HUAWEI Mate 70 Series Launch:ಹುವಾವೇ ನಿಂದ ಹೊಸ ಸ್ಮಾರ್ಟ್‌ಫೋನ್‌ಗಳು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಚೀನಿ ಕಂಪನಿಯು ತನ್ನ 'ಮೇಟ್ 70' ಸರಣಿಯ ಬಿಡುಗಡೆ ದಿನಾಂಕವನ್ನು ಅಂತಿಮವಾಗಿ ಬಹಿರಂಗಪಡಿಸಿದೆ. ಕಂಪನಿ ತನ್ನ 'Huawei Mate Brand' ಸಮಾರಂಭದಲ್ಲಿ ಇವುಗಳನ್ನು ಪರಿಚಯಿಸುವುದಾಗಿ ಬಹಿರಂಗಪಡಿಸಿದೆ. ಅಷ್ಟೇ ಅಲ್ಲ, ಹುವಾವೇ ಕಂಪನಿಯು ಇಂದೇ 'ಮೇಟ್ 70' ಸೀರಿಸ್ ಮೊಬೈಲ್ಗಳ ಪ್ರಿ-ಬುಕಿಂಗ್ ಸಹ ಆರಂಭಿಸಿದೆ.
'Mate 70' ಮತ್ತು 'Mate 70 Pro' ಮೊಬೈಲ್‌ಗಳು 12GB RAM ಮತ್ತು 1TB ಸ್ಟೋರೇಜ್ಗಳು ಹೊಂದಿವೆ. ಕಂಪನಿಯು ಈ ಮೊಬೈಲ್ ಅನ್ನು ಒಬ್ಸಿಡಿಯನ್ ಬ್ಲಾಕ್, ಸ್ನೋ ವೈಟ್, ಸ್ಪರ್ಸ್ ಗ್ರೀನ್, ಹಯಸಿಂತ್ ಪರ್ಪಲ್ ಮುಂತಾದ ನಾಲ್ಕು ಕಲರ್ಗಳಲ್ಲಿ ತರಲಿದೆ. 'ಮೇಟ್ 70 ಪ್ರೊ ಪ್ಲಸ್' ಮೊಬೈಲ್ ಇಂಕ್ ಬ್ಲ್ಯಾಕ್, ಫೆದರ್ ವೈಟ್, ಗೋಲ್ಡ್ ವಿತ್ ಸಿಲ್ವರ್ ಮತ್ತು ಬ್ಲೂ ಕಲರ್ ಆಯ್ಕೆಗಳಲ್ಲಿ 16GB+1TB ಆವೃತ್ತಿಯಲ್ಲಿ ಲಭ್ಯವಿದೆ. ಸಿರೀಸ್ 'ಮೇಟ್ 70 ಆರ್ಎಸ್' ಅನ್ನು ಸಹ ಒಳಗೊಂಡಿದೆ.
'ಮೇಟ್ 70 ಪ್ರೊ' ಮೊಬೈಲ್ 6.88 ಇಂಚಿನ ಕ್ವಾಡ್-ಕರ್ವ್ಡ್ ಸ್ಕ್ರೀನ್ ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1.5K ರೆಸಲ್ಯೂಶನ್ ಒಳಗೊಂಡಿದೆ. ಇದು ToF 3D ಫೇಸ್ ರಿಕಾಗ್ನೇಶನ್ ಸಪೋರ್ಟ್ನೊಂದಿಗೆ ಎಂಟ್ರಿ ಕೊಡಲಿದೆ. ಕಂಪನಿಯು ಈ ಕ್ವಾಡ್-ಕರ್ವ್ಡ್ ಸ್ಕ್ರೀನ್ನೊಂದಿಗೆ ಹೆಚ್ಚಿನ ಮಾದರಿಗಳನ್ನು ತರಲಿದೆ. ಆದರೂ ಸಹ ಸ್ಟ್ಯಾಂಡರ್ಡ್ ಮಾಡೆಲ್ ಫ್ಲಾಟ್ ಸ್ಕ್ರೀನ್ನೊಂದಿಗೆ ಮುಂದು ಸಾಗಲಿದೆ.