನಿಯು TGA ಪ್ಯಾಕೇಜ್ ಅನ್ನು ಪರಿಚಯಿಸಿದೆ.

TOYOTA RUMION FEATURES  TOYOTA RUMION PRICE  TOYOTA RUMION SUV
ಹಬ್ಬದ ಸೀಸನ್​ನಲ್ಲಿ ಟೊಯೊಟಾ ರೂಮಿಯಾನ್ ಫೆಸ್ಟಿವ್​​ ಎಡಿಷನ್​ ಬಿಡುಗಡೆ (Toyota Kirloskar Motor)

By ETV Bharat Tech Team

Published : 4 hours ago

Toyota Rumion SUV: ಕಾರು ತಯಾರಕ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಜನಪ್ರಿಯ ಟೊಯೊಟಾ ರೂಮಿಯಾನ್‌ನ ಲಿಮಿಟೆಟ್​ ಫೆಸ್ಟಿವ್​ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಹಬ್ಬದ ಋತುವಿನಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಈ ವಿಶೇಷ ಆವೃತ್ತಿಯನ್ನು ಹೊರ ತಂದಿದೆ.

ಈ ಕಾರಿನ ವಿಶೇಷತೆವೇನು?:ಮಾಹಿತಿಯ ಪ್ರಕಾರ, ಈ SUV ಅನ್ನು TGA ಪ್ಯಾಕೇಜ್‌ನೊಂದಿಗೆ ಸುಧಾರಿಸಲಾಗಿದೆ. ಇದಕ್ಕೆ ಹಲವು ಸೊಗಸಾದ ಅಪ್​ಡೇಟ್​ ಅನ್ನು ನೀಡಲಾಗಿದೆ. ಇದು ಅದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಮುಖ್ಯವಾಗಿ ಹಿಂಬಾಗಿಲಿನ ಅಲಂಕಾರ, ಮಡ್​ ಫ್ಲಾಪ್‌ಗಳು, ರಿಯರ್​ ಬಂಪರ್ ಗಾರ್ನಿಶ್ ಮತ್ತು ಡೀಲಕ್ಸ್ ಕಾರ್ಪೆಟ್ ಮ್ಯಾಟ್‌ಗಳನ್ನು ರೈಟ್​ ಡ್ರೈವ್ ಮಾದರಿಗೆ ಪ್ರತ್ಯೇಕವಾಗಿ ಒಳಗೊಂಡಿರುತ್ತದೆ.

ಇದರ ಹೊರತಾಗಿ, ಇತರ ವೈಶಿಷ್ಟ್ಯಗಳೆಂದರೆ ಹೆಡ್‌ಲ್ಯಾಂಪ್ ಗಾರ್ನಿಶ್, ನಂಬರ್ ಪ್ಲೇಟ್ ಗಾರ್ನಿಶ್, ಕ್ರೋಮ್ ಡೋರ್ ವೈಸರ್, ರೂಫ್ ಎಡ್ಜ್ ಸ್ಪಾಯ್ಲರ್ ಮತ್ತು ಗಾರ್ನಿಶ್‌ನೊಂದಿಗೆ ಬಾಡಿ ಸೈಡ್ ಮೋಲ್ಡಿಂಗ್, ಇದು ಈ ಕಾರಿಗೆ ವಿಶಿಷ್ಟ ನೋಟವನ್ನು ನೀಡುತ್ತದೆ. ಮಾರುತಿ ಸುಜುಕಿ ಎರ್ಟಿಗಾವನ್ನು ಆಧರಿಸಿ, ಟೊಯೊಟಾ ರೂಮಿಯಾನ್ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಎಸ್, ಜಿ, ವಿ ಮತ್ತು ಎಸ್ ಸಿಎನ್‌ಜಿ, ಬೆಲೆಗಳು ರೂ 10.44 ಲಕ್ಷದಿಂದ ರೂ 13.73 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.

