BSNL announces 7 In All: ಬಿಎಸ್‌ಎನ್‌ಎಲ್ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾಗಿದೆ. ಕೋಟ್ಯಂತರ ಬಳಕೆದಾರರು ಈ ಸಂಪರ್ಕವನ್ನು ಬಳಸುತ್ತಿರುವುದು ಗೊತ್ತಿರುವ ಸಂಗತಿ. ಈಗ ಬಿಎಸ್‌ಎನ್‌ಎಲ್ ಹೊಸ 4G ಸೇವೆಗಳನ್ನು ಪರಿಚಯಿಸಿದೆ. BSNL ದೇಶದ ಜನರಿಗೆ 5G ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಹೊಸ ಲೋಗೋ ಪರಿಚಯಿಸಿದರು.
ರಾಷ್ಟ್ರೀಯ ಧ್ವಜವನ್ನು ಪ್ರತಿಬಿಂಬಿಸುವ ಕೇಸರಿ ಬಣ್ಣವನ್ನು ಮುಂಚೂಣಿಯಲ್ಲಿಟ್ಟುಕೊಂಡು ತ್ರಿವರ್ಣ ಮಾದರಿಯಲ್ಲಿ ಲೋಗೋ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಕೇಂದ್ರ ಸಚಿವರು 7 ಹೊಸ ಯೋಜನೆಗಳನ್ನು ಪರಿಚಯಿಸಿದರು. ಅಲ್ಲದೇ, ಲೋಗೋದಲ್ಲಿನ 'ಕನೆಕ್ಟಿಂಗ್ ಇಂಡಿಯಾ' ಅನ್ನು 'ಕನೆಕ್ಟಿಂಗ್ ಭಾರತ್' ಎಂದು ಬದಲಾಯಿಸಲಾಗಿದೆ.
ಈ ಹಿಂದೆ ಇತರ ಕಂಪನಿಗಳ ರೀಚಾರ್ಜ್ ಯೋಜನೆಗಳಲ್ಲಿ ಬೆಲೆ ಏರಿಕೆಯಿಂದಾಗಿ ಜನರು BSNL ನೆಟ್‌ವರ್ಕ್‌ಗೆ ಬದಲಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಹಲವೆಡೆ ನೆಟ್‌ವರ್ಕ್ ಸಮಸ್ಯೆ ತಲೆದೋರಿದೆ. ಕಂಪನಿಯು ಈ ಸಮಸ್ಯೆಗಳನ್ನು ನಿಭಾಯಿಸುತ್ತಿದೆ ಮತ್ತು ದೇಶದಲ್ಲಿ 5G ಸೇವೆಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿದೆ. ಬಿಎಸ್‌ಎನ್‌ಎಲ್ ಖಾಸಗಿ ಸ್ಪರ್ಧಿಗಳಿಗಿಂತ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ನೀಡುತ್ತಿದ್ದರೂ, ನೆಟ್‌ವರ್ಕ್ ಸಮಸ್ಯೆಗಳನ್ನು ಸರಿಪಡಿಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
7 ಹೊಸ ಯೋಜನೆಗಳೇನು?:
ಸ್ಪ್ಯಾಮ್ ಕರೆಗಳನ್ನು ಪರಿಶೀಲಿಸುವುದು: ಜನರಿಗೆ ಸ್ಥಿರವಾದ ಮೊಬೈಲ್ ಸೇವೆಯನ್ನು ಒದಗಿಸಲು BSNL ಸ್ಪ್ಯಾಮ್ ಕರೆಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವ ತಂತ್ರಜ್ಞಾನವನ್ನು ಪರಿಚಯಿಸಿದೆ. ಬಳಕೆದಾರರು ಈ ಮೂಲಕ ಅನಗತ್ಯ ಕರೆಗಳನ್ನು ತಪ್ಪಿಸಬಹುದು.
ಉಚಿತ ವೈ-ಫೈ ರೋಮಿಂಗ್ ಸೇವೆ:ಬಿಎಸ್‌ಎನ್‌ಎಲ್ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರು ದೇಶದಲ್ಲಿ ಎಲ್ಲಿಗೆ ಹೋದರೂ ಬಿಎಸ್‌ಎನ್‌ಎಲ್ ಹಾಟ್‌ಸ್ಪಾಟ್ ಅನ್ನು ಉಚಿತವಾಗಿ ಪಡೆಯಬಹುದು. ಹೀಗಾಗಿ, ನೀವು ಅನಗತ್ಯವಾಗಿ ಮೊಬೈಲ್ ಡೇಟಾವನ್ನು ಕಳೆದುಕೊಳ್ಳುವುದಿಲ್ಲ.
ಫೈಬರ್ ಆಧಾರಿತ ಟಿವಿ ಸೇವೆ: ಫೈಬರ್ ಬ್ರಾಡ್‌ಬ್ಯಾಂಡ್ ಮಾಲೀಕರು 500 ಟಿವಿ ಚಾನೆಲ್‌ಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಇದರಲ್ಲಿನ ಸೂಪರ್ ಆಫರ್ ಏನೆಂದರೆ BSNL ಫೈಬರ್ ಬ್ರಾಡ್‌ಬ್ಯಾಂಡ್ ಡೇಟಾದ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.