Coca Cola AD for Christmas: ಇನ್ನೇನು ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದೆ. ಭಾರತದಲ್ಲಿ ಈ ಹಬ್ಬ ಅಷ್ಟಕ್ಕಷ್ಟೇ ನಡೆದರೂ.. ಹೊರ ದೇಶಗಳಲ್ಲಿ ಈ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹೀಗಾಗಿ ಎಂದಿನಂತೆ ಈ ಬಾರಿಯೂ ಕೋಕಾಕೋಲಾ ತನ್ನ ಕ್ರಿಸ್ಮಸ್ ಜಾಹೀರಾತವನ್ನು ಪ್ರಸ್ತುತ ಪಡಿಸಿದೆ. ಆನ್ಲೈನ್ನಲ್ಲಿ ಬಿಡುಗಡೆ ಮಾಡಿರುವ ಈ ಜಾಹೀರಾತಿಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮಾಹಿತಿ ಪ್ರಕಾರ.. 15 ಸೆಕೆಂಡ್ಗಳ ಈ ಆ್ಯಡ್ 1995 ಐಕಾನಿಕ್ ‘ಹಾಲಿಡೇಸ್ ಆರ್ ಕಮಿಂಗ್’ ಪ್ರಚಾರವನ್ನು ರೀಕ್ರಿಯೆಟ್ ಮಾಡಿದೆ. ಈ ಆ್ಯಡ್ನಲ್ಲಿ ಫೆಸ್ಟಿವ್ ಹಾಲಿಡೇಸ್ ಸಮಯದಲ್ಲಿ ಹಿಮಭರಿತದಿಂದ ಕೂಡಿದ ನಗರಕ್ಕೆ ಸೋಡಾವನ್ನು ತಲುಪಿಸುವ ಕೋಕಾ-ಕೋಲಾ ಟ್ರಕ್‌ಗಳ ಸಾಗಣೆಯನ್ನು ಇದರಲ್ಲಿ ನೋಡಬಹುದಾಗಿದೆ. ಆದರೆ ಈ ಜಾಹೀರಾತು ನೋಡುಗರನ್ನು ಅಷ್ಟಾಗಿ ಆಕರ್ಷಿಸಲಿಲ್ಲ. ಇದಕ್ಕೆ ಮುಖ್ಯ ಕಾರಣ ಕಂಪನಿಯು ಇದನ್ನು AI ನೊಂದಿಗೆ ರಚಿಸಿದೆ.
ಕಂಪನಿಯ 'ರಿಯಲ್ ಮ್ಯಾಜಿಕ್ ಎಐ' ಸಾಫ್ಟ್‌ವೇರ್ ಬಳಸಿ ಜಾಹೀರಾತನ್ನು ರಚಿಸಲಾಗಿದೆ ಎಂದು ಕೋಕಾ-ಕೋಲಾ ಹೇಳಿದೆ. ಈ ಜಾಹೀರಾತಿನಲ್ಲಿನ ಪಾತ್ರಗಳು ಮತ್ತು ಹಬ್ಬದ ದೃಶ್ಯಗಳು ಎಐ ರಚಿತವಾದ ದೃಶ್ಯಗಳಾಗಿವೆ. ಜಾಗತಿಕ ಪಾನೀಯ ದೈತ್ಯ ಜಾಹೀರಾತು ತನ್ನ ಸಾಂಪ್ರದಾಯಿಕ ಬ್ರ್ಯಾಂಡ್ ಪರಂಪರೆಯನ್ನು ಭವಿಷ್ಯದ ತಂತ್ರಜ್ಞಾನದೊಂದಿಗೆ ಹೊಂದಿಸಲಾಗಿದೆ ಎಂದು ಹೇಳುತ್ತಿದೆ.