ಟೊಯೋಟಾ ರೂಮಿಯಾನ್ ಪವರ್‌ಟ್ರೇನ್: ವಿಶೇಷ ಹಬ್ಬದ ಸೀಸನ್ ಆವೃತ್ತಿಯ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಅಸ್ತಿತ್ವದಲ್ಲಿರುವ 1.5-ಲೀಟರ್ K ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ಟಾರ್ಕ್ ಕನ್ವರ್ಟರ್​ ಆಟೋಮೆಟಿಕ್​ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಪರ್ಯಾಯ ಇಂಧನ ಆಯ್ಕೆಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ, ಈ ಸವೆನ್​ ಸೀಟರ್​ ಪೆಟ್ರೋಲ್ ಮತ್ತು CNG ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ. ಇದು ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತದೆ.

ಇದರ ಏಕೈಕ ಪೆಟ್ರೋಲ್ ಆವೃತ್ತಿಯು 6,000 rpm ನಲ್ಲಿ 101 bhp ಮತ್ತು 4,400 rpm ನಲ್ಲಿ 136.8 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ಇಂಧನದಲ್ಲಿ ಅದೇ ಎಂಜಿನ್ 5,500 rpm ನಲ್ಲಿ 86.63 bhp ಮತ್ತು 4,200 rpm ನಲ್ಲಿ 121.5 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಪೆಟ್ರೋಲ್ ಆವೃತ್ತಿಯು 20.51 km/ಲೀಟರ್ ಮೈಲೇಜ್ ನೀಡುತ್ತದೆ ಮತ್ತು CNG ಆವೃತ್ತಿಯು 26.11 km/kg ಮೈಲೇಜ್ ನೀಡುತ್ತದೆ.

ಟೊಯೋಟಾ ರೂಮಿಯಾನ್​ ವೈಶಿಷ್ಟ್ಯಗಳು: ರೂಮಿಯಾನ್ ಕಾರ್ಯಕ್ಷಮತೆಯ ವಿಷಯದಲ್ಲಿ ಮಾತ್ರವಲ್ಲದೆ ವೈಶಿಷ್ಟ್ಯಗಳ ವಿಷಯದಲ್ಲಿಯೂ ಅತ್ಯುತ್ತಮವಾಗಿದೆ. ಇದು 7-ಇಂಚಿನ ಸ್ಮಾರ್ಟ್‌ಪ್ಲೇ ಕಾಸ್ಟ್ ಟಚ್‌ಸ್ಕ್ರೀನ್ ಆಡಿಯೊ ಸಿಸ್ಟಮ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಅನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಇದು ಟೊಯೋಟಾ ಐ-ಕನೆಕ್ಟ್ ಅನ್ನು ಸಹ ಒಳಗೊಂಡಿದೆ. ಇದು ಕ್ಲೈಮೆಟ್​ ಕಂಟ್ರೋಲ್​, ಲಾಕ್ ಮತ್ತು ಅನ್ಲಾಕಿಂಗ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರೂಮಿಯಾನ್‌ನ ಸುರಕ್ಷತಾ ವೈಶಿಷ್ಟ್ಯಗಳು:ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ, ಈ SUV ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್ ಹೋಲ್ಡ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ಲಾ ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಈ ವಿಶೇಷ ಆವೃತ್ತಿಯು ಸಮಗ್ರ Toyota Genuine Accessories (TGA) ಪ್ಯಾಕೇಜ್ ಅನ್ನು ಹೊಂದಿದೆ. ಈ ಕೊಡುಗೆಯು ಎಲ್ಲಾ ಅಧಿಕೃತ ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಅಕ್ಟೋಬರ್ 31, 2024 ರ ವರೆಗೆ ಮಾನ್ಯವಾಗಿರುತ್ತದೆ.

ಓದಿ:ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಜೀಪ್ ಮೆರಿಡಿಯನ್ SUV: ಇದರ ಬೆಲೆ, ವೈಶಿಷ್ಟ್ಯಗಳೇನು?

ABOUT THE AUTHOR

...view details